ಚೀನಾ ಬಾಲಕನ ಸಾಧನೆಯನ್ನು ಮೀರಿಸಿ ಗಿನ್ನಿಸ್‌ ದಾಖಲೆಯಲ್ಲಿ  ಹೆಸರು ಗಿಟ್ಟಿಸಿಕೊಂಡ ಕರಾವಳಿಯ ಹುಡುಗ

April 1, 2021
2:06 PM
Advertisement

ಚೀನಾದ ಹುಡುಗನ ಸಾಧನೆಯನ್ನು ಮೀರಿಸಿ ಗಿನ್ನಿಸ್‌ ವಿಶ್ವ ದಾಖಲೆ ಬರೆದಿದ್ದಾನೆ ಕರಾವಳಿ ಜಿಲ್ಲೆಯ ಮೂಲದ ಈ ಹುಡುಗ. ಅಷ್ಟಕ್ಕೂ ಆತ ಮಾಡಿರುವ ಸಾಧನೆ ಏನು ಗೊತ್ತಾ ?  ರೂಬಿಕ್‌ ಕ್ಯೂಬ್‌ಗಳನ್ನು ಅತೀ ಕಡಿಮೆ ಅವಧಿಯಲ್ಲಿ ಕೂಡಿಸಿ ವಿಶ್ವ ದಾಖಲೆ ಬರೆದ ಈ ಬಾಲಕನ ಹೆಸರು ಅಥರ್ವ ಆರ್‌ ಭಟ್.‌ ಮೂಲತ: ಉಡುಪಿ ಜಿಲ್ಲೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.  ರಾಜೇಂದ್ರ ಭಟ್‌ ಹಾಗೂ ಶೋಭಾ ರಾಜ್‌ ಅವರು ಪುತ್ರ.

Advertisement
Advertisement
Advertisement

 

Advertisement
ಅಥರ್ವ ಭಟ್

2020 ಡಿಸೆಂಬರ್‌ 9 ರಂದು ನಡೆದ ಸ್ಫರ್ಧೆಯಲ್ಲಿ ಅಥರ್ವ ಭಟ್‌ ಈ ಸಾಧನೆಯನ್ನು ಮಾಡಿದ್ದು 1 ನಿಮಿಷ 29  ಸೆಕೆಂಡ್‌ ಗಳಲ್ಲಿ  ಮೂರು  ಕ್ಯೂಬ್‌ ಗಳನ್ನು ಕೂಡಿಸಿ ವಿಶ್ವದಾಖಲೆ ಮಾಡಿದ್ದಾರೆ. ವಿಶೇಷ ಎಂದರೆ ತನ್ನ ಎರಡು ಕೈ ಹಾಗೂ ಒಂದು ಕಾಲುಗಳಿಂದ ಈ ಸಾಧನೆ ಮಾಡಿದ್ದಾರೆ. ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಾಕಿದೆ. ಆ ಬಳಿಕ ಈ ಮಾಹಿತಿ ಹೊರಬಿದ್ದಿದೆ.ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

 

Advertisement

 

ಅಥರ್ವ ಭಟ್‌ ಅವರು ಸುಮಾರು 6 ವರ್ಷ ವಯಸ್ಸಿರುವಾಗ ಡಬ್ಲ್ಯೂಸಿಎ( ವರ್ಲ್ಡ್ ಕ್ಯೂಬಿಂಗ್ ಅಸೋಸಿಯೇ‌ಶನ್‌) ನೋಂದಾಯಿಸಿಕೊಂಡಿದ್ದರು. ಅದಾದ ನಂತರ ಭಾರತದಾದ್ಯಂತ 28 ಡಬ್ಲ್ಯೂಸಿಎ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅವರು ಇದುವರೆಗೆ ವಿವಿಧ ಸ್ಫರ್ಧೆಗಳಲ್ಲಿ  ಭಾಗವಹಿಸಿ 4 ಚಿನ್ನ, 2 ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗೆದ್ದಿದ್ದಾರೆ.  ಇದೀಗ ಗಿನ್ನಿಸ್‌ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ.

Advertisement

 

