ಆಟೊ ಬಿಡಿ ಭಾಗ ತಯಾರಿಕಾ ಘಟಕಗಳು ದೇಶದ ಜಿಡಿಪಿಗೆ ಶೇಕಡ 2.7 ರಷ್ಟು ಕೊಡುಗೆ ನೀಡುತ್ತಿವೆ. ಸರಿ ಸುಮಾರು 50 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿವೆ ಎಂದು ಕೇಂದ್ರ ಭಾರಿ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈಗ ಆಟೊ ಬಿಡಿಭಾಗಗಳ ಮೇಲೆ ಇತರ ದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು ಎಂದು ಆಟೋ ಉದ್ಯಮಕ್ಕೆ ಅವರು ಸಲಹೆ ನೀಡಿದರು. ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳನ್ನು ಸಾಕಾರ ಮಾಡುವ ಜೊತೆ ಜೊತೆಗೆ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಗುರಿ ಮುಟ್ಟಲು ಆಟೊ ಬಿಡಿ ಭಾಗಗಳ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾಗಿದೆ ಎಂದರು. ಜಾಗತಿಕ ಮಟ್ಟದಲ್ಲಿ ದೇಶೀಯ ಆಟೊ ಬಿಡಿಭಾಗ ಉದ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ದುಬಾರಿ ಸಾರಿಗೆ, ವೆಚ್ಚಗಳ ಒತ್ತಡಕ್ಕೆ ಸಿಲುಕಿದೆ. ಇಷ್ಟಾದರೂ ಪ್ರಸಕ್ತ ಹಣಕಾಸು ವರ್ಷದಲ್ಲಿ ರಫ್ತು ವಹಿವಾಟು ಕಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement