ಬಾಹ್ಯಾಕಾಶಕ್ಕೆ(Space) ಗಗನಯಾತ್ರಿಗಳು(Astonauts) ಹೋಗೋದು ಅಂದ್ರೆ ಹೆಮ್ಮೆಯ ವಿಷಯ. ಆದರೆ ಕಲ್ಪನಾ ಚಾವ್ಲ(Kalpana Chawla)ಆ ದುರ್ಘಟನೆ ನೆನೆಸಿದಾಗ ಮೈಯೆಲ್ಲಾ ಜುಂ ಅನ್ನಿಸುತ್ತದೆ. ಇದೀಗ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್(Sunita Williams) ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ -ISSನಲ್ಲಿ ಸಿಲುಕಿಕೊಂಡಿದ್ದಾರೆ. ತಾಂತ್ರಿಕ(Technical) ಸಮಸ್ಯೆಗೆ ಸಿಲುಕಿರುವ ಬಾಹ್ಯಾಕಾಶ ನೌಕೆಯನ್ನು ಎಂಜಿನಿಯರ್‌ಗಳು ಸರಿಪಡಿಸುವ ಕಾರ್ಯ ಮಾಡುತ್ತಿದ್ದಾರೆ.ಈ ಇಬ್ಬರು ಗಗನಯಾತ್ರಿಗಳು ಭೂಮಿಗೆ ಹಿಂದಿರುಗುವ ಖಚಿತವಾದ ದಿನಾಂಕ ಇನ್ನೂ ನಿಗದಿಯಾಗಿಲ್ಲ, ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ವಿವಿಧ ಯಾಂತ್ರಿಕ ಸಮಸ್ಯೆಗಳಿಂದಾಗಿ ಅವರ ವಾಪಸಾತಿಯನ್ನು ಮುಂದೂಡಲಾಗಿದೆ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.
ಕಕ್ಷೆಯಲ್ಲಿರುವ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಎಂಟು ದಿನಗಳನ್ನು ಕಳೆಯಲು ಗಗನಯಾತ್ರಿಗಳು ನಿರ್ಧರಿಸಿದ್ದರು. ಈ ಸಂಬಂಧ ಅವರು ಜೂನ್ 6 ರಂದು ISS ಅನ್ನು ತಲುಪಿದ್ದರು. ಇಪ್ಪತ್ತು ದಿನಗಳ ನಂತರ, NASA ಮತ್ತು ಬೋಯಿಂಗ್ ಮುಂದಾಳತ್ವದ ಬಾಹ್ಯಾಕಾಶ ತಜ್ಞರು, ಸ್ಟಾರ್ಲೈನರ್ ಕ್ರ್ಯೂ ಫ್ಲೈಟ್ ಟೆಸ್ಟ್ ಬಾಹ್ಯಾಕಾಶ ನೌಕೆಯನ್ನು ಭೂಮಿಗೆ ವಾಪಸ್ ಕರೆತರುವ ಪ್ರಯತ್ನದಲ್ಲಿದ್ದಾರೆ. ಅಂದುಕೊಂಡಂತೆ ಬಾಹ್ಯಾಕಾಶಯಾನಿಗಳು, ನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ.
ಸಣ್ಣ ಸಮಸ್ಯೆ ಇದೆ ಬೇಗ ಪರಿಹರಿಸುತ್ತೇವೆ: ಬೋಯಿಂಗ್ ವಕ್ತಾರರ ಪ್ರಕಾರ, ಈ ಹಿಂದೆ ಸ್ಥಗಿತಗೊಳ್ಳುತ್ತಿದ್ದ ಐದು ಥ್ರಸ್ಟರ್‌ಗಳಲ್ಲಿ ನಾಲ್ಕು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಇದರರ್ಥ 27 ರಲ್ಲಿ ಕೇವಲ ಒಂದು ಥ್ರಸ್ಟರ್ ಪ್ರಸ್ತುತ ಆಫ್‌ಲೈನ್‌ನಲ್ಲಿದೆ. ಇದು ರಿಟರ್ನ್ ಮಿಷನ್‌ಗೆ ಸಮಸ್ಯೆಯನ್ನು ಪ್ರಸ್ತುತಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಅಂದರೆ ಸ್ಟಾರ್ಲೈನರ್ ಕ್ರ್ಯೂ ಫ್ಲೈಟ್ ಟೆಸ್ಟ್ ಬಾಹ್ಯಾಕಾಶ ನೌಕೆಯಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ವಿಜ್ಞಾನಿಗಳು ಹಾಗೂ ತಂತ್ರಜ್ಞರು ಕಾರ್ಯ ನಿರತರಾಗಿದ್ದಾರೆ. ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಪ್ರಕಾರ, “ನಾವು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ನಮ್ಮ ಮಿಷನ್ ನಿರ್ವಹಣಾ ತಂಡದ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇವೆ, ಯಶಸ್ವಿಯಾಗುತ್ತೇವೆ ಎಂದು ಹೇಳಿದ್ದಾರೆ.