Advertisement

ರೂಬಿಕ್ಸ್‌ ಕ್ಯೂಬ್‌ಗಳನ್ನು ಜೋಡಿಸುವುದು ಎಷ್ಟು ಕಷ್ಟದ ಕೆಲಸ ಎಂದು ಬಹುತೇಕ ಎಲ್ಲರಿಗೂ ಗೊತ್ತಿದೆ. ಏಕಾಗ್ರತೆ ಮತ್ತು ನಿಖರ ಲೆಕ್ಕಾಚಾರ ಇದ್ದರೆ ಮಾತ್ರ ಈ ಕ್ಯೂಬ್‌ಗಳನ್ನು ತಕ್ಷಣ ಜೋಡಿಸಬಹುದು. ಹಾಗಂತ, ಇದು ಖಂಡಿತಾ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಆದರೆ, ಕೆಲವರು ಇದೇ ಕ್ಯೂಬ್‌ಗಳನ್ನು ಕ್ಷಣಮಾತ್ರದಲ್ಲಿ ಜೋಡಿಸಿ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿ, ನೀರಿನೊಳಗೆ ಕುಳಿತು ರೂಬಿಕ್ಸ್‌ ಕ್ಯೂಬ್‌ಗಳನ್ನು ಜೋಡಿಸಿ ದಾಖಲೆ ಬರೆದವರು ಇದ್ದಾರೆ. ಇದೀಗ ಇದೇ ಸಾಲಿಗೆ ಬೆಂಗಳೂರಿನ ಎಂಟು ವರ್ಷದ ಪುಟಾಣಿ ಕೂಡಾ ಸೇರಿದ್ದಾರೆ. ಅಥರ್ವ ಆರ್ ಭಟ್ ಎಂಬ ಎಂಟು ವರ್ಷದ ಪುಟಾಣಿಯ ಸಾಧನೆ ಇದು. ಅಥರ್ವ ಒಂದೂವರೆ ನಿಮಿಷದಲ್ಲಿ ಮೂರು ಕ್ಯೂಬ್‌ಗಳನ್ನು ಜೋಡಿಸಿದ್ದಾರೆ. ಕೈಗಳ ಮೂಲಕ ಎರಡು ಮತ್ತು ಕಾಲಿನಿಂದ ಒಂದು ರೂಬಿಕ್ಸ್‌ ಕ್ಯೂಬ್‌ಗಳನ್ನು ಜೋಡಿಸುವ ಮೂಲಕ ಅಥರ್ವ ದಾಖಲೆಯ ಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಕೊರೋನಾ ಸಂದರ್ಭ ಶಾಲೆಯ ಆನ್‌ಲೈನ್‌ ತರಗತಿ ಬಳಿಕ ಕ್ಯೂಬ್‌ ಸೇರಿಸಲು ತಲ್ಲೀನರಾದ ಅಥರ್ವ ಈ ಸಾಧನೆಗೆ ಹೆಚ್ಚು ಅವಕಾಶ ಸಿಕ್ಕಿದೆ.  3×3 ಘನಗಳನ್ನು ಪರಿಹರಿಸಲು ಸತತ ಪ್ರಯತ್ನದ ಮೂಲಕ  ಸಾಧನೆ ಮಾಡಿದರು. ಈ ಬಗ್ಗೆ ಮಾತನಾಡುವ ಅಥರ್ವ, “ತರಬೇತಿ ಎಂದಿಗೂ ಕಷ್ಟಕರವಾಗಿರಲಿಲ್ಲ, ಏಕೆಂದರೆ ನಾನು ಎರಡೂ ಕೈ ಮತ್ತು ಕಾಲುಗಳಿಂದ ಸಮಸ್ಯೆ ಪರಿಹರಿಸುವುದರಲ್ಲಿ ಆನಂದಿಸಿದೆ. ನನ್ನ ಪೋಷಕರು ಯಾವಾಗಲೂ ಬೆಂಬಲಿಸುತ್ತಿದ್ದರು. ನನ್ನ ಸಹೋದರಿ ಮತ್ತು ಅಜ್ಜಿಯರು ನನ್ನನ್ನು ಹುರಿದುಂಬಿಸುತ್ತಿದ್ದರು” ಎಂದು ಹೇಳುತ್ತಾರೆ.

Advertisement

2018 ರಲ್ಲಿ  1 ನಿಮಿಷ 36 ಸೆಕೆಂಡುಗಳಲ್ಲಿ ಚೀನಾದ ಹುಡುಗ ಜಿಯಾನ್ಯು ಕ್ವಿ  ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಥರ್ವ ಅವರು  ಆರು ಸೆಕೆಂಡ್‌ಗಳಷ್ಟು  ಕಡಿಮೆ ಸಮಯದಲ್ಲಿ ಅದೇ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ.

ಅಥರ್ವ ಅವರು ಮೂಲತ: ಉಡುಪಿ ಜಿಲ್ಲೆಯವರು. ಅವರ ಅಜ್ಜ ಯಜ್ಞ ನಾರಾಯಣ ಭಟ್‌ ಅವರು ಪೇಜಾವರ ಹಿರಿಯ ಶ್ರೀಗಳಿಗೆ ಪರ್ಯಾಯದ ಎಲ್ಲಾ ಸಂದರ್ಭ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಉಡುಪಿಯಲ್ಲಿ ಅಟ್ಲುದ ಯಜ್ಞಣ್ಣ ಎಂದೇ ಪ್ರಸಿದ್ಧರಾಗಿದ್ದರು.

Advertisement

 

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 19-04-2024 | ಇಂದು ಉತ್ತಮ ಮಳೆಯ ಮುನ್ಸೂಚನೆ |
April 19, 2024
11:00 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror