ಸುಳ್ಯದಲ್ಲಿ ಜು.17 ರ ಸರಾಸರಿ ಮಳೆ ಎಷ್ಟು ? | ಜುಲೈ ತಿಂಗಳಲ್ಲಿ ದಾಖಲೆ ಮಳೆಯಾಗುತ್ತಾ ಈ ವರ್ಷ |

July 18, 2022
12:43 PM

ಸುಮಾರು 10 ವರ್ಷಗಳ ಬಳಿಕ ಜುಲೈ ತಿಂಗಳಲ್ಲಿ ದಾಖಲೆಯ ಮಳೆಯಾಗುತ್ತದಾ ?. ಹವಾಮಾನ ಆಸಕ್ತರಾದ ಬಾಳಿಲದ ಪಿ ಜಿ ಎಸ್‌ ಎನ್‌ ಪ್ರಸಾದ್‌ ಅವರ ದಾಖಲೆಗಳ ಪ್ರಕಾರ ಈ ವರ್ಷ ಜುಲೈ ತಿಂಗಳಲ್ಲಿ ದಾಖಲೆಯ ಮಳೆಯಾಗುತ್ತಿದೆ. ಇದುವರೆಗಿನ 2013 ರಲ್ಲಿ ಜುಲೈ ತಿಂಗಳಲ್ಲಿ  1843 ಮಿಮೀ ಮಳೆಯಾಗಿತ್ತು. ಅದರ ಬಳಿಕ ಈ ವರ್ಷ ಅದರೆ 2022  ಜುಲೈ ತಿಂಗಳಲ್ಲಿ ಅಧಿಕ ಮಳೆಯಾಗುತ್ತಿದೆ. ಈಗಾಲೇ 1542 ಮಿಮೀ ಮಳೆಯಾಗಿದೆ. ಕಳೆದ 10 ವರ್ಷಗಳಲ್ಲಿ ಜುಲೈ ತಿಂಗಳ ಸರಾಸರಿ ಮಳೆ 1133 ಮಿಮೀ ಮಳೆಯಾಗಿದೆ.

ಇದೇ ವೇಳೆ ಜುಲೈ ತಿಂಗಳಲ್ಲಿ ಎಲ್ಲೆಡೆಯೂ ಉತ್ತಮ ಮಳೆಯಾಗಿತ್ತು. ಭಾನುವಾರ ಸುಳ್ಯ ತಾಲೂಕಿನ ಸರಾಸರಿ ಮಳೆ 105 ಮಿಮೀ ಮಳೆಯಾಗಿದೆ.ಸುಳ್ಯ ತಾಲೂಕಿನ ಪೆರುವಾಜೆ, ಬೆಳ್ಳಾರೆ, ಅಯ್ಯನಕಟ್ಟೆ, ಬಾಳಿಲ, ಚೊಕ್ಕಾಡಿ, ದೊಡ್ಡತೋಟ, ಕಲ್ಮಡ್ಕ, ಕರಿಕಳ, ಪಂಬೆತ್ತಾಡಿ, ಕಮಿಲ, ಕಲ್ಲಾಜೆ, ಹರಿಹರ, ಕೊಲ್ಲಮೊಗ್ರ, ಕಂದ್ರಪ್ಪಾಡಿ, ಮಡಪ್ಪಾಡಿ, ಸುಳ್ಯ ನಗರ, ಮೆಟ್ಟಿನಡ್ಕ, ಮುರುಳ್ಯ, ಬೊಮ್ಮನಮಜಲು ಬಾಳಿಲ, ಚೀಮುಳ್ಳು ಪಂಜ, ಹಾಲೆಮಜಲು ಪ್ರದೇಶಗಳಲ್ಲಿ ಕೃಷಿಕರು ಹಾಗೂ ಹವಾಮಾನ ಆಸಕ್ತರು ಮಳೆಮಾಪನದ ಮೂಲಕ ಮಳೆ ಲೆಕ್ಕ ಮಾಡುತ್ತಾರೆ. ಇದರ ಆಧಾರದಲ್ಲಿ ಕೃಷಿಕ, ಹವಾಮಾನ ಆಸಕ್ತ ಪಿ ಜಿ ಎಸ್‌ ಎನ್‌ ಪ್ರಸಾದ್‌ ಅವರು ತಾಲೂಕಿನ ಸರಾಸರಿಯನ್ನು ಲೆಕ್ಕ ಹಾಕಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಎಲೆಚುಕ್ಕೆ ರೋಗ | ತಕ್ಷಣದ ಪರಿಹಾರಕ್ಕಿಂತ ವೈಜ್ಞಾನಿಕ ನಿರ್ವಹಣೆ ಮುಖ್ಯ | 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ ಪರಿಹಾರ
April 7, 2026
11:25 AM
by: ಮಹೇಶ್ ಪುಚ್ಚಪ್ಪಾಡಿ
ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ
April 7, 2026
7:41 AM
by: ಮಿರರ್‌ ಡೆಸ್ಕ್
ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ
April 7, 2026
7:34 AM
by: ಮಿರರ್‌ ಡೆಸ್ಕ್
ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ
April 6, 2026
7:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror