ಸುಳ್ಯ ತಾಲೂಕಿನ ಬೆಳ್ಳಾರೆಯ ವೇದಾಮೃತ ಚಿಕಿತ್ಸಾಲಯದಲ್ಲಿ ಮಾರ್ಗಶಿರ ಪೌರ್ಣಮಿ ದಿನ ಔಷಧಿ (ಡಿ.8) ರಂದು ಶೀತ, ಕೆಮ್ಮು, ಅಲರ್ಜಿ, ಅಸ್ತಮಾ ಹಾಗೂ ಇನ್ನಿತರ ಶ್ವಾಸಕೋಶದ ತೊಂದರೆಗಳಿಗೆ ಆಯುರ್ವೇದ ಔಷಧಿ ನೀಡಲಾಗುತ್ತಿದೆ. ಡಿಸೆಂಬರ್ 8ರಂದು ಗುರುವಾರ ಬೆಳಗ್ಗೆ 5.30 ರಿಂದ 6.30 ರವರೆಗೆ ಔಷಧಿ ವಿತರಣೆ ನಡೆಯುತ್ತದೆ. ಈ ಔಷಧಿಯು ವರ್ಷಕ್ಕೆ ಒಂದು ಬಾರಿ, ಅಂದರೆ ಮಾರ್ಗಶಿರ ಪೌರ್ಣಮಿಯ ದಿನದಂದು ಕೊಡುವ ಔಷಧಿಯಾಗಿದೆ. ಎರಡು ವರ್ಷ ಮೇಲ್ಪಟ್ಟ ಎಲ್ಲರೂ ತೆಗೆದುಕೊಳ್ಳಬಹುದು ಎಂದು ವೇದಾಮೃತ ಚಿಕಿತ್ಸಾಲಯದ ಡಾ.ಕಾವ್ಯ ಜೆ ಎಚ್ ತಿಳಿಸಿದ್ದಾರೆ. ಆಸಕ್ತರು ಡಿ.7 ರ ಮೊದಲು ನೋಂದಾಯಿಸಲು ತಿಳಿಸಲಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಡಿ.8 | ವೇದಾಮೃತ ಚಿಕಿತ್ಸಾಲಯದಲ್ಲಿ ಮಾರ್ಗಶಿರ ಪೌರ್ಣಮಿ ದಿನ ಔಷಧಿ"