ಕೃಷಿಗೆ ಕಾಡಾನೆ ಹಾವಳಿ ಹೆಚ್ಚಾಗಿದೆ. ಸುಳ್ಯದ ಬಳಿಯ ಪರಿವಾರ ಎಂಬಲ್ಲಿನ ಕೃಷಿಕ ವಿಶ್ವನಾಥ ರೈ ಎಂಬವರ ತೋಟಕ್ಕೆ ಆನೆ ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಸಹಿತ ಕೃಷಿ ಹಾನಿ ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ಸುಳ್ಯ ತಾಲೂಕಿನ ಅರಣ್ಯದ ಅಂಚಿನ ತೋಟಗಳಿಗೆ ಕಾಡಾನೆ ಹಾವಳಿ ಇದೆ. ಈಚೆಗಷ್ಟೇ ಕೊಲ್ಲಮೊಗ್ರ ಬಳಿಯ ಇಡ್ನೂರು ಎಂಬಲ್ಲಿ ಬೆಳಗ್ಗೆ ಯುವಕನ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಆಲೆಟ್ಟಿ, ಮಂಡೆಕೋಲು, ಸಂಪಾಜೆ , ಕೊಲ್ಲಮೊಗ್ರ, ಮಡಪ್ಪಾಡಿ ಸೇರಿದಂತೆ ವಿವಿದೆಡೆ ಕಾಡಾನೆ ಹಾವಳಿ ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಸುಳ್ಯ ತಾಲೂಕಿನಲ್ಲಿ ಮಾತ್ರವಲ್ಲ ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲೂ ಕಾಡಾನೆ ಹಾವಳಿ ಇದೆ. ಈಚೆಗೆ ರಿಪ್ಪನ್ ಪೇಟೆಯ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ವಿವಿದೆಡೆ ಕಾಡಾನೆ ಹಾವಳಿ ನಡೆಸಿದೆ. ಅಡಿಕೆ, ಗದ್ದೆ ಸೇರಿದಂತೆ ವಿವಿಧ ಕೃಷಿಯ ಮೇಲೆ ಹಾನಿ ನಡೆಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel