MIRROR FOCUS

ಮನೆ ಮನೆಯ ಹೃದಯ ಮಂದಿರಕೆ ಅಯೋಧ್ಯೆ ಮಂದಿರ | ಅಕ್ಷತೆ-ಮಂತ್ರಾಕ್ಷತೆಗಿಂತ ಸಂಕಲ್ಪವೇ ಮುಖ್ಯ | ಮಂತ್ರಾಕ್ಷತೆ ಏನು ಮಾಡಬಹುದು..? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಯೋಧ್ಯೆಯ(Ayodya) ರಾಮಮಂದಿರ  ಮನೆ ಮನೆಗೂ ತಲಪುತ್ತಿದೆ. ಅಕ್ಷತೆ-ಮಂತ್ರಾಕ್ಷತೆಯ ರೂಪದಲ್ಲಿ ಅಯೋಧ್ಯೆಯ ಸಂಕಲ್ಪ ಮನಮುಟ್ಟುತ್ತಿದೆ. ದೇಶದ ಪ್ರತಿಯೊಂದು ಹಿಂದೂವಿನ(Hindu) ಮನೆ ಮನೆಗೆ ತಲುಪುತ್ತಿದೆ ಅಕ್ಷತೆ-ಮಂತ್ರಾಕ್ಷತೆ. ಇನ್ನು ಕೆಲವು ಮನೆಗೆ ತಲುಪಬೇಕಿದೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ನಾವು ಈಗಲೇ ಉಪಯೋಗ ಮಾಡಬೇಕಿಲ್ಲ. ಜನವರಿ 22ನೇ ತಾರಿಕಿನ ವರೆಗೆ ತಮ್ಮತಮ್ಮ ದೇವರ ಸ್ಟಾಂಡ್ ಲ್ಲಿ ಅಥವಾ ದೇವರಕೋಣೆಯಲ್ಲಿ(Pooja Room) ಇರಿಸಿಕೊಂಡು ದಿನನಿತ್ಯ ದೇವರಿಗೆ ಪೂಜೆ ಮಾಡುವಾಗ ಆ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸುವ ಶ್ರದ್ಧೆಯ ಅಕ್ಷತೆ.

Advertisement
Advertisement

ಜನವರಿ 22 ಸೋಮವಾರ ಮಧ್ಯಾಹ್ನ 12 ಘಂಟೆ 29 ನಿಮಿಷ 08 ಸೆಕೆಂಡು, ಮೇಷಲಗ್ನದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಹಿಂದೂಗಳ ಆರಾಧ್ಯಮೂರ್ತಿ ಶ್ರೀ ರಾಮಚಂದ್ರನ ಭವ್ಯ ಮೂರ್ತಿಯ ಪ್ರಾಣಪ್ರತಿಷ್ಠೆ ನಡೆಯುತ್ತದೆ. ಆ ಬಳಿಕ ಆ ಅಕ್ಷತೆಯೂ ಮಂತ್ರಾಕ್ಷತೆಯಾಗಿ ದಿವ್ಯ ಶಕ್ತಿಯಾಗುತ್ತದೆ ಎಂದು ಸಂಕಲ್ಪಿಸಿಕೊಂಡು ಪ್ರಸಾದದ ರೂಪದಲ್ಲಿ ಸೇವಿಸಬಹುದು.

ಏನು ಮಾಡಬಹುದು ಈ ಅಕ್ಷತೆ-ಮಂತ್ರಾಕ್ಷತೆಯನ್ನು :

1. ಬೆಯ್ಯುತ್ತಿರುವ ಅಕ್ಕಿಯೊಡನೆ ಈ ಮಂತ್ರಾಕ್ಷತೆಯನ್ನು ಹಾಕಿ ಅದನ್ನು ಅನ್ನವಾಗಿ ಪರಿವರ್ತಿಸಿ ಸೇವಿಸಬಹುದು.

2  ಮಂತ್ರಾಕ್ಷತೆಯನ್ನು ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದು.

Advertisement

3. ಪಾಯಸ ಮಾಡಿ ಸೇವಿಸಬಹುದು.

4. ನಮ್ಮ ಹಣ, ಚಿನ್ನ ಇಡುವ ಡ್ರಾಯರಲ್ಲಿ ಅಥವಾ ಕಾಪಾಟಿನಲ್ಲಿ ಅದನ್ನು ಭದ್ರವಾಗಿ ಇಡಬಹುದು.

5. ಮನೆಯ ಎದುರಿನ ಬಾಗಿಲಿನ ಮೇಲೆ ಬಟ್ಟೆಯಲ್ಲಿ ಸುತ್ತಿ ಅತ್ಯಂತ ಭದ್ರವಾಗಿ ಕಟ್ಟಿ ಇಡಬಹುದು.

6. ದೇವರ ಕೋಣೆಯಲ್ಲಿ ಕೂಡ ಭದ್ರವಾಗಿ ಶ್ರದ್ಧೆಯಿಂದ ಇಟ್ಟುಕೊಳ್ಳಬಹುದು.

ಶ್ರೀರಾಮ ಆದರ್ಶ. ರಾಮ ಮಂದಿರದಲ್ಲಿ  ಪ್ರತಿಷ್ಠಾಪನೆಯ ಜೊತೆ ಜೊತೆಗೇ ಆದರ್ಶಗಳು ಪ್ರತೀ ವ್ಯಕ್ತಿಯ ಬದುಕಿನಲ್ಲಿ ಪ್ರತಿಷ್ಠಾಪನೆಯನ್ನೂ ಮಾಡಿಕೊಂಡಿದರೆ ದೇಶವೂ ರಾಮರಾಜ್ಯವಾಗಬಲ್ಲುದು. ಅದಕ್ಕಾಗಿಯೇ ಅಯೋಧ್ಯೆಯ ಶ್ರೀರಾಮ ಮಂದಿರ ಬಹಳಷ್ಟು ಮಹತ್ವ ಪಡೆದಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

1 day ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

1 day ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

1 day ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

1 day ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

1 day ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

1 day ago