ಚುನಾವಣೆಯ ಗಡಿ ಭದ್ರತೆಯ ನಡುವೆಯೂ ಅಡಿಕೆ ಕಳ್ಳಸಾಗಾಣಿಕೆ ಪ್ರಯತ್ನಕ್ಕೆ ತಡೆಯಾಗಿದೆ. ಭಾರತ-ಬಾಂಗ್ಲಾದೇಶ ಗಡಿ ಭಾಗದ ಮೂಲಕ ಕಳ್ಳಸಾಗಾಣಿಕೆಯಾಗುತ್ತಿದ್ದ ಅಡಿಕೆಯನ್ನು ಬಿಎಸ್‌ಎಫ್ ಮೇಘಾಲಯ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ತಡೆಯಾಗಿದೆ. ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 4,900 ಕೆಜಿ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ,ಬಿಎಸ್‌ಎಫ್ ಹಾಗೂ ಮೇಘಾಲಯ ಪೊಲೀಸರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಗಡಿಯ ಸಮೀಪದಲ್ಲಿರುವ ಮನೆಯಿಂದ ಅಡಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಂಗ್ಲಾದೇಶದಿಂದ ಅಡಿಕೆ ಕಳ್ಳಸಾಗಾಣಿಕೆಯಾಗಿ ಭಾರತದ ಗಡಿಭಾಗದಲ್ಲಿ ಮನೆಗಳಲ್ಲಿ ದಾಸ್ತಾನು ಮಾಡಿ ಅಲ್ಲಿಂದ ಭಾರತಕ್ಕೆ ರವಾನೆ ಮಾಡಲಾಗುತ್ತಿರುವುದರ ಬಗ್ಗೆ ಗಡಿ ಭದ್ರತಾ ಸಿಬಂದಿಗಳ ಕಣ್ಗಾವಲು ಇರಿಸಿದ್ದಾರೆ. ಚುನಾವಣೆ ಸಮಯದಲ್ಲೂ ಅಕ್ರಮ ಸಾಗಾಟಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಇದೀಗ ಇಂತಹ ಅಕ್ರಮಗಳ ವಿರುದ್ಧ ತಡೆಗೆ ಪೊಲೀಸರು ಹಾಗೂ ಗಡಿಭದ್ರತಾ ತಂಡವು ಕೆಲಸ ಮಾಡಿದೆ.
ಇದೇ ವೇಳೆ ಅಸ್ಸಾಂ ರಾಜ್ಯದ ಕಾಮ್‌ಜಾಂಗ್ ಜಿಲ್ಲೆಯ ಸಾಮಾನ್ಯ ಪ್ರದೇಶದಲ್ಲಿ ಕಾಂಗ್‌ಪತ್ ಸೆಂಟರ್‌ನಲ್ಲಿ ಅಸ್ಸಾಂ ರೈಫಲ್ಸ್‌ನ ಪಡೆಗಳು ಅಗತ್ಯ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳ ಸಹಿತ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 186 ಚೀಲ ಅಡಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.
Source: News Post
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…