#Pandarapura | ಆಷಾಡ ಏಕಾದಶಿಗೆ ಪಂಢರಪುರಕ್ಕೆ ಹರಿದು ಬಂದ ಭಕ್ತ ಸಾಗರ |ವಿಠ್ಠಲ ನಾಮವೊಂದೇ ಉಸಿರಲಿ |

July 3, 2023
1:19 PM

ದೇವರ ನಾಮ ಸ್ಮರಣೆಯಿಂದ ಅನೇಕ ರೋಗಗಳಿಂದ ಮುಕ್ತಿ ಹೊಂದಬಹುದೆಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ.. ಆದರೇ ಇದೀಗ ವೈಜ್ಞಾನಿಕವಾಗಿ ಸಾಬೀತಾಗಿದೆ ನೋಡಿ..

Advertisement
Advertisement

‘ವಿಠ್ಠಲ ವಿಠ್ಠಲ’ ಎಂದು ನಾಮ ಸ್ಮರಣೆ ಮಾಡಿದರೆ ರಕ್ತದೊತ್ತಡ ಕಡಿಮೆಯಾಗಿ, ಹೃದ್ರೋಗಿಗಳ ಆರೋಗ್ಯ ನಿಯಂತ್ರಣಕ್ಕೆ ಬರುತ್ತದೆ.. ಪುಣೆಯ ವೇದ ವಿಜ್ಞಾನ ಕೇಂದ್ರ ನೂರಾರು ಹೃದ್ರೋಗಿಗಳ ಮೇಲೆ ಪ್ರಯೋಗ ಮಾಡಿ ಈ ವಿಷಯವನ್ನು ಸಾಭೀತು ಪಡಿಸಿದೆ. ಎರಡು ಮಹಾಪ್ರಾಣ ಹಾಗೂ ಎರಡು ಅಲ್ಪಪ್ರಾಣ ಹೊಂದಿರುವ ಶಬ್ದವಾದ್ದರಿಂದ ಹೃದಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ವೇದ ವಿಜ್ಞಾನ ಕೇಂದ್ರ ಹೇಳಿದೆ. ಈ ಕುರಿತು ಏಷಿಯನ್ ಜನರಲ್ ಆಫ್ ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್ನೇಟಿವ್ ಮೀಡಿಯಾ ಎಂಬ ಅಂತರಾಷ್ಟ್ರೀಯ ನಿಯತಕಾಲಿಕೆ ಪ್ರಬಂಧ ಪ್ರಕಟಿಸಿದೆ..

Advertisement

ವಿಠ್ಠಲ ಎಂಬ ನಾಮದಲ್ಲಿ ಅಪರೂಪದ ಶಕ್ತಿಯಿದೆ.. ವಿಠ್ಠಲ ನಾಮದ ಸ್ಪಂದನೆ ಅರ್ಥಾತ್ ಸ್ವರ ಶಾಸ್ತ್ರದ ಬಗ್ಗೆಯೂ ಕೆಲ ಸಂಶೋಧನೆಗಳನ್ನು ನಡೆಸಲಾಗಿದ್ದೂ. ಈ ಶಬ್ದ ಉಚ್ಛರಿಸುವಾಗ “ಠ್ಠ” ಎಂಬ ಅಕ್ಷರದಿಂದ ಹೊರಡುವ ಶಕ್ತಿ ನೇರವಾಗಿ ಹೃದಯದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ.. ಎಂಬುದು ಅಧ್ಯಯನದಿಂದ ಕಂಡುಬಂದಿದೆ. ಹೃದಯಸಂಬಂಧಿ ರೋಗವಿರುವ ಭಕ್ತರು ವಿಠ್ಠಲ ನಾಮಸ್ಮರಣೆ ಮಾಡುತ್ತ 250 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಪಂಢರಪುರಕ್ಕೆ ಆಗಮಿಸಿ ಜಾತ್ರೆ ಪೂರ್ಣಗೊಳಿಸಿ ಮರಳುತ್ತಾರೆ.

 

Advertisement

‘ನಾಮ’ ಎಂದರೇನು? ದೇವರ ಅಸಂಖ್ಯ ಹೆಸರುಗಳಲ್ಲೊಂದು. ‘ಸ್ಮರಣೆ’ ಎಂದರೆ ‘ಧ್ಯಾನ’ ಅಥವಾ ನೆನಪು. ‘ಜಪ’ ಎಂದರೆ ಯಾವುದೇ ಒಂದು ಅಕ್ಷರ, ಶಬ್ದ, ಮಂತ್ರ ಅಥವಾ ವಾಕ್ಯವನ್ನು ಮತ್ತೆ ಮತ್ತೆ ಹೇಳುತ್ತಾ ಇರುವುದು. ‘ಜಕಾರೋ ಜನ್ಮ ವಿಚ್ಛೇದಕ: ಪಕಾರೋ ಪಾಪನಾಶಕ: ಎಂದರೆ ಯಾವುದು ಜನ್ಮ ಜನ್ಮಾಂತರಗಳ ಪಾಪವನ್ನು ನಾಶ ಮಾಡಿ ಜನನ ಮರಣಗಳ ಚಕ್ರದಿಂದ ನಮ್ಮನ್ನು ಬಿಡಿಸುತ್ತದೆಯೋ ಅದುವೇ ‘ಜಪ’. ಒಟ್ಟಿನಲ್ಲಿ ‘ನಾಮ ಜಪ’ವೆಂದರೆ ದೇವರ ನಾಮವನ್ನು ಈಶ್ವರ ಪ್ರಾಪ್ತಿಯ ಸಾಧನೆಯೆಂದು ಪುನಃ ಪುನಃ ಹೇಳುತ್ತಿರುವುದು.

