ಭಾರತದ ಇತ್ತೀಚೆಗಿನ ಆರೋಗ್ಯ ಸಮೀಕ್ಷೆಗಳ ವರದಿಗಳನ್ನು ಗಮನಿಸಿದರೆ ಸುಮಾರು 14 ಕೋಟಿ ಜನರು ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದಾರೆ, ಅಂದರೆ ಪ್ರತೀ 10 ಮಂದಿಯಲ್ಲಿ ಒಬ್ಬರು ಥೈರಾಯ್ಡ್ ಮೂಲದ ಕಾಯಿಲೆಗಳಿಗೆ ಬಲಿಯಾಗಿದ್ದಾರೆ. ಥೈರಾಯ್ಡ್ ಗ್ರಂಥಿಯ ಅಸಮರ್ಥತೆಯಿಂದಾಗಿ ಇತರ ಕಾಯಿಲೆಗಳು ಹುಟ್ಟಿಕೊಳ್ಳುತ್ತದೆ. ಈ ಕಾಯಿಲೆಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಪರಿಣಾಮಕಾರಿ ಚಿಕಿತ್ಸೆಗಳಿವೆ ಎಂಬುದು ಇದೀಗ ಜನಪ್ರಿಯವಾಗುತ್ತಿದೆ.….ವಿಡಿಯೋ ಇದೆ…
ಥೈರಾಯ್ಡ್ ಎಂಬುವುದು ಮನುಷ್ಯರ ಗಲ್ಲದ ಕೆಳಗೆ ಕತ್ತಿನ ತಳದಲ್ಲಿ ಇರುವ ಚಿಟ್ಟೆಯ ಆಕಾರದ ಸಣ್ಣ ಗ್ರಂಥಿಯಾಗಿದೆ. ಇದು ಮಾನವ ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಗ್ರಂಥಿಯು ಹೃದಯ, ಸ್ನಾಯುಗಳು, ಮಾಂಸಖಂಡಗಳು, ಪಚನ ಕ್ರಿಯೆ, . ಮೆದುಳಿನ ಬೆಳವಣಿಗೆ ಮತ್ತು ಎಲುಬುಗಳ ಸುಸ್ಥಿತಿಯ ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಥೈರಾಯ್ಡ್ ಹಾರ್ಮೋನ್ ಗಳ ಸಮರ್ಥ ನಿರ್ವಹಣೆಯು ನಮ್ಮ ಆಹಾರ ದಲ್ಲಿರುವ ಅಯೋಡಿನ್ ಸುಗಮ ಒದಗಣೆಯನ್ನು ಅವಲಂಬಿಸಿದೆ. ಥೈರಾಯ್ಡ್ ಗ್ರಂಥಿಯು ತನ್ನ ಹಾರ್ಮೋನ್ ಉತ್ಪಾದಿಸಲು ಅಯೋಡಿನ್ ಅತ್ಯಗತ್ಯ. ಆದುದರಿಂದ ಅಯೋಡಿನ್ ನ ಕೊರತೆ ಇದ್ದಲ್ಲಿ ಥೈರಾಯ್ಡ್ ಹಾರ್ಮೋನ್ ಉತ್ಪಾದಿಸುವಲ್ಲಿ ತೊಂದರೆ ಉಂಟಾಗುತ್ತದೆ.
ಭಾರತ ಸರ್ಕಾರದ ನಿಯಮದ ಪ್ರಕಾರ 1 ಗ್ರಾಂ ಉಪ್ಪನ್ನು 30 ఎంసిజి ಅಯೋಡಿನ್‌ನೊಂದಿಗೆ ಬಲಪಡಿಸಲಾಗಿದೆ, ಆದರೆ ಇಂದಿನ ದಿನಗಳಲ್ಲಿ ಉಪ್ಪಿನ ದೈನಂದಿನ ಸೇವನೆಯು ಶಿಫಾರಸು ಮಾಡಲಾದ ಉಪ್ಪಿನ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ದಿನದಲ್ಲಿ 10 ರಿಂದ 12 ಗ್ರಾಂ ಉಪ್ಪನ್ನು ಸೇವನೇ ಮಾಡುತ್ತಾರೆ,ಉಪ್ಪಿನ ಸೇವನೆಯ ವಿಷಯದಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರಗಳಲ್ಲಿ ಬಹಳ ದೊಡ್ಡ ಭಿನ್ನತೆ ಇರುವುದಾಗಿ ಕಂಡುಬರುವುದಿಲ್ಲ, ಕೇವಲ ಉಪ್ಪು ಅಯೋಡಿನ್ ನ ಏಕೈಕ ಮೂಲವಲ್ಲ. ಅಲೂಗಡ್ಡೆ ಮತ್ತು ನೆಲದಡಿಯಲ್ಲಿ ಬೆಳೆಯುವ ಎಲ್ಲ ಬೇರುಗಳು ಗೆಡ್ಡೆಗೆಣಸುಗಳು ಸಹ ಇದರ ಮೂಲ. ಇತ್ತೀಚೆಗಿನ ದಿನಗಳಲ್ಲಿ ಅಯೋಡಿನ್ ಕೊರತೆಗಿಂತಲು ಅಧಿಕ ಪ್ರಮಾಣದ ಸೇವನೆಯಿಂದ ಆರೋಗ್ಯ ಸಮಸ್ಯೆ ಉದ್ಭವಿಸುತ್ತಿರುವುದಾಗಿ ಅಧ್ಯಯನಗಳು ಸೂಚಿಸುತ್ತವೆ.
ಭಾರತದಲ್ಲಿ ಐದು ಸಾಮಾನ್ಯ ಥೈರಾಯ್ಡ್ ಕಾಯಿಲೆಗಳು:
(1) ಹೈಪೋಥೈರಾಯ್ತಿಸಮ್,
(2) ಹೈಪರ್ ಥೈರಾಯ್ತಿಸಮ್,
(3) ಗಾಯಿಟರ್ ಮತ್ತು ಅಯೋಡಿನ್ ಕೊರತೆಯ ಅಸ್ವಸ್ಥತೆಗಳು,
(4) ಹಶಿಮೊಟೊಸ್ ಥೈರಾಯ್ಕೆಟಿಸ್ ಮತ್ತು
(5) ಥೈರಾಯ್ಡ್ ಕ್ಯಾನ್ಸರ್.
ಇವುಗಳಲ್ಲಿ ಅತ್ಯಂತ ಸಾಮಾನ್ಯವಾದುದು ಹೈಪೋಥೈರಾಯ್ತಿಸಮ್, ಥೈರಾಯ್ಡ್ ಗ್ರಂಥಿಯು ನಿಮ್ಮ ದೇಹದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದಿಸಲು ಆಗದಿದ್ದಲ್ಲಿ ಹೈಪೋಥೈರಾಯ್ತಿಸಮ್ ಉಂಟಾಗುತ್ತದೆ. ಇದನ್ನು ನಿಷ್ಕ್ರಿಯ ಥೈರಾಯ್ಡ್ ಎಂಬುದಾಗಿಯೂ ಕರೆಯುತ್ತಾರೆ. ಥೈರಾಯ್ಡ್ ಗ್ರಂಥಿಯು ತನ್ನ ನಿಗದಿತ ಕೆಲಸವನ್ನು ನಿರ್ವಹಿಸುವಲ್ಲಿ ಸಮರ್ಥವಾಗಿರದಿದಲ್ಲಿ ಈ ಕೆಳಗೆ ಸೂಚಿಸಿರುವ ಲಕ್ಷಣಗಳು ಕಾಣಬಹುದು,….ವಿಡಿಯೋ ಇದೆ…
1. ಸುಸ್ತು ಅಥವಾ ಆಯಾಸ
2. ಶೀತ ಅಸಹಿಷ್ಣುತೆ
3. ಮಲಬದ್ಧತೆ
4. ಒಣಚರ್ಮ
5. ತೂಕ ಹೆಚ್ಚುವಿಕೆ
6. ಉಬ್ಬಿದ ಮುಖ….ವಿಡಿಯೋ ಇದೆ…
