ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |

May 20, 2025
4:17 PM
ಅಸ್ಸಾಂ ರೈಫಲ್ಸ್, ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್, ಚಂಫೈ ಅವರ ಸಹಯೋಗದೊಂದಿಗೆ ಮಿಜೋರಾಂನ ಚಂಫೈ ಜಿಲ್ಲೆಯ ಟ್ಲಾಂಗ್ಸಾಮ್‌ನಿಂದ 1.02 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಅಡಿಕೆಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ಅಸ್ಸಾಂ ರೈಫಲ್ಸ್‌ ಹೇಳಿದೆ.  (ANI)

ಅಸ್ಸಾಂನ ಚಂಪೈ ಜಿಲ್ಲೆಯ ಚುಂಗ್ಟೆ ಗ್ರಾಮದ ಬಳಿ ಕಾಡಿನಲ್ಲಿ ಶೇಖರಿಸಿದ್ದ ಅಡಿಕೆಯನ್ನು ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್ ವಶಪಡಿಸಿಕೊಂಡಿದೆ.  ಖಚಿತ ಮಾಹಿತಿಯ ಆಧಾರದ ಮೇಲೆ ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್ ನಡೆಸಿದ ದಾಳಿಯಲ್ಲಿ 327 ಚೀಲ ಅಡಿಕೆಯನ್ನು ವಶಪಡಿಸಿಕೊಂಡಿದೆ. ಸುಮಾರು 1.83 ಕೋಟಿ ಮೌಲ್ಯದ  ಅಡಿಕೆ ವಶಕ್ಕೆ ಪಡೆಯಲಾಗಿದೆ ಎಂದು ಅಸ್ಸಾಂ ರೈಫಲ್ಸ್‌ ಹೇಳಿದೆ.

ಅಸ್ಸಾಂ ರೈಫಲ್ಸ್, ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್, ಚಂಫೈ ಅವರ ಸಹಯೋಗದೊಂದಿಗೆ ಮಿಜೋರಾಂನ ಚಂಫೈ ಜಿಲ್ಲೆಯ ಟ್ಲಾಂಗ್ಸಾಮ್‌ನಿಂದ 1.02 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಅಡಿಕೆಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ಅಸ್ಸಾಂ ರೈಫಲ್ಸ್‌ ಹೇಳಿದೆ.

ಟ್ಲಾಂಗ್ಸಾಮ್, ಚಂಫೈ, ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್, ಚಂಫೈನ ಸಾಮಾನ್ಯ ಪ್ರದೇಶದಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟದ ಬಗ್ಗೆ ನಿಗಾ ಇರಿಸಲಾಗಿತ್ತು. ಹೀಗಾಗಿ ಮೇ.2  ರ ಕಾರ್ಯಾಚರಣೆಯಲ್ಲಿ ಲಾರಿಯೊಂದರಲ್ಲಿ 187 ಚೀಲ ಅಕ್ರಮ ಅಡಿಕೆ ಪತ್ತೆಯಾಗಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಸಹ ಬಂಧಿಸಲಾಯಿತು. ವಶಪಡಿಸಿಕೊಂಡ ಕಳ್ಳಸಾಗಣೆ, ವ್ಯಕ್ತಿ ಮತ್ತು ವಾಹನವನ್ನು ಚಂಫೈನ ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್‌ಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಬೃಹತ್‌ ಪ್ರಮಾಣದ ಅಡಿಕೆ ಪತ್ತೆಯಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror