ಅಸ್ಸಾಂ ಪ್ರವಾಹ ಪರಿಸ್ಥಿತಿ ಗಂಭೀರ | ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 52ಕ್ಕೆ ಏರಿಕೆ | ಸಂತ್ರಸ್ಥರಾದ 21 ಲಕ್ಷಕ್ಕೂ ಹೆಚ್ಚು ಜನ |

July 5, 2024
12:33 PM
ಅಸ್ಸಾಂ ಪ್ರವಾಹದಲ್ಲಿ ಶುಕ್ರವಾರ ಕೂಡಾ 6 ಮಂದಿ ಬಲಿಯಾಗಿದ್ದು ಈ ಮೂಲಕ ಒಟ್ಟು 52 ಮಂದಿ ಬಲಿಯಾದಂತಾಗಿದೆ. ಸುಮಾರು 21 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಬಾಧಿತರಾಗಿ ಸಂತ್ರಸ್ತರಾಗಿದ್ದಾರೆ.

 ಅಸ್ಸಾಂ ರಾಜ್ಯದಲ್ಲಿ ಕಳೆದ 3-4 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಸ್ಸಾಂ ಪ್ರವಾಹದಲ್ಲಿ ಶುಕ್ರವಾರ ಕೂಡಾ 6 ಮಂದಿ ಬಲಿಯಾಗಿದ್ದು ಈ ಮೂಲಕ ಒಟ್ಟು 52 ಮಂದಿ ಬಲಿಯಾದಂತಾಗಿದೆ. ಸುಮಾರು 21 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಬಾಧಿತರಾಗಿ ಸಂತ್ರಸ್ತರಾಗಿದ್ದಾರೆ. ಭೂಕುಸಿತದಿಂದಾಗಿ ಅರುಣಾಚಲ ಪ್ರದೇಶದ ಕನಿಷ್ಠ ಏಳು ಜಿಲ್ಲೆಗಳು ಸಂಪರ್ಕ ಕಡಿತಗೊಂಡಿವೆ. ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಮಳೆಯ ಕಾರಣದಿಂದ ಭೂಕುಸಿತ ಮತ್ತು ಪ್ರವಾಹದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಬಲಿಯಾಗಿದ್ದಾರೆ.

Advertisement
Advertisement

Advertisement

ಅಸ್ಸಾಂ ರಾಜ್ಯದಲ್ಲಿ ಕಳೆದ 3-4 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದು, 29 ಜಿಲ್ಲೆಗಳಲ್ಲಿ ಅಸ್ಸಾಂನಲ್ಲಿ 16.50 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಒಟ್ಟು 52 ಮಂದಿ ಬಲಿಯಾಗಿದ್ದಾರೆ  ಮತ್ತು ಎರಡನೇ ಅಲೆಯ ಪ್ರವಾಹದಿಂದ 29 ಜಿಲ್ಲೆಗಳಲ್ಲಿ ಸುಮಾರು 21.13 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ಪ್ರವಾಹ ವರದಿಯ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6 ಜನರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 52 ಕ್ಕೆ ಏರಿದೆ.

ಪಶ್ಚಿಮ ಅಸ್ಸಾಂನ ಧುಬ್ರಿ ಮತ್ತು ಉತ್ತರ ಅಸ್ಸಾಂನ ದರ್ರಾಂಗ್ ಹೆಚ್ಚು ಪೀಡಿತ ಜಿಲ್ಲೆಗಳಾಗಿವೆ. ಅಲ್ಲಿ 6.49 ಲಕ್ಷ ಮತ್ತು 1.9 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ASDMAವಕ್ತಾರರು ತಿಳಿಸಿದ್ದಾರೆ.