7. ಅಸಹಜ ಧ್ವನಿ
8. ಒರಟಾದ ಕೂದಲು ಮತ್ತು ಚರ್ಮ
9. ಸ್ನಾಯು ದೌರ್ಬಲ್ಯ, ಸ್ನಾಯು ನೋವು
10. ಮಹಿಳೆಯರಿಗೆ ಮುಟ್ಟು ದೋಷ, ಸಮತೋಲನ ಏರುಪೇರು
11. ಕೂದಲು ಉದುರುವಿಕೆ
12. ನಿಧಾನವಾಗುವ ಎದೆಬಡಿತ
13. ಮಾನಸಿಕ ಖಿನ್ನತೆ
14. ಸ್ಮರಣಶಕ್ತಿ ದುರ್ಬಲ ವಾಗುವುದು ಇತ್ಯಾದಿ
ಇವುಗಳಲ್ಲದೇ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗುವುದು, ಕೊಲೆಸ್ಟ್ರಾಲ್ ಹೆಚ್ಚುವಿಕೆ, ಹೃದಯಸಂಬಧಿ ಸಾವುಗಳಿಗೆ ಪ್ರಮುಖ ಕಾರಣ, ಮೂಳೆ ಸವೆತ ಮತ್ತು ದುರ್ಬಲ ಎಲುಬುಗಳು, ಬಂಜೆತನ, ಪುರುಷರಲ್ಲಿ ವೀರ್ಯ ಉತ್ಪಾದನೆ ಕುಂಠಿತವಾಗುತ್ತದೆ
ಆಯುರ್ವೇದದ ಚಿಕಿತ್ಸೆ ಮೂಲಕ ಪರಿಹಾರ : ಹೆಚ್ಚಿನ ಥೈರಾಯ್ಡ್ ಸಮಸ್ಯೆಗಳನ್ನು ಆಯುರ್ವೇದ ಔಷಧಿ, ಆಹಾರಕ್ರಮ ಮತ್ತು ಜೀವನ ಶೈಲಿಯ ಬದಲಾವಣೆಯಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು, ಥೈರಾಯ್ಡ್ ಗ್ರಂಥಿಯ ಮೇಲೆ ನೇರವಾಗಿ ಕಾರ್ಯ ನಿರ್ವಹಿಸುವ ಮತ್ತು ಅದರ ಕಾರ್ಯಗಳನ್ನು ಸರಿಪಡಿಸುವ ಕಾಂಚನಾರ ಎಂಬ ಔಷದೀಯ ಸಸ್ಯದ ವಿವಿದ ಉತ್ಪನ್ನಗಳನ್ನು ಬಳಸಲಾಗುತ್ತದೆ. ಅಗತ್ಯವಿದ್ದಲ್ಲಿ ಪಂಚಕರ್ಮ ಚಿಕಿತ್ಸೆ ನೀಡಲಾಗುತ್ತದೆ. ಐದು ವರ್ಷದೊಳಗೆ ಸೋಂಕಿರುವ ಕಾಯಿಲೆಗಳಿಗೆ ಸಂಪೂರ್ಣವಾಗಿ ಗುಣಪಡಿಸಬಹುದು ನಂತರ ಔಷಧಿಯ ಅಗತ್ಯ ಬರಲಾರದು. ಹತ್ತು ವರ್ಷಗಳಿಗೂ ಹೆಚ್ಚು ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿದ್ದಲ್ಲಿ ಔಷಧಿಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟ. ಅಂತಹ ಸಂದರ್ಭಗಳಲ್ಲಿ ಆಧುನಿಕ ಔಷಧೀಯ ಪದ್ದತಿಯು ಉತ್ತಮ ಆಯ್ಕೆಯಾಗಿದೆ, ಆದರೆ ರೋಗದಿಂದ ಯಾವುದೇ ಹೆಚ್ಚಿನ ತೊಡಕುಗಳಿದ್ದಲ್ಲಿ ಉದಾಹರಣೆಗೆ ಹೃದಯ ಸಂಬಂಧಿ ಕಾಯಿಲೆಗಳು, ಮೂಳೆ ಸೇವೆಯ ಅತಿಯಾದ ಸುಸ್ತು ಇದಲ್ಲಿ ನಿಯಮಿತವಾದ ಚಿಕಿತ್ಸೆ ಜೊತೆಗೆ ಆಯುರ್ವೇದ ಔಷಧಗಳೊಂದಿಗೆ ಗುಣಪಡಿಸಬಹುದು.