ಅಯೋಧ್ಯೆಯ(Ayodya) ರಾಮಮಂದಿರ ಮನೆ ಮನೆಗೂ ತಲಪುತ್ತಿದೆ. ಅಕ್ಷತೆ-ಮಂತ್ರಾಕ್ಷತೆಯ ರೂಪದಲ್ಲಿ ಅಯೋಧ್ಯೆಯ ಸಂಕಲ್ಪ ಮನಮುಟ್ಟುತ್ತಿದೆ. ದೇಶದ ಪ್ರತಿಯೊಂದು ಹಿಂದೂವಿನ(Hindu) ಮನೆ ಮನೆಗೆ ತಲುಪುತ್ತಿದೆ ಅಕ್ಷತೆ-ಮಂತ್ರಾಕ್ಷತೆ. ಇನ್ನು ಕೆಲವು ಮನೆಗೆ ತಲುಪಬೇಕಿದೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ನಾವು ಈಗಲೇ ಉಪಯೋಗ ಮಾಡಬೇಕಿಲ್ಲ. ಜನವರಿ 22ನೇ ತಾರಿಕಿನ ವರೆಗೆ ತಮ್ಮತಮ್ಮ ದೇವರ ಸ್ಟಾಂಡ್ ಲ್ಲಿ ಅಥವಾ ದೇವರಕೋಣೆಯಲ್ಲಿ(Pooja Room) ಇರಿಸಿಕೊಂಡು ದಿನನಿತ್ಯ ದೇವರಿಗೆ ಪೂಜೆ ಮಾಡುವಾಗ ಆ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸುವ ಶ್ರದ್ಧೆಯ ಅಕ್ಷತೆ.
ಜನವರಿ 22 ಸೋಮವಾರ ಮಧ್ಯಾಹ್ನ 12 ಘಂಟೆ 29 ನಿಮಿಷ 08 ಸೆಕೆಂಡು, ಮೇಷಲಗ್ನದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಹಿಂದೂಗಳ ಆರಾಧ್ಯಮೂರ್ತಿ ಶ್ರೀ ರಾಮಚಂದ್ರನ ಭವ್ಯ ಮೂರ್ತಿಯ ಪ್ರಾಣಪ್ರತಿಷ್ಠೆ ನಡೆಯುತ್ತದೆ. ಆ ಬಳಿಕ ಆ ಅಕ್ಷತೆಯೂ ಮಂತ್ರಾಕ್ಷತೆಯಾಗಿ ದಿವ್ಯ ಶಕ್ತಿಯಾಗುತ್ತದೆ ಎಂದು ಸಂಕಲ್ಪಿಸಿಕೊಂಡು ಪ್ರಸಾದದ ರೂಪದಲ್ಲಿ ಸೇವಿಸಬಹುದು.
ಏನು ಮಾಡಬಹುದು ಈ ಅಕ್ಷತೆ-ಮಂತ್ರಾಕ್ಷತೆಯನ್ನು :
1. ಬೆಯ್ಯುತ್ತಿರುವ ಅಕ್ಕಿಯೊಡನೆ ಈ ಮಂತ್ರಾಕ್ಷತೆಯನ್ನು ಹಾಕಿ ಅದನ್ನು ಅನ್ನವಾಗಿ ಪರಿವರ್ತಿಸಿ ಸೇವಿಸಬಹುದು.
2 ಮಂತ್ರಾಕ್ಷತೆಯನ್ನು ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದು.
3. ಪಾಯಸ ಮಾಡಿ ಸೇವಿಸಬಹುದು.
4. ನಮ್ಮ ಹಣ, ಚಿನ್ನ ಇಡುವ ಡ್ರಾಯರಲ್ಲಿ ಅಥವಾ ಕಾಪಾಟಿನಲ್ಲಿ ಅದನ್ನು ಭದ್ರವಾಗಿ ಇಡಬಹುದು.
5. ಮನೆಯ ಎದುರಿನ ಬಾಗಿಲಿನ ಮೇಲೆ ಬಟ್ಟೆಯಲ್ಲಿ ಸುತ್ತಿ ಅತ್ಯಂತ ಭದ್ರವಾಗಿ ಕಟ್ಟಿ ಇಡಬಹುದು.
6. ದೇವರ ಕೋಣೆಯಲ್ಲಿ ಕೂಡ ಭದ್ರವಾಗಿ ಶ್ರದ್ಧೆಯಿಂದ ಇಟ್ಟುಕೊಳ್ಳಬಹುದು.
ಶ್ರೀರಾಮ ಆದರ್ಶ. ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯ ಜೊತೆ ಜೊತೆಗೇ ಆದರ್ಶಗಳು ಪ್ರತೀ ವ್ಯಕ್ತಿಯ ಬದುಕಿನಲ್ಲಿ ಪ್ರತಿಷ್ಠಾಪನೆಯನ್ನೂ ಮಾಡಿಕೊಂಡಿದರೆ ದೇಶವೂ ರಾಮರಾಜ್ಯವಾಗಬಲ್ಲುದು. ಅದಕ್ಕಾಗಿಯೇ ಅಯೋಧ್ಯೆಯ ಶ್ರೀರಾಮ ಮಂದಿರ ಬಹಳಷ್ಟು ಮಹತ್ವ ಪಡೆದಿದೆ.