ಆಯುರ್ವೇದವು ಭಾರತದ ಪುರಾತನ ಔಷಧ ಮತ್ತು ಚಿಕಿತ್ಸಾ ಪದ್ದತಿಯಾಗಿದೆ. ಆಧುನಿಕ ಔಷಧಿಗಳು ರೋಗ ಲಕ್ಷಣಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ ಅವುಗಳ ನಿರ್ಮೂಲನೆ ಪ್ರಯತ್ನಿಸುವಲ್ಲಿ ಯಶಸ್ವಿ ಆದರೆ ಆಯುರ್ವೇದವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದ ಜೀವಕೋಶಗಳನ್ನು ಒಳಗಿನಿಂದ ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತವೆ.
ಆಯುರ್ವೇದ ಔಷಧಿಯು ದೇಹ ಮತ್ತು ಮನಸ್ಸಿಗೆ ಚೈತನ್ಯವನ್ನು ನೀಡುವ ಮೂಲಕ ಆರೋಗ್ಯವನ್ನು ಕಾಪಾಡುವುದು ಯೋಗ ಧ್ಯಾನ,ಪಂಚಕರ್ಮ ಚಿಕಿತ್ಸೆ, ಮಸಾಜ್ ಮತ್ತು ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳಂತ ವಿವಿಧ ವಿಧಾನಗಳ ಮೂಲಕ ನುರಿತ ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಸಂಪೂರ್ಣ ಆರೋಗ್ವನ್ನು ಪಡೆಯಬಹುದು.
ಆಯುರ್ವೇದ ಚಿಕಿತ್ಸೆಯ ಪ್ರಯೋಜನಗಳು: ಆಯುರ್ವೇದವು ರೋಗದ ಮೂಲ ಕಾರಣವನ್ನು ಕಂಡುಹಿಡಿದು ಅದಕ್ಕನುಗುಣವಾಗಿ ರೋಗದ ಸಂಪೂರ್ಣ ನಿರ್ಮೂಲನೆ ಮಾಡಲು ಸಹಾಯಕಾರಿಯಾಗಿದೆ. ರೋಗಿಯ ಕಾಯಿಲೆಯು ವೇಗವಾಗಿ ಪರಿಹಾರ ಮಾಡಲು ಆಯುರ್ವೇದ ಔಷಧೀಯ ಸೇವನೆಯ ಜೊತೆಗೆ ಪಥ್ಯಾಹಾರ ವಿಹಾರಗಳನ್ನು ಅನುಸರಿಸುವುದು ಉತ್ತಮ. ಯೋಗಾಸನ, ಧ್ಯಾನ, ಪ್ರಾಣಾಯಾಮ, ಉತ್ತಮ ಆಹಾರ ಪದ್ಧತಿ,ದಿನಚರ್ಯ, ಋತುಚರ್ಯ ಮೊದಲಾದ ಉತ್ತಮ ಜೀವನ ಶೈಲಿಯೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗ ನಿರ್ಮೂಲನೆ ಮಾಡುವುದು ಆಯುರ್ವೇದ ಚಿಕಿತ್ಸಾ ಪದ್ಧತಿಯ ಮುಖ್ಯ ಉದ್ದೇಶ.
ಆಯುರ್ವೇದ ಪದ್ಧತಿಯಲ್ಲಿ ಬಳಸಲಾಗುವ ಕೆಲವು ಚಿಕಿತ್ಸಾ ಕ್ರಮಗಳು:
ಪಂಚಕರ್ಮ ಚಿಕಿತ್ಸೆ – ಇದನ್ನು ಶೋಧನ ಚಿಕಿತ್ಸೆ ಎಂದು ಕರೆಯಲಾಗುವುದು ಏಕೆಂದರೆ ಇದು ದೇಹದಲ್ಲಿರುವ ಕಲ್ಮಶ ಅಥವಾ ವಿಷಕಾರಿ ಪದಾರ್ಥಗಳನ್ನು ಹೊರಗೆ ಹಾಕಿ ದೇಹವನ್ನು ಶುದ್ಧೀಕರಿಸುವ ವಿಧಾನ. ವಮನ, ವಿರೇಚನ, ಬಸ್ತಿ, ನಸ್ಯ, ರಕ್ತ ಮೋಕ್ಷಣ (ಪಂಚಕರ್ಮ )
ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿ ದ್ರವ್ಯಗಳ ಬಳಕೆ – ಅರಿಷ್ಟ ಆಸವ ಚೂರ್ಣ ಕಷಾಯ ವಟಿ ಗುಗ್ಗುಲು ಲೇಹ ಮುಂತಾದ ಔಷಧಿಗಳ ಪ್ರಯೋಗ
ರಸ ಔಷಧಿಗಳ ಬಳಕೆ – ಸ್ವರ್ಣ ಭಸ್ಮ, ಲೋಹಭಸ್ಮ ಮಂತಾದವುಗಳ ಪ್ರಯೋಗ
ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಯುಕ್ತ ತೈಲಗಳ ಪ್ರಯೋಗ
ಅಭ್ಯಂಗ ಶಿರೋದಾರ ಶಿರೋಬಸ್ತಿ ಹೇರ್ ಪ್ಯಾಕ್ ಹೆಡ್ ಮಸಾಜ್ ಸೌಂದರ್ಯವರ್ಧಕ ಚಿಕಿತ್ಸೆ ಹಾಗೂ ಲೇಪಗಳ ಪ್ರಯೋಗ. ಆಯುರ್ವೇದವು ನಮ್ಮ ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಸಹಾಯ ಮಾಡಲು ಸಾಕಷ್ಟು ಸಾಬೀತಾದ ಫಲಿತಾಂಶಗಳನ್ನು ಹೊಂದಿದೆ. ಪೌಷ್ಟಿಕಾಂಶವಿರುವ ಆಹಾರ, ಹಿತಮಿತವಾದ ನೀರಿನ ಸೇವನೆ, ನೈಸರ್ಗಿಕವಾದ ತಾಜಾ ಹಣ್ಣು ತರಕಾರಿಗಳ ಬಳಕೆ,ರಕ್ತ ಚಂದನ ಮಂಜಿಷ್ಟ,ಯಷ್ಟಿಮಧು ಮೊದಲಾದ ದ್ರವ್ಯಗಳ ಲೇಪನ ಹಾಗೂ ಕುಂಕುಮಾದಿ. ಯಷ್ಟಿಮಧು ತೈಲಗಳಿಂದ ಮಸಾಜ್ ಮಾಡುವುದರಿಂದ ದೇಹ ಮತ್ತು ಮುಖದ ಕಾಂತಿಯನ್ನು ಹೆಚ್ಚಿಸುವುದು.
ದೇಹದ ತೂಕವನ್ನು ಸಮತೋಲನದಲ್ಲಿ ಕಾಪಾಡುಕೊಳ್ಳಲು ನೈಸರ್ಗಿಕ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು, ಉತ್ತಮ ವ್ಯಾಯಾಮ ಯೋಗ ಪಂಚ ಕರ್ಮ ಚಿಕಿತ್ಸೆ ಆಯುರ್ವೇದ ಪದ್ಧತಿಯಲ್ಲಿ ವಿವರಿಸಲಾಗಿದೆ.
ಮಾನಸಿಕ ಒತ್ತಡ ನಿದ್ರಾಹೀನತೆ ಇವುಗಳ ನಿರ್ಮೂಲನೆಗಾಗಿ ಧ್ಯಾನ ಯೋಗ ಪ್ರಾಣಾಯಾಮ ಶಿರೋದಾರ ಪಾದಾಬ್ಯಾಂಗ ರಸಾಯನ ಚಿಕಿತ್ಸೆಗಳ ಬಳಕೆಯನ್ನು ಮಾಡಲಾಗುವುದು .
ಲೈಂಗಿಕ ಸಮಸ್ಯೆಗಳು, ಬಂಜೆತನ ಪುರುಷತ್ವ ಹಾಗೂ ಸಂತತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾಜಿಕರಣ ಚಿಕಿತ್ಸಾ ಸೂತ್ರವನ್ನು ಬಳಸಲಾಗುವುದು, ಈ ವಾಜೀಕರಣ ಚಿಕಿತ್ಸೆ ಅಷ್ಟಾಂಗ ಆಯುರ್ವೇದದ ಎಂಟು ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ.
ಅಷ್ಟಾಂಗ ಆಯುರ್ವೇದ ಚಿಕಿತ್ಸೆ :– ಎಂಟು ಭಾಗಗಳನ್ನು ಹೊಂದಿರುವುದರಿಂದ ಇದನ್ನು ಅಷ್ಟಾಂಗ ಆಯುರ್ವೇದ ಎಂದು ಕರೆಯಲಾಗುತ್ತದೆ
1. ಕಾಯಚಿಕಿತ್ಸೆ – ದೇಹಕ್ಕೆ ಆಂತರಿಕ ಮತ್ತು ಬಾಹ್ಯ ಚಿಕಿತ್ಸೆಗಳು ( ಪಂಚಕರ್ಮ ) 2. ಬಾಲ ರೋಗ ಚಿಕಿತ್ಸೆ – ಶಿಶುಗಳಿಗೆ ಸಂಬಂಧಿಸಿದ ರೋಗಗಳ ಚಿಕಿತ್ಸೆ 3. ಗ್ರಹ ಚಿಕಿತ್ಸೆ – ಮಾನಸಿಕ ರೋಗಗಳ ಚಿಕಿತ್ಸೆ 4. ಊರ್ದ್ವಾಂಗ ಚಿಕಿತ್ಸೆ – ಕಿವಿ ಮೂಗು ಗಂಟಲು ಪ್ರದೇಶಕ್ಕೆ ಸಂಬಂಧಿಸಿದ ರೋಗಗಳ ಚಿಕಿತ್ಸೆ 5. ಶಲ್ಯ ಚಿಕಿತ್ಸೆ – ಶಸ್ತ್ರಚಿಕಿತ್ಸೆಗಳು 6 ವಿಷ ಚಿಕಿತ್ಸೆ – ವಿಷ ನಿರ್ಮೂಲನ ಚಿಕಿತ್ಸೆ 7. ರಸಾಯನ ಚಿಕಿತ್ಸೆ – ಸಪ್ತ ದಾತುಗಳನ್ನು ಪುನರ್ ಜೀವನಗೊಳಿಸುವ ವಿಧಾನಗಳು (Rejuvination ) 8. ವಾಜಿಕರಣ ಚಿಕಿತ್ಸೆ – ಇದು ಕಾಮೋತ್ತೆಜಕಗಳ ವಿಜ್ಞಾನ, ಪುರುಷತ್ವ ಮತ್ತು ಸಂತತಿಯ ಆರೋಗ್ಯದ ಬಗ್ಗೆ ತಿಳಿಸುವ ಚಿಕಿತ್ಸೆ ಆಯುರ್ವೇದವು ವಾತ, ಪಿತ್ತ, ಕಫ ಎನ್ನುವ ತ್ರಿದೋಷ ಸಿದ್ದಾಂತದ ಮೂಲಭೂತವಾಗಿದೆ, ಈ ತ್ರಿದೋಷವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದರಿಂದ ರೋಗಗಳನ್ನು ನಿರ್ಮೂಲನಗೊಳಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆಯುರ್ವೇದವು ದೀರ್ಘಾಯುಷ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ರೋಗವನ್ನು ತಡೆಗಟ್ಟಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಿರುತ್ತದೆ. ಆಯುರ್ವೇದ ಚಿಕಿತ್ಸೆಯನ್ನು ನುರಿತ ಆಯುರ್ವೇದ ತಜ್ಞರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಉತ್ತಮ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…