ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಕಪ್ಪತ ಗುಡ್ಡ ಬೆಂಕಿಗೆ ಆಹುತಿ ಆಗುವುದನ್ನು ತಪ್ಪಿಸುವ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಕಪ್ಪತಗುಡ್ಡ ಸಾಕಷ್ಟು ಸಸ್ಯ ವೈವಿಧ್ಯತೆ ಮತ್ತು ವನ್ಯಜೀವಿಯಿಂದ ಕೂಡಿದೆ. ಬೇಸಿಗೆ ಆರಂಭದಲ್ಲೇ ಗುಡ್ಡಕ್ಕೆ ಬೆಂಕಿ ತಗುಲಿ ಹೆಚ್ಚಿನ ಪ್ರದೇಶ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ಮುಂದೆ ಕಾಡ್ಗಿಚ್ಚು ತಪ್ಪಿಸುವ ದೃಷ್ಠಿಯಿಂದ ಕಪ್ಪತಗುಡ್ಡ ತಪ್ಪಲಿನ ಗ್ರಾಮಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಗ್ರಾಮಗಳಲ್ಲಿ ಭಿತ್ತಿ ಪತ್ರಗಳ ಪ್ರದರ್ಶನ, ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಗುಡ್ಡದ ತಪ್ಪಲಿನಲ್ಲಿರುವ ಜಮೀನುಗಳು ಹಾಗೂ ಕಪ್ಪತಗುಡ್ಡದಲ್ಲಿ ಯಾರೂ ಬೆಂಕಿ ಹಚ್ಚದಂತೆ ಎಚ್ಚರಿಕೆ ನೀಡಲಾಗುತ್ತಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement