ಸುಮಾರು 10 ವರ್ಷಗಳ ಬಳಿಕ ಜುಲೈ ತಿಂಗಳಲ್ಲಿ ದಾಖಲೆಯ ಮಳೆಯಾಗುತ್ತದಾ ?. ಹವಾಮಾನ ಆಸಕ್ತರಾದ ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರ ದಾಖಲೆಗಳ ಪ್ರಕಾರ ಈ ವರ್ಷ ಜುಲೈ ತಿಂಗಳಲ್ಲಿ ದಾಖಲೆಯ ಮಳೆಯಾಗುತ್ತಿದೆ. ಇದುವರೆಗಿನ 2013 ರಲ್ಲಿ ಜುಲೈ ತಿಂಗಳಲ್ಲಿ 1843 ಮಿಮೀ ಮಳೆಯಾಗಿತ್ತು. ಅದರ ಬಳಿಕ ಈ ವರ್ಷ ಅದರೆ 2022 ಜುಲೈ ತಿಂಗಳಲ್ಲಿ ಅಧಿಕ ಮಳೆಯಾಗುತ್ತಿದೆ. ಈಗಾಲೇ 1542 ಮಿಮೀ ಮಳೆಯಾಗಿದೆ. ಕಳೆದ 10 ವರ್ಷಗಳಲ್ಲಿ ಜುಲೈ ತಿಂಗಳ ಸರಾಸರಿ ಮಳೆ 1133 ಮಿಮೀ ಮಳೆಯಾಗಿದೆ.
ಇದೇ ವೇಳೆ ಜುಲೈ ತಿಂಗಳಲ್ಲಿ ಎಲ್ಲೆಡೆಯೂ ಉತ್ತಮ ಮಳೆಯಾಗಿತ್ತು. ಭಾನುವಾರ ಸುಳ್ಯ ತಾಲೂಕಿನ ಸರಾಸರಿ ಮಳೆ 105 ಮಿಮೀ ಮಳೆಯಾಗಿದೆ.ಸುಳ್ಯ ತಾಲೂಕಿನ ಪೆರುವಾಜೆ, ಬೆಳ್ಳಾರೆ, ಅಯ್ಯನಕಟ್ಟೆ, ಬಾಳಿಲ, ಚೊಕ್ಕಾಡಿ, ದೊಡ್ಡತೋಟ, ಕಲ್ಮಡ್ಕ, ಕರಿಕಳ, ಪಂಬೆತ್ತಾಡಿ, ಕಮಿಲ, ಕಲ್ಲಾಜೆ, ಹರಿಹರ, ಕೊಲ್ಲಮೊಗ್ರ, ಕಂದ್ರಪ್ಪಾಡಿ, ಮಡಪ್ಪಾಡಿ, ಸುಳ್ಯ ನಗರ, ಮೆಟ್ಟಿನಡ್ಕ, ಮುರುಳ್ಯ, ಬೊಮ್ಮನಮಜಲು ಬಾಳಿಲ, ಚೀಮುಳ್ಳು ಪಂಜ, ಹಾಲೆಮಜಲು ಪ್ರದೇಶಗಳಲ್ಲಿ ಕೃಷಿಕರು ಹಾಗೂ ಹವಾಮಾನ ಆಸಕ್ತರು ಮಳೆಮಾಪನದ ಮೂಲಕ ಮಳೆ ಲೆಕ್ಕ ಮಾಡುತ್ತಾರೆ. ಇದರ ಆಧಾರದಲ್ಲಿ ಕೃಷಿಕ, ಹವಾಮಾನ ಆಸಕ್ತ ಪಿ ಜಿ ಎಸ್ ಎನ್ ಪ್ರಸಾದ್ ಅವರು ತಾಲೂಕಿನ ಸರಾಸರಿಯನ್ನು ಲೆಕ್ಕ ಹಾಕಿದ್ದಾರೆ.
ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649
ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490