Advertisement
ಸುದ್ದಿಗಳು

ಕೋಲಾರದಲ್ಲಿ ಹಲಸಿನ ತೋಟ | 1600 ಕ್ಕೂ ಹೆಚ್ಚು ಹಲಸಿನ ಗಿಡ | ಪರ್ಯಾಯ ಕೃಷಿಯತ್ತ ಚಿತ್ತ |

Share

ಕರ್ನಾಟಕದ ಆಯಾ ಜಿಲ್ಲೆಯ ಕೃಷಿಕರು ಹವಾಮಾನಕ್ಕೆ ಅನುಗುಣವಾಗಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಅಡಿಕೆ ಮುಖ್ಯ ಬೆಳೆಯಾದರೆ, ಕೋಲಾರದಲ್ಲಿ ಟೊಮೆಟೋ ಹಾಗೂ ಮಾವು ಕೃಷಿ. ಏಷ್ಯಾದಲ್ಲೆ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಕೋಲಾರ ಇದೀಗ  ಅತೀ ದೊಡ್ಡ ಹಲಸಿನ ತೋಟವನ್ನೂ ಹೊಂದಿದೆ. ಪರ್ಯಾಯ ಕೃಷಿಯೂ ಈಗ ಗಮನ ಸೆಳೆಯುತ್ತಿದೆ.

Advertisement
Advertisement

1974 ರಲ್ಲಿ ಎಂ.ಹೆಚ್ ಮರೀಗೌಡ ಎಂಬುವರು ಕೋಲಾರ ನಗರದ ಟಮಕ ಬಳಿ ಹಲಸಿನ ಗಿಡಗಳನ್ನು ನೆಟ್ಟಿದ್ದರು. ಅದರಲ್ಲೂ ರಾಜ್ಯದ ವಿವಿಧ ಭಾಗದಿಂದ ತಳಿಗಳನ್ನು ತಂದು ಸುಮಾರು 1600 ಕ್ಕೂ ಹೆಚ್ಚು ಹಲಸಿನ ಗಿಡಗಳನ್ನು ಬೆಳೆಸಿದ್ದಾರೆ. ನಂತರ ಈ ತೋಟದಲ್ಲಿ 2009 ರಲ್ಲಿ ತೋಟಗಾರಿಕಾ ಮಹಾ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದೆ. ಸುಮಾರು 40 ಎಕರೆ ಪ್ರದೇಶದಲ್ಲಿ  ಹಲಸಿನ ತೋಟವಿದೆ, 1600ಕ್ಕೂ ಹೆಚ್ಚು ಹಲಸು ಮರಗಳು ಇಲ್ಲಿವೆ.

Advertisement

ಹಲಸಿನ ಜಾಮ್, ಪಲ್ಪಿ ಜ್ಯೂಸ್, ಹಲಸಿನ ಹಲ್ವಾ, ಬಿರಿಯಾನಿ, ಕಬಾಬ್ ಸೇರಿದಂತೆ ತರಕಾರಿ ಮಾಂಸವಾಗಿ ಹಲವು ಖಾದ್ಯಗಳನ್ನು ತಯಾರು ಮಾಡುವ ಮೂಲಕ ಹಲಸಿನ ಮಹತ್ವವನ್ನು ಹೆಚ್ಚಿಸಲಾಗಿದೆ. ಹಲಸಿನ ಸಂಸ್ಕರಣ ಘಟಕ ಸ್ಥಾಪನೆ ಮಾಡಿ, ಹಲಸಿನ ವಿವಿಧ ಖಾದ್ಯಗಳನ್ನು, ವಿವಿಧ ಉತ್ಪನ್ನಗಳನ್ನು ಇಲ್ಲೇ ತಯಾರು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಕೃಷಿಕರು ಇದೇ ಮಾದರಿಯಲ್ಲಿ ಪ್ರಮುಖ ಕೃಷಿಯ ಜೊತೆಗೆ ಪರ್ಯಾಯ ಕೃಷಿಯತ್ತಲೂ ಅದರಲ್ಲೂ ಆಹಾರ ಬೆಳೆಯತ್ತಲೂ ಚಿಂತನೆ ನಡೆಸಲು ಈಗ ಸಕಾಲವಾಗಿದೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಸ ಎಸೆದರೂ “ದಂಡ” | ರಥಬೀದಿಯಲ್ಲಿ ಮಲಗಿದರೂ “ದಂಡ” |

ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಪಾವಿತ್ರ್ಯತೆ ಹೇಗೆಲ್ಲಾ ಉಳಿಸಬಹುದು..ಒಮ್ಮೆ ಯೋಚಿಸಿ ನೋಡಿ..

2 hours ago

ಬೆಳೆಗಳಿಗೆ ಕೀಟನಾಶಕ ಸಿಂಪಡಣೆಗೆ ಡ್ರೋನ್‌ ಬಳಕೆ | 1 ವರ್ಷಕ್ಕೆ ಅನುಮೋದನೆಯನ್ನು ವಿಸ್ತರಿಸಿದ ಸರ್ಕಾರ

ಕೃಷಿಯಲ್ಲಿ ಡ್ರೋನ್‌ ಬಳಕೆಯ ಬಗ್ಗೆ ಸರ್ಕಾರ ಒಂದು ವರ್ಷದ ಅವಧಿಗೆ ಅನುಮೋದನೆ ವಿಸ್ತರಣೆ…

3 hours ago

ಆತ್ಮನಿರ್ಭರ ಗೋವಂಶ | ಮಲೆನಾಡಗಿಡ್ಡ ಹಸು ನಮಗೆ ಹಲವು ಪಾಠ ಕಲಿಸಬಲ್ಲವು..!

ಮಲೆನಾಡು ಗಿಡ್ಡ ತಳಿ ವಿಶೇಷತೆ ಹಾಗೂ ಭಾರತೀಯ ಗೋತಳಿ ಉಳಿವಿಗೆ ಪ್ರಯತ್ನ ನಡೆಯಬೇಕಿದೆ.

4 hours ago

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ(Loksabha Elections 2024) ತೆರೆ ಬಿದ್ದಿದೆ. ಇನ್ನು ಫಲಿತಾಂಶಕ್ಕಾಗಿ ಕಾಯೋದೊಂದೇ …

1 day ago

ಕೊಕ್ಕೋ ಧಾರಣೆ ಇಳಿಕೆ | ವಾರದಲ್ಲಿ 100 ರೂಪಾಯಿ ಕುಸಿತ ಕಂಡ ಕೊಕ್ಕೋ ಧಾರಣೆ |

ಕೊಕ್ಕೋ ಧಾರಣೆ ವಾರದಲ್ಲಿ 100 ರೂಪಾಯಿ ಇಳಿಕೆಯಾಗಿದೆ.

1 day ago