ಅಯೋಧ್ಯೆ ಸಂಭ್ರಮ | ಮನೆ ಮನೆಗಳಲ್ಲಿ ರಾಮ ಸಂಭ್ರಮ | ಜೈ ಶ್ರೀರಾಮ್‌ ಘೋಷಣೆ | ಇಡೀ ದಿನ ರಾಮಾರ್ಪಣ |

January 22, 2024
7:00 PM
ದೇಶದಲ್ಲಿ ಇಂದು ಇಡೀ ದಿನ ರಾಮಾರ್ಪಣ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಟಾಪನೆಯ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿತ್ತು. ಎಲ್ಲೆಡೆಯೂ ಘೋಷಣೆ, ರಾಮತಾರಕ ಮಂತ್ರ  ಜಪಿಸುತ್ತಿದ್ದಂತೆಯೇ ರಾಮಲಲ್ಲಾ ಪ್ರತಿಷ್ಟಾಪನೆ ನಡೆದಿತ್ತು. ಇದೇ ವೇಳೆ ಇಂದು ಇಡೀ ದೇಶದಲ್ಲಿ ರಾಮಜಪ. ಶುಭ ಕಾರ್ಯಕ್ರಮಗಳಲ್ಲಿ ಪರದೆಯ ಮೂಲಕ ರಾಮ ವೈಭವ ವೀಕ್ಷಿಸಿದರೆ, ದೇವಸ್ಥಾನಗಳಲ್ಲಿ ಬೃಹತ್‌ ಪರದೆಯ ಮೂಲಕ ನೇರ ಪ್ರಸಾರ ವೀಕ್ಷಣೆ. ಇಷ್ಟೇ ಅಲ್ಲ ಮನೆ ಮನೆಗಳಲ್ಲೂ ರಾಮನ ಪೂಜೆ ನಡೆಯಿತು. ಸೋಮವಾರ….

ಸೋಮವಾರ ಹಮ್ಮಿಕೊಂಡಿದ್ದ ಮದುವೆ, ಉಪನಯನ ಸೇರಿದಂತೆ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ಅಯೋಧ್ಯೆಯ ನೇರ ಪ್ರಸಾರ ವೀಕ್ಷಣೆಗೆ ಟಿ ವಿ ಅಳವಡಿಕೆ ಮಾಡಲಾಗಿತ್ತು. ರಾಮಲಲ್ಲಾ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಜೈ ಶ್ರೀ ರಾಮ್‌ ಘೋಷಣೆ ಮೊಳಗಿತ್ತು .ಪ್ರತೀ ಮನೆಯಲ್ಲೂ ಸಂಭ್ರಮ ಮನೆಮಾಡಿತ್ತು. ಇದೇ ವೇಳೆ…

ಇದೇ ವೇಳೆ ಮನೆಗಳಲ್ಲಿ ರಾಮತಾರಕ ಹವನ, ರಾಮ ತಾರಕ ಮಂತ್ರ ಪಠಣ ನಡೆಯಿತು. ಸುಳ್ಯ ತಾಲೂಕಿನ ವಳಲಂಬೆಯ ಮುರಳಿಕೃಷ್ಣ ಭಟ್‌ ಅವರ ಮನೆಯಲ್ಲಿ ಇಡೀ ದಿನ ರಾಮಾರ್ಪಣಂ ಕಾರ್ಯಕ್ರಮವೇ ನಡೆಯಿತು. ಬೆಳಗ್ಗೆ ಶ್ರೀ ರಾಮತಾರಕ ಹವನ, ಲೋಕಕಲ್ಯಾಣಾರ್ಥವಾಗಿ ರಾಮತಾರಕ ಮಂತ್ರ ಜಪ,  ನಡೆಯಿತು. ಸಂಜೆ ರಾಮಗೀತಾ ಕಾರ್ಯಕ್ರಮದ ಮೂಲಕ ಅಕ್ಷತಾ ಮುರಳಿಕೃಷ್ಣ ಭಟ್‌ ಅವರಿಂದ ರಾಮ ಗೀತೆ ನಡೆಯಿತು. ಈ ಹಾಡುಗಳನ್ನು ಯೂಟ್ಯೂಬ್‌ ಮೂಲಕ ನೇರಪ್ರಸಾರವನ್ನೂ ಮಾಡಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ
April 1, 2026
6:13 AM
by: ಮಿರರ್‌ ಡೆಸ್ಕ್
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror