#Ayurveda | ಮಾನಸಿಕ ಆರೋಗ್ಯ ವೃದ್ದಿಗೆ ಆಯುರ್ವೇದ | ಮಾನಸಿಕ ಸಮಸ್ಯೆಗಳಿಗೆ ಆಯುರ್ವೇದ ಪರಿಹಾರ |

August 23, 2023
2:11 PM
ನಿದ್ರೆ ಮಾದರಿಗಳಲ್ಲಿನ ಬದಲಾವಣೆ, ಹಸಿವಿನ ಕೊರತೆ ಹಠಾತ್ ಬೇಸರ, ಅತಿ ದುಃಖದ ಕ್ಷಣಗಳಲ್ಲಿ ಋಣಾತ್ಮಕ ಚಿಂತನೆ, ಆತ್ಮಹತ್ಯೆ ಆಲೋಚನೆಗಳು, ಡ್ರಗ್ಸ್, ಮಧ್ಯಪಾನದ ಕಡೆ ಅತಿಯಾದ ಒಲವು, ಇವುಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಸೂಕ್ತ ಚಿಕಿತ್ಸೆಗಳು ಲಭ್ಯವಿದೆ.

ಆಯುರ್ವೇದ #Ayurveda ಪದ್ಧತಿಯು ಆರೋಗ್ಯವನ್ನು ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕವಾಗಿ ಸಮತೋಲನದಲ್ಲಿರಿಸುವ ಚಿಕಿತ್ಸಾ ವಿಧಾನವಾಗಿದೆ. ಮಾನಸಿಕ ಆಸ್ವಸ್ಥತೆಯಲ್ಲಿ ಆಹಾರ ಮತ್ತು ಜೀವನಶೈಲಿ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆತಂಕ, ಮಾನಸಿಕಒತ್ತಡ, ನರರೋಗಸಮಸ್ಯೆ, ಖಿನ್ನತೆ, ನಿದ್ರಾಹೀನತೆ ಮುಂತಾದ ವಿವಿಧ ದೀರ್ಘಕಾಲಿನ ಮಾನಸಿಕ ಸಮಸ್ಯೆಗಳು ನಮ್ಮ ಆಧುನಿಕ ಜೀವನ ಶೈಲಿ ಮತ್ತು ಆಸಮತೋಲನ ಅನಿಮಿಯಿತ ಆಹಾರ ಪದ್ಧತಿಯನ್ನು ಅವಲಂಬಿಸಿದೆ.

Advertisement
Advertisement

ಸ್ವಯಂ ಅರಿವಿಲ್ಲದ ಕಾರಣ ಅಥವಾ ಸಾಮಾಜಿಕ ಕಳಂಕದ ಕಾರಣದಿಂದ ರೋಗ ಲಕ್ಷಣಗಳನ್ನು ನಿರ್ಲಕ್ಷಿಸುವುದು. ಇದರಿಂದ ಮಾನಸಿಕ ಅಸ್ವಸ್ಥತೆಯು ಗಂಭೀರ ಸ್ಥಿತಿಯನ್ನು ತಲುಪುವುದು ಆದಕಾರಣ ಆರಂಭದಲ್ಲೇ ರೋಗ ಲಕ್ಷಣಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ನಿದ್ರೆ ಮಾದರಿಗಳಲ್ಲಿನ ಬದಲಾವಣೆ, ಹಸಿವಿನ ಕೊರತೆ ಹಠಾತ್ ಬೇಸರ, ಅತಿ ದುಃಖದ ಕ್ಷಣಗಳಲ್ಲಿ ಋಣಾತ್ಮಕ ಚಿಂತನೆ, ಆತ್ಮಹತ್ಯೆ ಆಲೋಚನೆಗಳು, ಡ್ರಗ್ಸ್, ಮಧ್ಯಪಾನದ ಕಡೆ ಅತಿಯಾದ ಒಲವು, ಇವು ಮಾನಸಿಕ ಅಸ್ವಸ್ಥತೆಯ ಸಾಮಾನ್ಯ ಲಕ್ಷಣಗಳು.

ಮಾನಸಿಕ ಸಮಸ್ಯೆಗಳಿಗೆ  ಆಯುರ್ವೇದ ಪಂಚಕರ್ಮ ಚಿಕಿತ್ಸೆಗಳು:
1. ಶಿರೋಅಭ್ಯಂಗ :-  ಆಯುರ್ವೇದ ಗಿಡಮೂಲಿಕೆಯಿಂದ ತಯಾರಿಸಲಾದ ಔಷಧಿಭರಿತ ತೈಲಗಳಿಂದ ತಲೆಗೆ ಮಸಾಜ್ ಮಾಡುವುದು. ಬೆಚ್ಚಗಿನ ತೈಲವನ್ನು 15 ರಿಂದ 20 ನಿಮಿಷ ತಲೆಯ ಭಾಗಕ್ಕೆ ಹಿತವಾಗಿ ಮಸಾಜ್ ಮಾಡುವುದು.
 ಪ್ರಯೋಜನಗಳು:- ಉತ್ತಮ ನಿದ್ರೆ,ಕಣ್ಣಿಗೆ ತಂಪು ತಲೆನೋವು ಕಡಿಮೆ ಮಾಡುವುದು, ತಲೆ ಕೂದಲು ಉದುರುವುದು ಸಮಸ್ಯೆಯನ್ನು ಹೋಗಲಾಡಿಸುವುದು, ತಲೆ ಹೊಟ್ಟು ನಿವಾರಣೆ ಹಾಗೂ ಮನಸ್ಸನ್ನು ಶಾಂತಗೊಳಿಸುವುದು.
2. ಶಿರೋಪಿಚು :- ಬೆಚ್ಚಗಿನ ಔಷಧೀಯ ಎಣ್ಣೆಯಿಂದ ನೆನೆಸಿದ ಹತ್ತಿಯನ್ನು ತಲೆಯ ನೆತ್ತಿಯ ಭಾಗದ ಮೇಲೆ ಇಡುವುದು. ಇದಕ್ಕೆ ಬಳಸುವ ಔಷಧಿಗಳ ಅವಧಿ ಮತ್ತು ಪ್ರಕಾರ ದೇಹದ ಸ್ವಭಾವ ಮತ್ತು ಸ್ಥಿತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ
ಪ್ರಯೋಜನಗಳು :- ತಲೆನೋವು ನಿದ್ರಾಹೀನತೆ, ಪಾರ್ಶ್ವವಾಯು ನಂತಹ ನರ ರೋಗಗಳ ನಿವಾರಣೆಗೆ ಹಾಗೂ ಮಾನಸಿಕ ಒತ್ತಡ ನಿವಾರಣೆ ಮಾಡುವುದು, ನೆನಪಿನ ಶಕ್ತಿಯನ್ನು ಹೆಚ್ಚಿಸುವುದು.
3. ಶಿರೋಧಾರ :- ಹಣೆಯ ಮೇಲೆ ಲಯಬದ್ಧವಾಗಿ ಹರಿಯಲು ವಿಶೇಷ ಸಾಧನೆಗಳನ್ನು ಬೆಳೆಸಿಕೊಂಡು ಬೆಚ್ಚಗಿನ ಔಷಧಿಯತೈಲ ( ತೈಲದಾರ )ಅಥವಾ ಔಷಧಿ ಮಿಶ್ರಿತ ಮಜ್ಜಿಗೆ( ತಕ್ರದಾರ) ಅಥವಾ ಕಷಾಯಗಳನ್ನು ಬಳಸಲಾಗುತ್ತದೆ
ಪ್ರಯೋಜನಗಳು :- ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಮಾನಸಿಕ ಖಿನ್ನತೆಗಳಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ, ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಿ, ಉತ್ತಮ ನಿದ್ರೆಯನ್ನು ಪ್ರೇರೇಪಿಸುತ್ತದೆ. ಕೂದಲು ಉದುರುವಿಕೆ ಹಾಗೂ ಬಿಳಿಕೂದಲ ಸಮಸ್ಯೆ, ಅತಿಯಾದ ಆಯಾಸ ತಲೆನೋವು, ನರರೋಗಗಳ ಸಮಸ್ಯೆ ಹಾಗೂ ಎಲ್ಲಾ ಮಾನಸಿಕ ಅಸ್ವಸ್ಥತೆಗಳಿಗೆ ಉತ್ತಮ ಚಿಕಿತ್ಸೆ ಆಗಿದ್ದು ಮನಸ್ಸಿಗೆ ವಿಶ್ರಾಂತಿ ನೀಡುವ ವಿಸ್ಮಯಕಾರಿ ಚಿಕಿತ್ಸೆ ಎಂದು ಹೇಳಲಾಗುತ್ತದೆ.

4. ಶಿರೋಬಸ್ತಿ:- ಔಷಧೀಯ ತೈಲವನ್ನು ನಿಗದಿತ ಅವಧಿಯವರೆಗೆ ಶಿರೋಬಸ್ತಿ ಯಂತ್ರದ ಮುಖಾಂತರ ತಲೆ ಮೇಲೆ ಇಟ್ಟು ಚಿಕಿತ್ಸೆ ನೀಡಲಾಗುವುದು
ಪ್ರಯೋಜನಗಳು:- ಖಿನ್ನತೆ ದೀರ್ಘಕಾಲದ ತಲೆನೋವು,ನರ ದೌರ್ಬಲ್ಯಗಳಿಂದ ಆದ ಕಣ್ಣಿನ ಸಮಸ್ಯೆ,ಮೈಗ್ರೇನ್, ಮಾನಸಿಕ ಒತ್ತಡ,ಪಾರ್ಶ್ವ ವಾಯು ತಡೆಗಟ್ಟುವಿಕೆ ಹಾಗೂ ಪುನರ್ ಯೌವ್ವನಗೊಳಿಸುವ ಚಿಕಿತ್ಸೆಯಾಗಿದೆ.
5. ಶಿರೋತಲಂ :- ಗಿಡಮೂಲಿಕೆಗಳಿಂದ ತಯಾರಿಸಿದ ಎಣ್ಣೆಯೊಂದಿಗೆ ಬೆರೆಸಿದ ಔಷಧೀಯ ಚೂರ್ಣವನ್ನು ಹಣೆಯ ಮೇಲೆ ಇಡುವುದು
ಪ್ರಯೋಜನಗಳು:- ನಿದ್ರಾಹೀನತೆ ರಕ್ತದೊತ್ತಡ ಸಮಸ್ಯೆ ನಿವಾರಣೆ ನೆನಪಿನ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚಿಸುವುದು
6. ನಸ್ಯಕರ್ಮ :- ಮೂಗಿನ ಹೊಳ್ಳೆಯ ಮೂಲಕ ಔಷಧಿ ಗಳಿಂದ ತಯಾರಿಸಿದ ತೈಲವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹಾಕುವುದು..
ಪ್ರಯೋಜನಗಳು:- ಮೆದುಳಿನ ಕಾರ್ಯಕ್ಕೆ ಹಾಗೂ ಎಲ್ಲಾ ರೀತಿಯ ನರರೋಗಗಳಿಗೆ ತುಂಬಾ ಪ್ರಯೋಜನಕಾರಿ. ಮೂಗಿನ ಮಾರ್ಗವನ್ನು ಶುದ್ಧಗೊಳಿಸುವುದು ಮಾನಸಿಕ ಒತ್ತಡ, ಮೈಗ್ರೇನ್ ಮೊದಲಾದ ಸಮಸ್ಯೆಗಳಲ್ಲಿ ಉತ್ತಮ ಚಿಕಿತ್ಸೆ ಆಗಿದೆ.

ಆಯುರ್ವೇದ ಔಷಧಗಳು, ಪಂಚಕರ್ಮ ಚಿಕಿತ್ಸೆ, ಸರಿಯಾದ ಆಹಾರ, ವ್ಯಾಯಾಮ, ಜೀವನ ಶೈಲಿಯಲ್ಲಿನ ಮಾರ್ಪಾಡುಗಳು, ಯೋಗ ಧ್ಯಾನ ಜೊತೆಗೆ ವೈದ್ಯರೊಂದಿಗೆ ಸಮಾಲೋಚನೆ  ಇವುಗಳಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟಬಹುದು.

Advertisement
ಬರಹ :
ಡಾ.ಜ್ಯೋತಿ ಕೆ, ಲಕ್ಷ್ಮೀ ಕ್ಲಿನಿಕ್ ಮಂಗಳೂರು., 94481 68053

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆಗಾಲದಲ್ಲಿ ಡೆಂಗ್ಯು ಹರಡುವ ಸಾಧ್ಯತೆ  – ಎಚ್ಚರಿಕೆ
July 25, 2025
7:32 AM
by: ದ ರೂರಲ್ ಮಿರರ್.ಕಾಂ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಗದಗ | ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ
July 19, 2025
8:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group