ನವರಾತ್ರಿ ಎನ್ನುವ ಆಯುರ್ವೇದ ಹಬ್ಬ | ನವರಾತ್ರಿಯ ಒಂಭತ್ತು ದಿನಗಳಲ್ಲಿ ಸೇವಿಸಬೇಕಾದ ಔಷಧಿಗಳು |

October 17, 2023
8:55 PM
ಹಿಂದಿ ಭಾಷಾ ಲೇಖನದಿಂದ ಕನ್ನಡಕ್ಕೆಅನುವಾದಿಸಿದ ವಿಶ್ವೇಶ್ವರ ಭಟ್, ಉಂಡೆಮನೆ ಅವರ ಬರಹ ಇದು...

ನವರಾತ್ರಿಯು ನವದುರ್ಗೆಯರೊಂದಿಗೆ ಆಯುರ್ವೇದದ ಔಷಧಿಯ ಸೇವನೆಯ ಪರ್ವವೂ ಹೌದು. ನಮ್ಮ ಋಷಿ ಮುನಿಗಳು ಈ ಋತು(ಕಾಲ)ವಿನಲ್ಲಿ ಸೇವಿಸಬೇಕಾದ ಕೆಲವು ಔಷಧಿಗಳನ್ನು ಉಲ್ಲೇಖಿಸಿದ್ದಾರೆ. ಇವುಗಳನ್ನು ಪ್ರತ್ಯೇಕ ದಿನಗಳಲ್ಲಿ ಸೇವಿಸುವುದರಿಂದ ನಮ್ಮ ಶಾರೀರಕ, ಮಾನಸಿಕ ಕ್ಷಮತೆಯು ಹೆಚ್ಚಾಗಿ ನಾವು ನಮ್ಮ ಶಕ್ತಿ-ತೇಜಸ್ಸು-ಬಲ-ಬುದ್ಧಿಗಳನ್ನು ಸದೃಢಗೊಳಿಸಬಹುದು.

Advertisement
Advertisement

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ನಿರೋಗಿಗಳನ್ನಾಗಿಸಿ ದೀರ್ಘಕಾಲ ಸ್ವಸ್ಥ ಜೀವನ ನಡೆಸಲು ನೆರವಾಗುವ
ಒಂಬತ್ತು ತರದ ಈ ದಿವ್ಯ ಮಹೌಷಧಿಗಳು ನಿಸ್ಸಂದೇಹವಾಗಿ ಪ್ರಭಾವಶಾಲಿಗಳಾಗಿವೆ. ಔಷಧ ರೂಪದಲ್ಲಿರುವ ನವದುರ್ಗೆಗಳ ಸೇವನೆಯನ್ನು ಇನ್ನು ಬರುವ ಚಳಿಗಾಲಕ್ಕೆ ಮುನ್ನುಡಿಯೆಂಬಂತೆ ಸ್ವೀಕರಿಸಬಹುದು.

Advertisement
ಈ ಔಷಧಗಳು- 1.ಹರಿದ್ರಾ, 2. ಬ್ರಾಹ್ಮೀ, 3. ಚಂದಸೂರ, 4. ಕೂಷ್ಮಾಂಡ, 5. ಅಲಸೀ, 6. ಮಾಚಿಕಾ, 7. ನಾಗದಾನ, 8. ತುಲಸೀ, 
9. ಶತಾವರೀ.

1. ಪ್ರಥಮ :- ಶೈಲಪುತ್ರೀ ಯಾ ಹರಿದ್ರಾ - ಅನೇಕ ಪ್ರಕಾರಗಳ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯಿರುವ ಮದ್ದಿನ ಗಣಿ. ಆಯುರ್ವೇದದ ಪ್ರಧಾನ ಔಷಧ. ಇದರಲ್ಲಿ ಏಳು ವಿಧಗಳಿವೆ.

2. ದ್ವಿತೀಯ :- ಬ್ರಹ್ಮಚಾರಿಣೀ ಯಾ ಬ್ರಾಹ್ಮೀ(ಸರಸ್ವತೀ): ಇದು ಆಯುಸ್ಸು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವುದು. ರಕ್ತವಿಕಾರಗಳನ್ನು ನಾಶ ಮಾಡುತ್ತದೆ. ಸ್ವರ ಶುದ್ಧಿಗೆ ದಿವ್ಯೌಷಧ. ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.
ವಾಯು,ಮೂತ್ರಸಂಬಂಧದ ರೋಗಗಳಿಗೆ ಮುಖ್ಯೌಷಧ.
3. ಚಂದ್ರಘಂಟಾ ಯಾ ಚಂದ್ರಸೂರ:- ಇದನ್ನು ಚಮಸೂರ ಎಂದೂ ಕರೆಯುತ್ತಾರೆ. ಇದು ಕೊತ್ತಂಬರಿಯ ರೀತಿಯಲ್ಲಿರುವ ಗಿಡ. ಇದರ ಎಲೆಗಳನ್ನು ಬಳಸಿ ಪಲ್ಯಗಳನ್ನು ಮಾಡುತ್ತಾರೆ. ಸ್ಥೂಲಕಾಯವನ್ನು ಕರಗಿಸಲು ಸಹಕಾರಿ. ಇದರಿಂದ ಇದಕ್ಕೆ ಚರ್ಮಹಂತೀ ಎಂಬ ಹೆಸರೂ ಇದೆ. ಶಕ್ತಿವರ್ಧಕ, ಹೃದ್ರೋಗ ನಿವಾರಕವಾದ ಚಂದ್ರಿಕಾ ಉಪಯುಕ್ತ ಗಿಡ.
4. ಕೂಷ್ಮಾಂಡ:- ಕುಂಬಳ. ಇದು ಪುಷ್ಟಿಕಾರಕ, ವೀರ್ಯವರ್ಧಕ, ರಕ್ತಸಂಬಂಧೀ ಸಮಸ್ಯೆಗಳ ಪರಿಹಾರಕ ಮತ್ತು ಉದರ ಶುದ್ಧಿಗೆ ಸಹಾಯಕ. ಮಾನಸಿಕವಾಗಿ ಅಬಲರಾದವರಿಗೆ ಇದು ದಿವ್ಯೌಷಧ.ಶರೀರದ ವೀಶೇಷವಾಗಿ ಹೃದಯ ಸಂಬಂಧೀ ಕಾಯಿಲೆಗಳಿಗೆ ರಾಮಬಾಣದಂತಿದೆ.
5. ಸ್ಕಂದಮಾತಾ ಯಾ ಅಲಸೀ :- ಅಗಸೆ ಬೀಜ. ವಾತ, ಪಿತ್ತ, ಕಫಗಳ ನಿಯಂತ್ರಣದಲ್ಲಿ ಸಹಾಯಕ. 
"ಅಲಸೀ ನೀಲಪುಷ್ಪೀ ಪಾವರ್ತತೀ ಸ್ಯಾದುಮಾ ಕ್ಷುಮಾ| 
ಅಲಸೀ ಮಧುರಾ ತಿಕ್ತಾ ಸ್ತ್ರಿಗ್ಧಪಾಕೇ ಕದರ್ಗರುಃ|| 
ಉಷ್ಣಾ ದೃಷ ಶುಕವಾತಂಧೀ ಕಫ ಪಿತ್ತ ವಿನಾಶಿನೀ||

