ಭಾರತದಲ್ಲಿ ಹೆಚ್ಚಿದ ವಾಹನಗಳ ಮಾರಾಟ | ಫೆಬ್ರವರಿಯಲ್ಲಿ ಭರ್ಜರಿ ಸೇಲ್…!

March 8, 2023
3:17 PM

ಭಾರತದಲ್ಲಿ ವಾಹನಗಳ ಮಾರಾಟ ಬಹಳ ಚುರುಕುಗೊಂಡಂತಿದೆ. ಫೆಬ್ರುವರಿ ತಿಂಗಳಲ್ಲಿ ವರ್ಷವಾರು ಲೆಕ್ಕದಲ್ಲಿ ವಾಹನಗಳ ಮಾರಾಟ ಶೇ. 16ರಷ್ಟು ಹೆಚ್ಚಾಗಿದೆ. ಅಂದರೆ 2022ರ ಫೆಬ್ರುವರಿ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಫೆಬ್ರುವರಿಯಲ್ಲಿ ಶೇ. 16ರಷ್ಟು ಹೆಚ್ಚು ವಾಹನಗಳು ಸೇಲ್ ಆಗಿವೆ.

Advertisement

2023ರ ಫೆಬ್ರುವರಿಯಲ್ಲಿ 17,75,424 ವಾಹನಗಳು ಮಾರಾಟಕ್ಕೆ ನೊಂದಣಿಯಾಗಿವೆ ಎಂದು ಆಟೊಮೊಬೈಲ್ ಡೀಲರ್​ಗಳ ಸಂಘಟನೆ ಎಫ್​ಎಡಿಎ (FADA) ಮಾಹಿತಿ ನೀಡಿದೆ. ದ್ವಿಚಕ್ರ ವಾಹನ, ಪ್ಯಾಸೆಂಜರ್ ವಾಹನಗಳ ಮಾರಾಟವೂ ಇದರಲ್ಲಿ ಒಳಗೊಂಡಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ 15,31,196 ವಾಹನಗಳ ಮಾರಾಟವಾಗಿತ್ತು. ಹತ್ತಿರಹತ್ತಿರ ಎರಡೂವರೆ ಲಕ್ಷದಷ್ಟು ಹೆಚ್ಚು ವಾಹನಗಳು ಈ ವರ್ಷದ ಫೆಬ್ರುವರಿಯಲ್ಲಿ ಸೇಲ್ ಆಗಿವೆ.

ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಈ ಫೆಬ್ರುವರಿಯಲ್ಲಿ 2,87,182 ವಾಹನಗಳು ಮಾರಾಟ ಕಂಡಿವೆ. ಹಿಂದಿನ ವರ್ಷದ ಫೆಬ್ರುವರಿಗೆ ಹೋಲಿಸಿದರೆ ಈ ಬಾರಿಯದ್ದು ಶೇ. 11ರಷ್ಟು ಹೆಚ್ಚು. ದ್ವಿಚಕ್ರ ವಾಹನಗಳು ಮಾರಾಟ ಶೇ. 15ರಷ್ಟು ಹೆಚ್ಚಾಗಿದೆ. ಒಟ್ಟು 12,67,233 ಟು–ವ್ಹೀಲರ್​ಗಳು ಫೆಬ್ರುವರಿಯಲ್ಲಿ ಸೇಲ್ ಆಗಿವೆ.

ದ್ವಿಚಕ್ರ ವಾಹನಗಳು 2022ರ ಫೆಬ್ರುವರಿಯಲ್ಲಿಗಿಂತ ಶೇ. 15ರಷ್ಟು ಹೆಚ್ಚು ಮಾರಾಟ ಕಂಡಿವೆಯಾದರೂ ಕೋವಿಡ್ ಮುಂಚಿನ ಸಂದರ್ಭಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. ಅಂದರೆ 2020ರ ಫೆಬ್ರವರಿಯಲ್ಲಿ ಶೇ. 14ರಷ್ಟು ಹೆಚ್ಚು ದ್ವಿಚಕ್ರ ವಾಹನಗಳು ಸೇಲ್ ಆಗಿದ್ದವು.

2023 ಫೆಬ್ರವರಿಯಲ್ಲಿ ವಾಹನಗಳ ಮಾರಾಟ ವಿವರ

ಪ್ಯಾಸೆಂಜರ್ ವಾಹನಗಳು: 2,87,182
ದ್ವಿಚಕ್ರ ವಾಹನಗಳು: 12,67,233
ಕಮರ್ಷಿಯಲ್ ವಾಹನಗಳು: 79,027
ತ್ರಿಚಕ್ರ ವಾಹನಗಳು: 72,994
ಟ್ರಾಕ್ಟರ್ ವಾಹನಗಳು: 68,988
ಒಟ್ಟು ಮಾರಾಟ: 17,75,424

ಈ ಮೇಲಿನ ವಾಹನಗಳ ಮಾರಾಟವು ರೀಟೇಲ್ ಸೇಲ್​ನದ್ದಾಗಿದೆ. ಅಂದರೆ ವಾಹನಗಳ ಶೋರೂಮ್ ಮೂಲಕ ಮಾರಾಟವಾದ ಮತ್ತು ಮಾರಾಟಕ್ಕೆ ನೊಂದಣಿಯಾದ ವಾಹನಗಳ ಸಂಖ್ಯೆ ಇದು. ಮುಂದೆ ಹಬ್ಬದ ಸೀಸನ್ ಇರುವುದರಿಂದ ವಾಹನಗಳ ಮಾರಾಟಕ್ಕೆ ಇನ್ನಷ್ಟು ಪುಷ್ಟಿ ಸಿಗಬಹುದು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಹೆಚ್ಚು ವಾಹನಗಳನ್ನು ಜನರು ಖರೀದಿಸುವ ಸಾಧ್ಯತೆ ಇದೆ ಎಂಬುದು ಆಟೊಮೊಬೈಲ್ ಉದ್ಯಮಿಗಳ ನಿರೀಕ್ಷೆ.

ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ವೆಚ್ಚಕ್ಕೆ ಮುಂದಾಗುತ್ತಿಲ್ಲ. ಹಣ ಉಳಿತಾಯಕ್ಕೆ ಒತ್ತುಕೊಡುವುದು ಹೆಚ್ಚಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ವಾಹನ ಮಾರಾಟದ ನಾಗಾಲೋಟಕ್ಕೆ ಬ್ರೇಕ್ ಹಾಕಿದರೂ ಹಾಕಬಹುದು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ
April 25, 2025
9:30 PM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್
April 25, 2025
9:15 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |
April 25, 2025
2:04 PM
by: ಸಾಯಿಶೇಖರ್ ಕರಿಕಳ
ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group