ಅಸ್ಸಾಂ ರಾಜ್ಯದಲ್ಲಿ ಕಳೆದ 3-4 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಸ್ಸಾಂ ಪ್ರವಾಹದಲ್ಲಿ ಶುಕ್ರವಾರ ಕೂಡಾ 6 ಮಂದಿ ಬಲಿಯಾಗಿದ್ದು ಈ ಮೂಲಕ ಒಟ್ಟು 52 ಮಂದಿ ಬಲಿಯಾದಂತಾಗಿದೆ. ಸುಮಾರು 21 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಬಾಧಿತರಾಗಿ ಸಂತ್ರಸ್ತರಾಗಿದ್ದಾರೆ. ಭೂಕುಸಿತದಿಂದಾಗಿ ಅರುಣಾಚಲ ಪ್ರದೇಶದ ಕನಿಷ್ಠ ಏಳು ಜಿಲ್ಲೆಗಳು ಸಂಪರ್ಕ ಕಡಿತಗೊಂಡಿವೆ. ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಮಳೆಯ ಕಾರಣದಿಂದ ಭೂಕುಸಿತ ಮತ್ತು ಪ್ರವಾಹದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಬಲಿಯಾಗಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ ಕಳೆದ 3-4 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದು, 29 ಜಿಲ್ಲೆಗಳಲ್ಲಿ ಅಸ್ಸಾಂನಲ್ಲಿ 16.50 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಒಟ್ಟು 52 ಮಂದಿ ಬಲಿಯಾಗಿದ್ದಾರೆ ಮತ್ತು ಎರಡನೇ ಅಲೆಯ ಪ್ರವಾಹದಿಂದ 29 ಜಿಲ್ಲೆಗಳಲ್ಲಿ ಸುಮಾರು 21.13 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ಪ್ರವಾಹ ವರದಿಯ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6 ಜನರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 52 ಕ್ಕೆ ಏರಿದೆ.
ಪಶ್ಚಿಮ ಅಸ್ಸಾಂನ ಧುಬ್ರಿ ಮತ್ತು ಉತ್ತರ ಅಸ್ಸಾಂನ ದರ್ರಾಂಗ್ ಹೆಚ್ಚು ಪೀಡಿತ ಜಿಲ್ಲೆಗಳಾಗಿವೆ. ಅಲ್ಲಿ 6.49 ಲಕ್ಷ ಮತ್ತು 1.9 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ASDMAವಕ್ತಾರರು ತಿಳಿಸಿದ್ದಾರೆ.
31 ಪ್ರಾಣಿಗಳು ಬಲಿ : ಮಳೆಯ ಪರಿಣಾಮವು 1,307.49 ಚದರ ಕಿ.ಮೀ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಕಷ್ಟ ತಂದಿದೆ. ಅಲ್ಲಿ ಪ್ರವಾಹದ ನೀರು 31 ಪ್ರಾಣಿಗಳನ್ನು ಕೂಡಾ ಬಲಿ ಪಡೆದುಕೊಂಡಿದೆ. 30 ಹಂದಿ , ಜಿಂಕೆ ಮತ್ತು ಒಂದು ನೀರುನಾಯಿ ಮರಿ. ಅರಣ್ಯ ಸಿಬ್ಬಂದಿಗಳು 82 ಪ್ರಾಣಿಗಳನ್ನು ರಕ್ಷಿಸಿದ್ದಾರೆ, ಅವುಗಳಲ್ಲಿ ಎರಡು ತಿಂಗಳ ಘೇಂಡಾಮೃಗ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಬುಧವಾರ ತಡರಾತ್ರಿ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಸಭೆ ನಡೆಸಿ ನಿಯಮಾನುಸಾರ ಪರಿಹಾರ ನೀಡುವಲ್ಲಿ ಉದಾರತೆ ತೋರುವಂತೆ, ಆಗಸ್ಟ್ 15 ರೊಳಗೆ ನಿಯಮಾನುಸಾರ ಎಲ್ಲ ಪುನರ್ವಸತಿ ಕೆಲಸಗಳನ್ನು ಪೂರ್ಣಗೊಳಿಸಿ ಮತ್ತು ಕೇಂದ್ರ ಕಚೇರಿಗೆ ನಿಖರವಾದ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದರು.
Source : ANI
Heavy rainfall has once again wreaked havoc in Assam, causing severe flooding in various parts of the state. The incessant rain has led to overflowing rivers and breached embankments, displacing thousands of people from their homes. The situation is particularly dire in rural areas, where many villages have been completely submerged under water. Rescue operations are underway to evacuate the affected population and provide them with shelter and relief materials. The state government has issued warnings to residents to remain vigilant and take necessary precautions to stay safe during this time of crisis.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…