6. ಷಷ್ಠಮ ಕಾತ್ಯಾಯನೀ ಯಾ ಮೋಯಿಯಾ:- ಅಂಬಾ,ಅಂಬಾಲಿಕಾ,ಅಂಬಿಕಾ,ಮಾಚಿಕಾ ಇತರ ಹೆಸರುಗಳು.ಇದು ಕಫ,ಪಿತ್ತ ಮತ್ತು ಕಂಠ ಸಂಬಂಧೀ ಕಾಯಿಲೆಗಳ ನಿವಾರಣೆಗೆ ಸಹಾಯಕ. 
7. ಸಪ್ತಮ ಕಾಲರಾತ್ರೀ ಯಾ ನಾಗದೌನ್:- ಸರ್ವರೋಗ ನಿವಾರಕ.ಮಸ್ತಿಷ್ಕದ ಎಲ್ಲಾ ವಿಕಾರಗಳನ್ನು ನಿವಾರಿಸಿ ವಿಜಯಶಾಲಿಗಳನ್ನಾಗಿಸುವುದು. ವಿಷ ನಿವಾರಕವೂ ಹೌದು.
8. ತುಲಸೀ:- ಏಳು ವಿಧಗಳಿವೆ. ರಕ್ತಶುದ್ಧಿ,ಹೃದ್ರೋಗ ನಿವಾರಣೆಗೆ ಸಹಾಯಕ. 
ತುಲಸೀ ಸುರಸಾ ಗ್ರಾಮ್ಯಾ ಸುಲಭಾ ಬಹುಮಂಜರೀ|
ಅಪೇತರಾಕ್ಷಸೀ ಮಹಾಗೌರೀ ಶೂಲಘ್ನೀ ದೇವದುಂದುಭಿಃ||
ತುಲಸೀ ಕಟುಕಾ ತಿಕ್ತಾಹುಧ ಉಷ್ಣಾಹಾಹಪಿಪಿತ್ತಕೃತ್|
ಮರುದನಿಪ್ರದೋ ಹಧ ತೀಕ್ಷ್ಣಾಷ್ಣಃ ಪಿತ್ತಲೋ ಲಘುಃ||
9. ನವಮ ಶತಾವರೀ:- ನಾರಾಯಣೀ ಎಂದೂ ಕರೆಯುತ್ತಾರೆ. ಬುದ್ಧಿ-ವೀರ್ಯಬಲಗಳನ್ನು ಹೆಚ್ಚಿಸುವುದು.ಹೃದ್ಬಲ ವರ್ಧಕ. ರಕ್ತವಿಕಾರ ನಾಶಕ. ಸಿದ್ಧಿದಾತ್ರಿಯಾದ ಇದನ್ನು ನಿಯಮಾನುಸಾರ ಸೇವಿಸಿದರೆ ಸರ್ವಕಷ್ಟಗಳು ನಿವಾರಣೆಯಾಗುತ್ತವೆ.

- ಹಿಂದಿ ಭಾಷಾ ಲೇಖನದಿಂದ ಕನ್ನಡಕ್ಕೆಅನುವಾದಿಸಿದ ವಿಶ್ವೇಶ್ವರ ಭಟ್, ಉಂಡೆಮನೆ

Navratri, the nine auspicious days, is one of the most anticipated occasions. It represents the triumph of good over evil in religious terms. It is celebrated in various forms throughout India and is very important. The nine auspicious days of Navratri are one of the most anticipated times in Ayurveda. The festival of Navratri marks a change in season and weather. According to Ayurveda, our bodies prepare for the upcoming seasonal shift by balancing our doshas during the nine days of the Navratri festival.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?
May 15, 2025
10:06 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮುಂದಿನ ಒಂದು ವರ್ಷ ಕೆಲವು ರಾಶಿಗಳಿಗೆ ಗುರು ಪ್ರವೇಶದಿಂದ ಆಗುವ ತೊಂದರೆಗಳು ಏನು..?
May 15, 2025
7:45 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …
May 14, 2025
9:43 PM
by: ಪ್ರಬಂಧ ಅಂಬುತೀರ್ಥ
ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ
May 14, 2025
11:31 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group