ಅಡಿಕೆ ಕಳ್ಳಸಾಗಾಣಿಕೆ ತಡೆಗೆ ಅಸ್ಸಾಂ ಸಂಸದ ಒತ್ತಾಯ | ಪ್ರಧಾನಿಗಳ ಮಧ್ಯಪ್ರವೇಶಕ್ಕೆ ಮನವಿ

February 21, 2024
10:31 PM
ಬರ್ಮಾ ಅಡಿಕೆ  ಕಳ್ಳಸಾಗಣೆ ತಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮನವಿ ಮಾಡಿದ್ದಾರೆ.

ಮ್ಯಾನ್ಮಾರ್‌ನಿಂದ ಈಶಾನ್ಯ ರಾಜ್ಯದ ವಿವಿಧ ಕಡೆಗಳಿಗೆ ಬರ್ಮಾ ಅಡಿಕೆ  ಕಳ್ಳಸಾಗಣೆ ಮಾಡುವ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮನವಿ ಮಾಡಿದ್ದಾರೆ.

Advertisement
Advertisement

ಮಂಗಳವಾರ ಪ್ರಧಾನಮಂತ್ರಿ ಅವರಿಗೆ ಬರೆದ ಪತ್ರದಲ್ಲಿ, ಮಿಜೋರಾಂ ಮತ್ತು ಮಣಿಪುರದಲ್ಲಿ ಭಾರತ-ಮ್ಯಾನ್ಮಾರ್ ಗಡಿಯ  ಮೂಲಕ ಅತಿಯಾದ ಕಳ್ಳಸಾಗಾಣಿಕೆ ನಡೆಯುತ್ತಿದೆ. ನಿರಂತರ ಕಳ್ಳಸಾಗಾಣಿಕೆ ತಡೆಯಾಗದ ಬಗ್ಗೆ ಗೌರವ್ ಗೊಗೊಯ್ ಕಳವಳ ವ್ಯಕ್ತಪಡಿಸಿದ್ದಾರೆ. ಕಳ್ಳಸಾಗಾಣಿಕೆ ಮೂಲಕ ಬಂದ ಅಡಿಕೆಯು ನಾಗಾಲ್ಯಾಂಡ್‌ ಮೊದಲಾದ ದಾರಿಗಳ ಮೂಲಕ ಕಾನ್ಪುರ, ಲಕ್ನೋದಲ್ಲಿನ ಗುಟ್ಕಾ ಉದ್ಯಮಗಳಿಗೆ ವಿತರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಸ್ಸಾಂನ ಮೆರಪಾನಿ ಗಡಿಯಲ್ಲಿ ಅಡಿಕೆ ತುಂಬಿದ ಲಾರಿಗಳು ಪ್ರವೇಶ ಮಾಡುತ್ತಿದೆ. ಅಡಿಕೆ ಮಾತ್ರವಲ್ಲದೆ  ಹೆರಾಯಿನ್, ಅಫೀಮು ಸೇರಿದಂತೆ ಇತರ ಮಾದಕ ವಸ್ತುಗಳನ್ನೂ ಅಕ್ರಮವಾಗಿ ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಸಂಸದರು ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ಪರಿಹರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಂಸದ ಗೌರವ್ ಗೊಗೊಯ್  ಹೇಳಿದರು. ಗಡಿ ಭದ್ರತೆಯನ್ನು ಬಲಪಡಿಸುವುದು, ಕಣ್ಗಾವಲು ಕ್ರಮಗಳನ್ನು ಹೆಚ್ಚಿಸುವುದು ಮತ್ತು ಕಳ್ಳಸಾಗಾಣಿಕೆ ಜಾಲಗಳಿಗೆ ಕಡಿವಾಣ ಹಾಕುವ ಅಗತ್ಯ ಇದೆ, ಇದಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದರು ಪ್ರಧಾನಿಗಳನ್ನು ಒತ್ತಾಯಿಸಿದರು.

Congress Lok Sabha MP from Assam Gaurav Gogoi, has called for Prime Minister Narendra Modi’s intervention to address the issue of smuggling Burma arecanut and other Drugs.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group