ಕೊರೋನೋತ್ತರದಲ್ಲಿ ಭಾರತದ ಹಳ್ಳಿಗಳ ಸ್ಥಿತಿ ಬದಲಾಗಬೇಕಲೇಬೇಕಾದ ಅನಿವಾರ್ಯವಿದೆ. ಹೀಗಾಗಿ ಪ್ರತೀ ಹಳ್ಳಿಯೂ ಸ್ವಾವಲಂಬನೆಯ ಹಾದಿಯಲ್ಲಿ ನಡೆಯಬೇಕಿದೆ. ಇದಕ್ಕಾಗಿ ಆತ್ಮನಿರ್ಭರ ಭಾರತದ ಕಲ್ಪನೆ ಹೆಚ್ಚಾಗಿದೆ. ಈ ಮೂಲಕ ಗ್ರಾಮದ ಪ್ರತೀ ವ್ಯಕ್ತಿಯೂ ಸ್ವಾವಲಂಬನೆಯ ಹಾದಿಯಲ್ಲಿ ನಡೆಯಬೇಕು ಎನ್ನುವುದು ಉದ್ದೇಶ.
ಈ ಕಾರಣದಿಂದ ಸುಳ್ಯ ತಾಲೂಕು ಸೇರಿದಂತೆ ವಿವಿದೆಡೆ ತರಬೇತಿ ಶಿಬಿರಗಳು ನಡೆಯುತ್ತಿದೆ. ಗ್ರಾಮ ವಿಕಾಸ ತಂಡ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಯುವಕರಿಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಈ ಬಗ್ಗೆ ಯುವಕರು ಹೀಗೆ ಹೇಳುತ್ತಾರೆ…
ಶಿಬಿರದಲ್ಲಿ ಸ್ವಾವಲಂಬನೆಯ ಕಡೆಗೆ ಹೆಜ್ಜೆ ಹಾಕಲು ಯುವಕರನ್ನು ತರಬೇತು ಮಾಡಲಾಗುತ್ತದೆ. ವಿವಿಧ ವಿಷಯಗಳ ಕುರಿತು ಯುವಕರಿಗೆ ತರಬೇತಿ ನೀಡಲಾಗುತ್ತದೆ. ಕೃಷಿ ಸೇರಿದಂತೆ ವಿವಿಧ ತರಬೇತಿ ಕಾರ್ಯಕ್ರಮ ವಾರಗಳ ಕಾಲ ನಡೆಯುತ್ತದೆ. ಈ ಬಗ್ಗೆ ಯುವಕರು ಹೇಳುವುದು ಹೀಗೆ….
ಕೃಷಿ ವಿಷಯದಲ್ಲಿ ಕಸಿ ಹಾಗೂ ಅಣಬೆ ಕೃಷಿ ಕಡೆಗೆ ಆದ್ಯತೆ ಇದೆ. ಕೃಷಿಯಲ್ಲಿ ಆದಾಯ ಹೆಚ್ಚಿ ಮಾಡಲು, ಸ್ವಾವಲಂಬೆಗೆ, ಅವಲಂಬನೆ ಕಡಿಮೆ ಮಾಡಲು ಈ ತಂತ್ರಗಳು ಇಲ್ಲಿ ಅಗತ್ಯ. ಇದೇ ದಿಸೆಯಲ್ಲಿ ಕಸಿ ಕಟ್ಟುವುದು , ಅದರ ಮಾದರಿಗಳು, ಕಸಿ ಕಟ್ಟಿದ್ದರ ಪ್ರಯೋಜನ, ಹೈನುಗಾರಿಕೆ ಸೇರಿದಂತೆ ಇತರ ವಿಭಾಗದಲ್ಲಿ ಇಡೀ ದಿನ ಪ್ರಾಯೋಗಿಕ ಹಾಗೂ ತಾಂತ್ರಿಕ ಮಾಹಿತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ ನಗರದಲ್ಲಿ ಐಟಿ ಉದ್ಯೋಗದಲ್ಲಿದ್ದು ಕೃಷಿಗೆ ಮರಳುತ್ತಿರುವ ಯುವಕರೂ ಇದ್ದರೂ ಅವರ ಮಾತು ಹೀಗಿದೆ…
ಒಟ್ಟಿನಲ್ಲಿ ಕೃಷಿ ಕಡೆಗೆ ಯುವಕರು ಹೆಜ್ಜೆ ಹಾಕುತ್ತಿದ್ದಾರೆ. ದೈರ್ಯವಾಗಿ ಕೃಷಿ ಕಡೆಗೆ ಇಳಿಯುರಿ, ಸಂಪೂರ್ಣವಾಗಿ ತೊಡಗಿಸಿಕೊಂಡರೆ ಯಶಸ್ಸು ಖಂಡಿತಾ ಎಂಬುದೂ ಮನವರಿಕೆಯಾಗಿದೆ.