ನಾಮಜಪ / ನಾಮಸ್ಮರಣೆಯ ವೈಶಿಷ್ಟ್ಯಗಳು : ವೇದಗಳಿಗಿಂತ ನಾಮವು ಶ್ರೇಷ್ಠವಾಗಿದೆ. ಏಕೆಂದರೆ ಓಂಕಾರವೆಂಬ ನಾಮದಿಂದಲೇ ವೇದಗಳ ಉತ್ಪತ್ತಿಯಾಗಿದೆ. ವೇದಗಳು, ಉಪನಿಷತ್ತುಗಳು, ಗೀತೆ ಇತ್ಯಾದಿಗಳ ಅಭ್ಯಾಸವು ಎಲ್ಲರಿಂದಲೂ ಸಾಧ್ಯವಾಗದು. ಆದರೆ ನಾಮದ ಅಭ್ಯಾಸವನ್ನು ಯಾರೂ ಮಾಡಬಲ್ಲರು. ಅದರಿಂದ ಸತತವಾಗಿ ದೇವರೊಂದಿಗೆ ಅನುಸಂಧಾನ ಹೊಂದಬಲ್ಲರು. ಪರಮೇಶ್ವರನ ರೂಪವು ತೇಜ ತತ್ವಕ್ಕೆ ಸಂಬಂಧಿಸಿದ್ದರೆ, ಆತನ ನಾಮವು ತೇಜ ತತ್ವಕ್ಕಿಂತಲೂ ಶ್ರೇಷ್ಠವಾದ ಆಕಾಶ ತತ್ವಕ್ಕೆ ಸಂಬಂಧಿಸಿದೆ.

Advertisement

ಅನಾದಿಕಾಲದಿಂದಲೂ ನಾವು ಆಚರಿಸುತ್ತಿರುವ, ಪಾಲಿಸುತ್ತಿರುವ ಸನಾತನ ಧರ್ಮದಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಕಾರಣಗಳು ಹಾಗು ಅರ್ಥಗಳು ಒಳಗೊಂಡಿರುತ್ತವೆ. ಪರಮಾತ್ಮನ ಶಕ್ತಿಯ ಮುಂದೆ ಆಗದು ಎಂಬುದು ಏನೂ ಇಲ್ಲ..

(ಸಂಗ್ರಹ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಶಬ್ದ ಮಾಲಿನ್ಯದ ಅನಾಹುತಗಳು… | ಜೋರು ಶಬ್ದ ಇಟ್ಟುಕೊಂಡು ಟಿವಿ ನೋಡುವುದು, ಹಾಡು ಕೇಳುವುದು ಮಕ್ಕಳಿಗೆ ಅಪಾಯಕಾರಿ | 2 ರೋಗಗಳ ಅಪಾಯ ಇದೆ ಎನ್ನುತ್ತಾರೆ ತಜ್ಞರು….. |
July 8, 2024
1:37 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಏರುತ್ತಿರುವ ಡೆಂಗ್ಯು ಪ್ರಕರಣ | ಬರೋಬ್ಬರಿ 7 ಸಾವಿರ ಗಡಿದಾಟಿದ ಕೇಸ್‌ | ಸಾವಿನ ಸಂಖ್ಯೆಯಲ್ಲೂ ಹೆಚ್ಚಳ
July 8, 2024
1:27 PM
by: The Rural Mirror ಸುದ್ದಿಜಾಲ
ನಿಮ್ಮ ಕನಸಿನ ಕೃಷಿ ಭೂಮಿಯ ವಿನ್ಯಾಸ ಮಾಡುವ ಇಚ್ಚೆ ಇದೆಯೇ..? | ಫಾರ್ಮ್ ವಿನ್ಯಾಸದ ಉದ್ದೇಶವೇನು?
July 8, 2024
12:03 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಮಳೆ, ಪ್ರವಾಹ, ಭೂಕುಸಿತ | ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ | ರಾಜ್ಯದ ಡ್ಯಾಂಗಳ ನೀರಿನ ಲೆಕ್ಕ ಏನು?
July 8, 2024
11:32 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror