Advertisement
The Rural Mirror ಫಾಲೋಅಪ್

ಆತ್ಮನಿರ್ಭರ ಭಾರತ -ಸ್ವಾವಲಂಬಿ ಭಾರತ | ತರಬೇತಿಯಲ್ಲಿ ಯುವಕರು – ಕೃಷಿಯೂ ಈಗ ಯುವಕರಿಗೆ ಆಸಕ್ತಿ |

Share
ಯಾರು ಹೇಳಿದ್ದು ನಿಮಗೆ ಕೃಷಿಯಲ್ಲಿ  ಯುವಕರಿಗೆ ಆಸಕ್ತಿ ಇಲ್ಲವೆಂದು..? ಹೀಗೆಂದು ಪ್ರಶ್ನೆ ಮಾಡುವ ಮಂದಿಗೆ ಇಲ್ಲಿದೆ ಉತ್ತರ. ಉತ್ಸಾಹ ಯುವಕರ ತಂಡ ಈಗ ಕೃಷಿಯಲ್ಲಿ  ತೊಡಗಿದ್ದಾರೆ. ಅಲ್ಲಲ್ಲಿ ಮಾತುಗಳು ಕೇಳುತ್ತಿದೆ, ಅವರ ಮಗ ಇಂಜಿನಿಯರ್‌ ಆಗಿದ್ದ… ಈಗ ಕೃಷಿಕ, ಇವರ ಮಗ ಐಟಿಯಲ್ಲಿದ್ದ ಈಗ ಕೃಷಿಕ…. ಪಿತ್ರಾರ್ಜಿತ ಆಸ್ತಿಯನ್ನು ಉಳಿಸಲು ಯುವಕರು ಕೃಷಿಯತ್ತ ಬಂದಿದ್ದಾರೆ. ಇದೇ ಸಮಯಕ್ಕೆ ಆತ್ಮನಿರ್ಭರ ಭಾರತ -ಸ್ವಾವಲಂಬಿ ಭಾರತ ಕನಸು ತೆರೆದುಕೊಂಡಿದೆ. ತರಬೇತಿಯಲ್ಲಿ ಯುವಕರು ತೊಡಗಿಕೊಂಡಿದ್ದಾರೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ಗ್ರಾಮ ವಿಕಾಸ ತಂಡ ಹಾಗೂ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು  ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಯುವಕರಿಗೆ ತರಬೇತಿ ನಡೆಯುತ್ತಿದೆ. ಸ್ವಾವಲಂಬನೆಯ ಕಡೆಗೆ ಯುವಕರನ್ನು  ತರಬೇತು ಮಾಡಲಾಗುತ್ತಿದೆ. ಅದರಲ್ಲಿ  ವಿವಿಧ ವಿಷಯಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಅದರ ಒಂದು ಭಾಗ ಕೃಷಿ.
ಕೃಷಿ ವಿಷಯದಲ್ಲಿ ಕಸಿ ಹಾಗೂ ಅಣಬೆ ಕೃಷಿ ಕಡೆಗೆ ಆದ್ಯತೆ ನೀಡಿ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಕೃಷಿಯಲ್ಲಿ  ಆದಾಯ ಹೆಚ್ಚಿ ಮಾಡಲು, ಸ್ವಾವಲಂಬೆಗೆ, ಅವಲಂಬನೆ ಕಡಿಮೆ ಮಾಡಲು ಈ ತಂತ್ರಗಳು ಇಲ್ಲಿ ಅಗತ್ಯ. ಇದೇ ದಿಸೆಯಲ್ಲಿ  ತರಬೇತು ನೀಡಲಾಗುತ್ತಿದೆ.  ಕಸಿ ಕಟ್ಟುವುದು , ಅದರ ಮಾದರಿಗಳು, ಕಸಿ ಕಟ್ಟಿದ್ದರ ಪ್ರಯೋಜನ, ಹೈನುಗಾರಿಕೆ ಸೇರಿದಂತೆ ಇತರ ವಿಭಾಗದಲ್ಲಿ ಇಡೀ ದಿನ ಪ್ರಾಯೋಗಿಕ ಹಾಗೂ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ.
ಹೀಗೆ ನೀಡಿದ ಮಾಹಿತಿಯಲ್ಲಿ ಕೃಷಿಕ , ಬರಹಗಾರ, ಫಾರ್ಮರ್‌ ಫಸ್ಟ್‌ ಟ್ರಸ್ಟ್‌ ಅಧ್ಯಕ್ಷ ಪಡಾರು ರಾಮಕೃಷ್ಣ ಶಾಸ್ತ್ರಿ ತರಬೇತಿ ನೀಡುತ್ತಾ ಹೇಳಿದ್ದು ಹೀಗೆ,
ಕಸಿ ಕಟ್ಟುವ ತಂತ್ರಜ್ಞಾನ ಹೊಸತಲ್ಲ.ಹಳೆಯದೇ.ಆದರೆ ನಮ್ಮ ಭಾಗದಲ್ಲಿ ಅದಕ್ಕೆ ಪ್ರಚಾರ ಸಿಕ್ಕಿದ್ದು ಗೇರು ಸಂಶೋಧನಾ ಕೇಂದ್ರದ ವತಿಯಿಂದ ತರಬೇತಿ ಕೊಡಲು ಆರಂಭಿಸಿದ ಬಳಿಕ.ಈಗಂತೂ ಕಸಿ ಕಟ್ಡುವುದು ಎಂಬುದು ಒಂದು ದೊಡ್ಡ ಉದ್ಯಮ.ಕೋಟಿಗಟ್ಟಲೆ ವ್ಯವಹಾರ ನಡೆಯುತ್ತಿರುವ ಕ್ಷೇತ್ರ.ಇದೀಗ ಗ್ರೀನ್ ಹೌಸ್ ಮುಖಾಂತರ ಅಕಾಲದಲ್ಲೂ ತರಕಾರಿ ಇತ್ಯಾದಿ ಬೆಳೆ ಬೆಳೆಯುವ ಅವಕಾಶ ಹೆಚ್ಚಾಗುತ್ತಿದೆ.ರಫ್ತು ಕ್ಷೇತ್ರಕ್ಕಾಗಿ ಬೆಳೆಯುವಾಗ ಬೆಳೆಯ ಗಾತ್ರ,ಬಣ್ಣ,ತೂಕ ಇತ್ಯಾದಿಗಳಿಗೂ ಮಾನದಂಡಗಳು ಬಂದಿವೆ. ಆ ಕಾರಣಕ್ಕಾಗೂ ಕಸಿ ಕ್ಷೇತ್ರದಲ್ಲಿ ಭಾರೀ ಉದ್ಯೋಗವಕಾಶಗಳು ಮುಂದಕ್ಕೆ ಸೃಷ್ಟಿಯಾಗಲಿದೆ.ಇನ್ನು ಮುಂದಿನ‌ ದಿನಗಳಲ್ಲಿ ಪ್ರತಿಯೊಂದು ಬೆಳೆಗೂ ಕನಿಷ್ಟ ಮಾರಾಟ ಮೌಲ್ಯ ನಿಗದಿಸಲಾಗುತ್ತದೆಯೆಂಬ ಆಶಾವಾದ ಇದೆ.ಇದೇನಾದರೂ ಜ್ಯಾರಿಗೆ ಬಂದರಂತೂ ಕೃಷಿ ಕ್ಷೇತ್ರ ಭಾರೀ ಮುನ್ನೋಟ ದಾಖಲಿಸುವುದರಲ್ಲಿ ಸಂದೇಹವಿಲ್ಲ ಎಂದರು.
  ಯಾವುದೇ ಬೆಳೆ ಬೆಳೆಯುವಾಗ ಅದರ ಉತ್ಪಾದನಾ ವೆಚ್ಚ ಎಷ್ಟು ಎಂಬ ತಿಳುವಳಿಕೆ ಇರಬೇಕು.ಹೆಚ್ಚು ಹಣ ಹೂಡಿಕೆ ಮಾಡಿ ಕಡಿಮೆ ಆದಾಯ ಪಡೆಯುವಂತಾಗ ಬಾರದು.  ಅಡಿಕೆಯಲ್ಲಿ ಹೊಸತೋಟ ಮಾಡುವಾಗ ಆದಾಯ ಆರಂಭವಾಗಲು ಐದಾರು ವರ್ಷವಾದರೂ ಬೇಕು.ಮೂರು ವರ್ಷದಲ್ಲಿ ಸಿಂಗಾರ ಬಿಡುತ್ತದೆ ಎಂದಾದರೂ ಒಟ್ಟು ಆದಾಯ ಕನಿಷ್ಟವಿರುತ್ತದೆ.ಗಣನೀಯ ಆದಾಯ ಸಿಗಲು ಇಷ್ಟು ವರ್ಷ ಕಾಯಲೇ ಬೇಕು.
   – ಪಡಾರು ರಾಮಕೃಷ್ಣ ಶಾಸ್ತ್ರಿ, ಕೃಷಿಕ
ಹಿರಿಯರಿಂದಲೇ ಜಮೀನು ಇದ್ದವರ ಸ್ಥಿತಿ ಒಂದಾದರೆ ಜಮೀನು ಖರೀದಿ ಮಾಡಿದವರ ಸ್ಥಿತಿ ಇನ್ನೊಂದು.ಜಮೀನು‌ ಖರೀದಿ ಮಾಡಿದ್ದರೂ ನಂತರದ ದಿನಗಳಲ್ಲಿ ಹೂಡಿದ ಹಣಕ್ಕೆ ಬದಲಾಗಿ ಜಮೀನು ಕೈಯಲ್ಲಿರುವುದರಿಂದ ಖರೀದಿ ಮೌಲ್ಯವನ್ನು ಲೆಕ್ಕ ಹಾಕಬೇಕಾಗಿಲ್ಲ.
ಜಮೀನಿನ ಕಳೆ ತೆಗೆಯುವುದು,ಸಮತಟ್ಟು ಗೊಳಿಸುವುದು,ನೀರಾವರಿ ವ್ಯವಸ್ಥೆ ಮಾಡುವುದು, ಗುಂಡಿ ತೆಗೆಯುವುದು,ಗಿಡಕ್ಕಾಗಿ ಮಾಡುವ ಖರ್ಚು,ಗೊಬ್ಬರ ಇತ್ಯಾದಿ ಏಳು ವರ್ಷಗಳ ಖರ್ಚಿನ ಲೆಕ್ಕಾಚಾರ ಉತ್ಪಾದನಾ ವೆಚ್ಚಕ್ಕೆ ಪರಿಗಣಿಸಬೇಕು.ಈ ವೆಚ್ಚವನ್ನು ಹದಿನೆಂಟು ಭಾಗಗಳನ್ಬಾಗಿ ಮಾಡಿ ಪ್ರತಿ ವರ್ಷದ ನಿರ್ವಹಣಾ ವೆಚ್ಚಕ್ಕೆ ಸೇರಿಸ ಬೇಕು.
ಅಡಿಕೆ ತೋಟದಲ್ಲಿ ಸುಮಾರು ಹದಿನೆಂಟು ವರ್ಷ ಇಳುವರಿ ಏರಿದ ಸ್ಥಿತಿಯಲ್ಲಿ ಇರುತ್ತದೆ.ಆ ಬಳಿಕ ಇಳುವರಿಯಲ್ಲಿ ಇಳಿತ ಕಾಣಲಾರಂಭಿಸುತ್ತದೆ.ಆ ಕಾರಣಕ್ಕೆ ಆರಂಭಿಕ ಹೂಡಿಕೆಯನ್ನು ಹದಿನೆಂಟು ವರ್ಷಕ್ಕೆ ವಿಭಾಗಿಸಿ ಹಂಚಿದ್ದು. ಇಳುವರಿ ಬೇರೆ ಬೇರೆ ತೋಟದಲ್ಲಿ ಬೇರೆ ಬೇರೆ.ಒಂದೆಡೆ ಎಕರೆಗೆ ಹನ್ನೆರಡು ಕ್ವಿಂಟಾಲ್ ಇಳುವರಿ ಬರಲೂ ಬಹುದು.ಆದರೆ ಉತ್ಪಾದನಾ ವೆಚ್ಚ ಪರಿಗಣಿಸುವಾಗ ಎಲ್ಲರನ್ನೂ ಅದು ಒಳಗೊಳ್ಳುವಂತಿರಬೇಕು.ಆ ಕಾರಣಕ್ಕೆ ಪ್ರತಿ ಎಕರೆಗೆ ಅಡಿಕೆ ಇಳುವರಿ ಎಂಟು ಕ್ವಿಂಟಾಲ್ ಎಂದು ನಿರ್ಧರಿಸಲಾಗಿದೆ.
ಉತ್ಪಾದನಾ ವೆಚ್ಚ ತೋಟಗಾರಿಕಾ ಇಲಾಖೆ, ಸಿಪಿಸಿಆರ್‌ ಐ , ಇತ್ಯಾದಿ  ಇಲಾಖೆಗಳು ಪ್ರತ್ಯೇಕವಾಗಿ ಲೆಕ್ಕ ಹಾಕುತ್ತವೆ.ಆದರಿದು ಸರಕಾರೀ ಲೆಕ್ಕವಾಗುತ್ತದೆಯೇ ಹೊರತು ಕೃಷಿಕರ ಲೆಕ್ಕಾಚಾರ ಆಗುವುದಿಲ್ಲ.ಹಾಗಾಗಿ ಕ್ಯಾಂಪ್ಕೋ ನೇತೃತ್ವದಲ್ಲಿ ಸಮಿತಿ ರಚಿಸಿ ಅಡಿಕೆಯ ಉತ್ಪಾದನಾ ವೆಚ್ಚ ನಿರ್ಧರಿಸುವ ಯತ್ನ ನಡೆಯಿತು.ಅದೇ ಮಾನದಂಡ ಈಗ ಅನುಸರಿಸಿದರೆ ಅಡಿಕೆಯ ಈಗಿನ ಉತ್ಪಾದನಾ ವೆಚ್ಚ ಪ್ರತಿ ಕೇಜಿಗೆ ಮುನ್ನೂರು ರೂಪಾಯಿಗಳಾಗುವ ಸಾಧ್ಯತೆ ಇದೆ.
.
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |

ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

3 hours ago

ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…

3 hours ago

ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ

ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…

3 hours ago

ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು

ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…

4 hours ago

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…

22 hours ago