Advertisement

31 ಪ್ರಾಣಿಗಳು ಬಲಿ : ಮಳೆಯ  ಪರಿಣಾಮವು 1,307.49 ಚದರ ಕಿ.ಮೀ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಕಷ್ಟ ತಂದಿದೆ.  ಅಲ್ಲಿ ಪ್ರವಾಹದ ನೀರು 31 ಪ್ರಾಣಿಗಳನ್ನು ಕೂಡಾ ಬಲಿ ಪಡೆದುಕೊಂಡಿದೆ.  30 ಹಂದಿ , ಜಿಂಕೆ ಮತ್ತು ಒಂದು ನೀರುನಾಯಿ ಮರಿ. ಅರಣ್ಯ ಸಿಬ್ಬಂದಿಗಳು 82 ಪ್ರಾಣಿಗಳನ್ನು ರಕ್ಷಿಸಿದ್ದಾರೆ, ಅವುಗಳಲ್ಲಿ ಎರಡು ತಿಂಗಳ ಘೇಂಡಾಮೃಗ ಎಂದು ವರದಿಯಾಗಿದೆ.

Advertisement

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಬುಧವಾರ ತಡರಾತ್ರಿ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಸಭೆ ನಡೆಸಿ ನಿಯಮಾನುಸಾರ ಪರಿಹಾರ ನೀಡುವಲ್ಲಿ ಉದಾರತೆ ತೋರುವಂತೆ, ಆಗಸ್ಟ್ 15 ರೊಳಗೆ ನಿಯಮಾನುಸಾರ ಎಲ್ಲ ಪುನರ್ವಸತಿ ಕೆಲಸಗಳನ್ನು ಪೂರ್ಣಗೊಳಿಸಿ ಮತ್ತು ಕೇಂದ್ರ ಕಚೇರಿಗೆ ನಿಖರವಾದ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದರು.

Source : ANI

Advertisement

 

Advertisement

Heavy rainfall has once again wreaked havoc in Assam, causing severe flooding in various parts of the state. The incessant rain has led to overflowing rivers and breached embankments, displacing thousands of people from their homes. The situation is particularly dire in rural areas, where many villages have been completely submerged under water. Rescue operations are underway to evacuate the affected population and provide them with shelter and relief materials. The state government has issued warnings to residents to remain vigilant and take necessary precautions to stay safe during this time of crisis.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವರ್ಷಪೂರ್ತಿ ಜನರಿಗೆ ಮಾವು, ಹಲಸು..! | ಆಹಾರ ಭದ್ರತೆಯ ಕಡೆಗೆ ಹೆಜ್ಜೆ | ಹೊಸ ರೀತಿಯ ಹಣ್ಣುಗಳ ಪರಿಚಯಕ್ಕೆ ಇಳಿದ ಬಾಂಗ್ಲಾದೇಶ |
July 7, 2024
9:08 PM
by: ದ ರೂರಲ್ ಮಿರರ್.ಕಾಂ
ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಪುತ್ತೂರು ‘ಗೋಪಣ್ಣ’ ಸ್ಮೃತಿ ಗೌರವ ಪ್ರದಾನ
July 7, 2024
3:23 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-07-2024 | ರಾಜ್ಯದ ಕೆಲವು ಕಡೆ ಸಾಮಾನ್ಯ, ಕೆಲವು ಕಡೆ ಉತ್ತಮ ಮಳೆ ನಿರೀಕ್ಷೆ |
July 7, 2024
2:43 PM
by: ಸಾಯಿಶೇಖರ್ ಕರಿಕಳ
ಬೆಳೆಗಾರರೇ, ಅಡಿಕೆ ಹಳದಿ ಎಲೆರೋಗದ ಕಾರಣದಿಂದ ಆತ್ಮಹತ್ಯೆ ಮಾಡಬೇಡಿ | ಹಾಗೆಂದು ಹೊಸ ಹೊಸ ಗೊಬ್ಬರದ ಆಮಿಷಗಳಿಗೂ ಬಲಿಯಾಗಬೇಡಿ…!
July 7, 2024
12:22 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror