ಬಹುಗುಣಕಾರಿ ಅಂಟುವಾಳಕಾಯಿಯ ಆಯುರ್ವೇದ ಪ್ರಯೋಜನಗಳು | ಅಡ್ಡ ಪರಿಣಾಮಗಳಿಲ್ಲದ ನೈಸರ್ಗಿಕ ಮಾರ್ಜಕ |

May 28, 2024
10:14 PM

ಬಹಳ ಹಿಂದೆ ನಮ್ಮ ಹಿರಿಯರು  ಸ್ವಚ್ಛತೆಗಾಗಿ  ಸೋಪುಗಳ(Soap) ಬದಲು ಅಂಟುವಾಳ ಕಾಯಿಯನ್ನೇ(Soap nut) ಅವಲಂಬಿಸಿದ್ದರು. ಇಂದಿಗೂ ಚಿನ್ನಾಭರಣಗಳನ್ನು(Gold Ornaments) ಸ್ವಚ್ಛಗೊಳಿಸಲು ಅಂಟುವಾಳ ಕಾಯಿಯನ್ನೇ ನೆಚ್ಚಿಕೊಂಡಿದ್ದವರಿದ್ದಾರೆ. ಏಕೆಂದರೆ ಇದೊಂದು ನೈಸರ್ಗಿಕ ಮಾರ್ಜಕವಾಗಿದ್ದು(Natural Detergent) ಯಾವುದೇ ಅಡ್ಡ ಪರಿಣಾಮಗಳಿಲ್ಲದಿರುವುದು, ಯಾವುದೇ ಹಾನಿಕಾರಕ ರಾಸಾಯನಿಕವಿಲ್ಲದಿರುವುದು(Harmful chemical), ಚರ್ಮಕ್ಕೆ(Skin) ಸುರಕ್ಷಿತವಾಗಿರುವುದು ಮೊದಲಾದವು ಹೆಚ್ಚಿನ ಜನಪ್ರಿಯತೆಗೆ ಕಾರಣವಾಗಿತ್ತು.

Advertisement

ಆದರೆ ಇದನ್ನು ಸಂಗ್ರಹಿಸುವುದು ಮತ್ತು ಉಪಯೋಗಿಸುವ ಮುನ್ನ ಕೊಂಚ ಜಜ್ಜಿ ರಸ ತೆಗೆಯುವುದು ಮೊದಲಾದ ಶ್ರಮದ ಕೆಲಸಗಳಿರುವುದರಿಂದ ಇಂದಿನ ಧಾವಂತದ ಯುಗದಲ್ಲಿ ಅಂಟುವಾಳ ಯಾರಿಗೂ ಬೇಡವಾಗಿದೆ. ಆದರೆ ಇಂದಿಗೂ ಹಸಿಯಾಗಿ ಸಿಗದಿದ್ದರೂ ಒಣಫಲಗಳ ರೂಪದಲ್ಲಿ ಅಂಟುವಾಳ ಕಾಯಿ ಗ್ರಂಥಿಗೆ ಅಂಗಡಿಗಳಲ್ಲಿ ದೊರಕುತ್ತದೆ. ನೀರನ್ನು ಸಿಂಪಡಿಸಬಲ್ಲ ವ್ಯವಸ್ಥೆಯಿರುವ ಬಾಟಲಿಯೊಂದರಲ್ಲಿ ಕಾಲು ಲೀಟರ್ ನೀರು, ತಲಾ ಹದಿನೈದು ಮಿಲಿಲೀಟರ್ ನಷ್ಟು ಅಂಟುವಾಳ ರಸ ಸೇರಿಸಿ ಮಿಶ್ರಣ ಮಾಡಿ. ಈ ನೀರನ್ನು ಗಾಜಿನ ಮೇಲೆ ಸಿಂಪಡಿಸಿ ಒಣಗಿರುವ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಗಾಜುಗಳು ಸ್ಪಟಿಕದಂತೆ ಹೊಳೆಯುತ್ತವೆ.

ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಆ ನೀರಿನಲ್ಲಿ ವಿಗ್ರಹಗಳನ್ನು ಮುಳುಗಿಸಿಡಿ. ಸುಮಾರು ಅರ್ಧ ಗಂಟೆ ಅಥವಾ ಒಂದು ಗಂಟೆಯ ಬಳಿಕ ವಿಗ್ರಹವನ್ನು ಹೊರತೆಗೆದು ಇದೇ ನೀರಿನಲ್ಲಿ ಅದ್ದಿದ ಹತ್ತಿಯ ಒರಟು ಬಟ್ಟೆಯಿಂದ ಕೊಂಚ ಒತ್ತಡ ನೀಡಿ ಒರೆಸಿ. ತುಕ್ಕು ಸುಲಭವಾಗಿ ನಿವಾರಣೆಯಾಗಿ ವಿಗ್ರಹಗಳು ತಮ್ಮ ಮೂಲಬಣ್ಣದಲ್ಲಿ ಹೊಳೆಯುತ್ತವೆ. ಚಿನ್ನಾಭರಣಗಳನ್ನು ಅಂಟುವಾಳ ಕಾಯಿಯ ಪುಡಿ ಬೆರೆಸಿದ ನೀರಿನಲ್ಲಿ ನೆನೆಸಿ  ಸುಮಾರು ಐದು ನಿಮಿಷಗಳ ಬಳಿಕ ಹಳೆಯ ಮೃದುವಾದ ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ನಯವಾಗಿ ಉಜ್ಜಿ ಕೊಳೆಯನ್ನು ತೆಗೆಯಿಸಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ. ನಿಮ್ಮ ಚಿನ್ನಾಭರಣಗಳು ಹೊಸತರಂತೆ ಹೊಳೆಯುತ್ತವೆ.

ಮನೆಯ ಅಂದ ಹೆಚ್ಚಿಸುವ ರತ್ನಗಂಬಳಿಯ ಸ್ವಚ್ಛತೆಯೇ ದೊಡ್ಡ ಸಮಸ್ಯೆ. ಏಕೆಂದರೆ ನೀರು ಕುಡಿದ ಬಳಿಕ ಈ ಕಂಬಳಿ ಹೆಣಭಾರವಾಗುತ್ತದೆ. ಇದನ್ನು ಹೊರಲು ಹತ್ತಾರು ಜನರ ಸಹಾಯ ಬೇಕಾಗುತ್ತದೆ. ಬದಲಿಗೆ ಅಂಟುವಾಳ ರಸ ಬೆರೆತ ನೀರನ್ನು ರತ್ನಗಂಬಳಿಯ ಎಲ್ಲೆಡೆ ನವಿರಾಗಿ ಸಿಂಪಡಿಸಿ ಕೊಂಚ ಹೊತ್ತಿನ ಬಳಿಕ ಬ್ರಶ್ ಮೂಲಕ ಅಥವಾ ವ್ಯಾಕ್ಯೂಮ್ ಕ್ಲೀನರ್ ಮೂಲಕ ಸ್ವಚ್ಛಗೊಳಿಸಿ. ಇದರಿಂದ ಕಂಬಳಿಯನ್ನು ಅದರ ಸ್ಥಾನದಿಂದ ತೆಗೆಯದೆಯೇ ಸ್ವಚ್ಛಗೊಳಿಸಬಹುದು. ಇದು ಒಣಗಲೂ ಅತಿ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚೂ ಕಡಿಮೆ ಸ್ವಚ್ಛಗೊಳಿಸಿದ ಮರುಕ್ಷಣವೇ ಇದನ್ನು ಬಳಸಲು ಪ್ರಾರಂಭಿಸಬಹುದು.

ಇನ್ನು ಚರ್ಮ ಹಾಗೂ ಕೂದಲಿಗೆ ಅಂಟುವಾಳ ಕಾಯಿ ಹೇಳಿ ಮಾಡಿಸಿದಂತಾಗಿದೆ. ರಾಸಾಯಿನಕ ವಸ್ತುಗಳನ್ನು ಬಳಸಿದ ಸೋಪು ಅಥವಾ ಶಾಂಪು ಬದಲು ಅಂಟುವಾಳ ಕಾಯಿ ಪುಡಿ ಬಳಸಿದರೆ ಉತ್ತಮ. ಇದಲ್ಲದೆ ಆರೋಗ್ಯ ಸುಧಾರಣೆಗೂ ಅಂಟುವಾಳ ಕಾಯಿ ಬಹಳ ಉಪಯೋಗಿ

