ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಗ್ರಾಮ ಈ ಕನಸುಗಳೊಂದಿಗೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಆರಂಭಗೊಂಡ ಟಾಸ್ಕ್ ಫೋರ್ಸ್ ಕೆಲಸ ಮುಂದುವರಿದಿದೆ. ಕಳೆದ 5 ವಾರಗಳಿಂದ ಪ್ರತೀ ವಾರ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಇದೀಗ ಈ ಅಭಿಯಾನದ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳಲ್ಲೂ ಜಾಗೃತಿಯನ್ನು ಮೂಡಿಸುವ ಕೆಲಸ ನಡೆಸಲಾಗಿದೆ.
![](https://theruralmirror.com/wp-content/uploads/2023/07/y.jpg)
ಗುತ್ತಿಗಾರಿನ ಸಂಜೀವಿನ ಮಹಿಳಾ ಒಕ್ಕೂಟ, ವರ್ತಕ ಸಂಘ ಗುತ್ತಿಗಾರು ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್ ಹಾಗೂ ಇತರ ಎಲ್ಲಾ ಸಂಘಸಂಸ್ಥೆಗಳ ಮೂಲಕ ರಚನೆಗೊಂಡ ಟಾಸ್ಕ್ ಫೋರ್ಸ್ ಕಳೆದ 5 ವಾರಗಳಿಂದ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಪ್ರತೀ ಗುರುವಾರ ಟಾಸ್ಕ್ ಫೋರ್ಸ್ ತಂಡ ಸದಸ್ಯರು ಗುತ್ತಿಗಾರು ಪೇಟೆಯಲ್ಲಿ ತೆರಳಿ ಅಂಗಡಿಗಳ ಮಾಲೀಕರಿಗೆ ಸ್ವಚ್ಛತಾ ಜಾಗೃತಿ ಬಗ್ಗೆ ತಿಳಿಸುತ್ತಿದ್ದರು. ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ಕೆಲಸ ಮಾಡುತ್ತಿದ್ದರು. ಇದೀಗ ಶಾಲಾ ಮಕ್ಕಳಲ್ಲೂ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಮುಕ್ತ ಗ್ರಾಮದ ಕನಸುಗಳನ್ನು ತೆರೆದಿಡಲಾಗಿದೆ.
ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದಲ್ಲಿ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ವಚ್ಛತಾ ಟಾಸ್ಕ್ ಫೋರ್ಸ್. #SwachhSurvekshan2023@ZP_DaksnKannada @swachhbharat pic.twitter.com/3mCDEclHgn
— theruralmirror (@ruralmirror) July 28, 2023
Advertisement
![](https://theruralmirror.com/wp-content/uploads/2023/07/IMG-20230728-WA0050.jpg)
ಸ್ವಚ್ಛ ಗ್ರಾಮ, ಪ್ಲಾಸ್ಟಿಕ್ ಮುಕ್ತ ಗ್ರಾಮದ ಕನಸುಗಳ ಸಾಕಾರಕ್ಕೆ ಸಾರ್ವಜನಿಕರ ನೆರವು ಅತೀ ಅಗತ್ಯವಾಗಿ ಬೇಕಿದೆ. ಸ್ವಚ್ಛ ಗುತ್ತಿಗಾರು ಅಭಿಯಾನಕ್ಕೆ ಮಕ್ಕಳು, ಸಾರ್ವಜನಿಕರು ಕೈಜೋಡಿಸಿದರೆ ಮಾತ್ರವೇ ಈ ಅಭಿಯಾನ ಯಶಸ್ಸಾಗಲು ಸಾಧ್ಯವಿದೆ. ಈಗಾಗಲೇ ರಚನೆಯಾಗಿರುವ ಸ್ವಚ್ಛತಾ ಟಾಸ್ಕ್‌ಫೋರ್ಸ್ ಈ ನಿಟ್ಟಿನಲ್ಲಿ ಕೆಲಸ ಮುಂದುವರಿಸಿದೆ.
#NoPlastic | ಪ್ಲಾಸ್ಟಿಕ್ ಬ್ಯಾಗ್ ಬಿಡಿ, ಬಟ್ಟೆ ಚೀಲ ಹಿಡಿಯಿರಿ…. | ಮಹಿಳೆಯರು ಆರಂಭಿಸಿದ ಬಟ್ಟೆ ಚೀಲ ಗೃಹೋದ್ಯಮ |