  • ದೇಹದ ಉರಿಯೂತವಿದ್ದಲ್ಲಿ ಅಂಟುವಾಳಕಾಯಿ ನೊರೆಯನ್ನು ದೇಹಕ್ಕೆ ಉಜ್ಜಿದರೆ ಉಪಶಮನವಾಗುತ್ತದೆ.
  • ಹೊಟ್ಟೆಯಲ್ಲಿ ಹುಳುಗಳಿರುವ ಕಾರಣ, ಮಕ್ಕಳ ಹೊಟ್ಟೆ ನಿರಂತರವಾಗಿ ನೋವುಂಟುಮಾಡುತ್ತದೆ. ಅಂತಹ ಸಂದರ್ಭದಲ್ಲಿ ಕಾಲು ಗ್ರಾಂ ಅಂಟುವಾಳಕಾಯಿ ಸಿಪ್ಪೆ ಪುಡಿ ಬೆಲ್ಲದಿ ಬೆರೆಸಿ ನೆಕ್ಕಿದರೆ ಹುಳುಗಳು ಬೀಳುತ್ತವೆ.
  • ಕಫ ಅಂಟಿಕೊಂಡಿದ್ದರೆ ಬಾಯಿಯಲ್ಲಿ ಅಂಟುವಾಳಕಾಯಿ ಹಿಡಿದುಕೊಂಡು ಸ್ವಲ್ಪ ಸ್ವಲ್ಪ ಜಗಿಯುತ್ತಿದ್ದರೆ ಕಫ ತೆಳುವಾಗಿ ಹೊರಬರುತ್ತದೆ.
  • ವ್ಯಕ್ತಿಯು ಮೂರ್ಛೆರೋಗದಿಂದ ಬಿದ್ದಿದ್ದರೆ, ಅಂಟುವಾಳಕಾಯಿ ಬೇಯಿಸಿದ ನೀರನ ಹನಿಗಳನ್ನು ಮೂಗಿನಲ್ಲಿ ಬಿಡುವುದು ಉತ್ತಮ ಪರಿಹಾರವಾಗಿದೆ.
  • ಹೊಟ್ಟೆಗೆ ಯಾವುದೇ ರೀತಿಯ ವಿಷ ಸೇರಿದರೆ ಅಂಟುವಾಳಕಾಯಿ ನೀರು ಕುಡಿಯಲು ಕೊಡಬೇಕು. ಇದರಿಂದ ವಾಂತಿಯಾಗುತ್ತದೆ ಮತ್ತು ವಿಷವು ಇಳಿಯುತ್ತದೆ.
  • ಮಸಾಲೆಯುಕ್ತ ಶಿಕೆಕಾಯಿಯನ್ನು ತಯಾರಿಸುವಾಗ ಅಂಟುವಾಳಕಾಯಿ ಬಳಸಲಾಗುತ್ತದೆ. ಇದು ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ.
  • ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ಆ ನೀರನ್ನು ದೇಹಕ್ಕೆ ಹಚ್ಚಿದರೆ ದೇಹದಲ್ಲಿ ಮೂಡುವ ಪಿತ್ತದ ಸಮಸ್ಯೆ ಕಡಿಮೆಯಾಗುತ್ತದೆ.
  • ಹಠಾತ್ತನೆ ಮೂತ್ರ ತಡೆ ಉಂಟಾದರೆ, ಉತ್ತತ್ತಿ ಬೀಜಗಳು ಮತ್ತು ಅಂಟುವಾಳಕಾಯಿ ಬೀಜಗಳನ್ನು ನೀರಿನಲ್ಲಿ ತೇಯ್ದು ಕಬ್ಬೊಟ್ಟೆಯ ಮೇಲೆ ಲೇಪಿಸಬೇಕು ಮತ್ತು ಶಾಖ ನೀಡಬೇಕು, ಇದು ಮೂತ್ರವನ್ನು ತೆರವುಗೊಳಿಸುತ್ತದೆ.

ಸಂಗ್ರಹ : ಡಾ. ಜಿತೇಂದ್ರ ಜೋಕಿ

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಶಿರಾಡಿ ಘಾಟಿ | ರಾಷ್ಟ್ರೀಯ ಹೆದ್ದಾರಿ -ರೈಲು ಸಂಪರ್ಕ ಅಭಿವೃದ್ದಿಗೆ ಸಂಯೋಜಿತ ಡಿಪಿಆರ್ ತಯಾರಿಸಲು ಮನವಿ
April 17, 2025
6:41 PM
by: The Rural Mirror ಸುದ್ದಿಜಾಲ
ಮಳೆಗಾಲ ಸಿದ್ಧತೆ | ಚರಂಡಿ ಹೂಳೆತ್ತಲು ಜಿಲ್ಲಾಧಿಕಾರಿ ಸೂಚನೆ
April 17, 2025
6:35 PM
by: The Rural Mirror ಸುದ್ದಿಜಾಲ
ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”
April 17, 2025
10:44 AM
by: ದ ರೂರಲ್ ಮಿರರ್.ಕಾಂ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror