ಆಜಾದಿ ಕಾ ಅಮೃತ ಮಹೋತ್ಸವ | ಶಾರದಾ ವಿದ್ಯಾಲಯದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಜಿಲ್ಲಾ ಮಟ್ಟದ ಸ್ಪರ್ಧೆಗಳು |

July 23, 2022
3:58 PM

ಸ್ವಾತಂತ್ರ್ಯದ ಅಮೃತ ಮಹೋತ್ಸವಾಚರಣೆಯ ಸಲುವಾಗಿ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರರಚನೆ, ಸ್ವಾತಂತ್ರ್ಯ ಹೋರಾಟಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ, ದೇಶಭಕ್ತಿಗೀತೆಗಳ ಗಾಯನ ಸ್ಪರ್ಧೆ ಮತ್ತು ಭಾರತ ಪರಿಚಯ ಎಂಬ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ.

Advertisement
Advertisement

ಸ್ಪರ್ಧೆಗಳ ವಿವರ ಹೀಗಿದೆ : 
ಭಾವಚಿತ್ರ ರಚನೆ: ಭಗತ್ ಸಿಂಗ್, ಸುಭಾಶ್ಚಂದ್ರ ಭೋಸ್, ಚಂದ್ರಶೇಖರ ಆಜಾóದ್, ಬಾಲಗಂಗಾಧರ ತಿಲಕ್, ಮಂಗಲ್ ಪಾಂಡೆ, ಸರ್ದಾರ್ ವಲ್ಲಭಭಾೈ ಪಟೇಲ್, ವಿನಾಯಕ ದಾಮೋದರ್ ಸಾವರ್ಕರ್, ಸುಖ್‍ದೇವ್ ಇವರಲ್ಲಿ ಯಾರಾದರೂ ಒಬ್ಬರ ಭಾವಚಿತ್ರವನ್ನು ರಚಿಸುವುದು. ಚಿತ್ರವನ್ನು ಪೆನ್ಸಿಲ್ ಶೇಡಿಂಗ್, ಚಾರ್ಕೋಲ್, ಕ್ರೇಯಾನ್ಸ್, ಜಲವರ್ಣ, ಆಕ್ರಿಲಿಕ್‍ವರ್ಣ ಹೀಗೆ ಯಾವುದೇ ಮಾಧ್ಯಮದಿಂದ ಪೂರ್ಣಗೊಳಿಸಬಹುದು. ಚಿತ್ರದ ಫೊಟೋವನ್ನು ವಾಟ್ಸಾಪ್ ಸಂಖ್ಯೆ 9019730479ಕ್ಕೆ ಕಳುಹಿಸಬೇಕು.

ಭಾಷಣ ಸ್ಪರ್ಧೆ: ಸ್ವಾತಂತ್ರ್ಯ ಹೋರಾಟಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆ ಎಂಬ ವಿಷಯದ ಬಗ್ಗೆ ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಮೂರು ನಿಮಿಷಗಳಿಗೆ ಮೀರದಂತೆ ಭಾಷಣ ಮಾಡುವುದು. ಭಾಷಣದ ವೀಡಿಯೋವನ್ನು ವಾಟ್ಸಾಪ್ ಸಂಖ್ಯೆ 9019730479ಕ್ಕೆ ಕಳುಹಿಸಬೇಕು. ಭಾಷಾಶುದ್ಧಿ, ಉಚ್ಚಾರ, ಸ್ಪಷ್ಟತೆ ಮತ್ತು ಪ್ರಸ್ತುತಿಗಳನ್ನು ಗಮನಿಸಲಾಗುವುದು.

ದೇಶಭಕ್ತಿಗೀತೆ: ಕನ್ನಡ ಅಥವಾ ಹಿಂದಿ ಭಾಷೆಯ ದೇಶಭಕ್ತಿಗೀತೆಯನ್ನು ಹಾಡುವುದು. ಶ್ರುತಿಯನ್ನು ಬಳಸಿಕೊಳ್ಳಬಹುದು. ಶ್ರುತಿಯನ್ನು ಹೊರತುಪಡಿಸಿ ಯಾವುದೇ ಹಿನ್ನೆಲೆ ಸಂಗೀತ/ಕರೋಕೆ/ಟ್ರ್ಯಾಕ್ ಬಳಸುವಂತಿಲ್ಲ. ಸಮಯಾವಕಾಶ 3 ನಿಮಿಷಗಳು. ಹಾಡಿನ ವೀಡಿಯೋವನ್ನು ಸಂಖ್ಯೆ 9019730479ಕ್ಕೆ ಕಳುಹಿಸಬೇಕು.

ಸ್ಪರ್ಧೆಗೆ ಚಿತ್ರ, ಭಾಷಣ ಮತ್ತು ದೇಶಭಕ್ತಿಗೀತೆಗಳ ವೀಡಿಯೋದೊಂದಿಗೆ ವಿದ್ಯಾರ್ಥಿಯ ಹೆಸರು, ತರಗತಿ, ಶಾಲೆ ಮೊಬೈಲ್ ಸಂಖ್ಯೆಗಳನ್ನು ಕಳುಹಿಸಬೇಕು. ಸ್ಪಧೆಗಳಲ್ಲಿ ಭಾಗವಹಿಸುವುದಕ್ಕೆ ಅಂತಿಮ ದಿನಾಂಕ 27 ಜುಲೈ 2022. ಎಲ್ಲಾ ಸ್ಪರ್ಧೆಗಳಲ್ಲೂ ಹತ್ತು ಉತ್ತಮ ಪ್ರತಿಭೆಗಳನ್ನು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಅಂತಿಮ ಸುತ್ತಿನ ಸ್ಪರ್ಧೆಯು ಸ್ವಾತಂತ್ರ್ಯೋತ್ಸವದಂದು ಶಾರದಾ ವಿದ್ಯಾಲಯದಲ್ಲಿ ಪೂರ್ವಾಹ್ನ ಗಂಟೆ 9:30ಕ್ಕೆ ನಡೆಯಲಿದೆ.

Advertisement

ರಸಪ್ರಶ್ನೆ: ಪುರಾಣ-ಇತಿಹಾಸ, ಋಷಿ ಪರಂಪರೆ, ಭಾರತದ ರಾಜ-ಮಹಾರಾಜರು, ನದಿ-ಪರ್ವತಗಳು, ಪವಿತ್ರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿರುತ್ತವೆ. ಇಬ್ಬರು ವಿದ್ಯಾರ್ಥಿಗಳ ತಂಡಗಳಾಗಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಹೆಸರು(ಇಬ್ಬರ ಹೆಸರು), ತರಗತಿ, ಶಾಲೆಯ ಹೆಸರು, ಮೊಬೈಲ್ ಸಂಖ್ಯೆಗಳನ್ನು ದಿನಾಂಕ 27 ಜುಲೈ 2022ರ ಒಳಗೆ ವಾಟ್ಸಾಪ್ ಸಂಖ್ಯೆ 9019730479ಕ್ಕೆ ಕಳುಹಿಸಿ ನೋಂದಾಯಿಸಬೇಕು. ಪ್ರಥಮ ಸುತ್ತಿನ ಬಹುಆಯ್ಕೆಯ ಉತ್ತರಗಳನ್ನೊಳಗೊಂಡ ಲಿಖಿತ ಪರೀಕ್ಷೆಯಲ್ಲಿ ತಂಡದ ಇಬ್ಬರು ಸೇರಿ ಉತ್ತರಿಸಬೇಕು. ತಂಡದ ಸದಸ್ಯರಿಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿರಬೇಕು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಐದು ತಂಡಗಳಿಗೆ ಮೌಖಿಕ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗುವುದು. ಸ್ಪರ್ಧೆಯು ದಿನಾಂಕ 15 ಆಗಸ್ಟ್ 2022ರಂದು ಶಾರದಾ ವಿದ್ಯಾಲಯದಲ್ಲಿ ಪೂರ್ವಾಹ್ನ ಗಂಟೆ 9:30ಕ್ಕೆ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಶಾರದಾ ವಿದ್ಯಾಲಯದ ಕಾರ್ಯಾಲಯವನ್ನು ದೂರವಾಣಿ ಸಂಖ್ಯೆ 0824-2492628/2493089 ಅಥವಾ ಮೊಬೈಲ್ ಸಂಖ್ಯೆ 9019730479 / 9448889254 ಮೂಲಕ ಸಂಪರ್ಕಿಸಬಹುದು.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ
May 23, 2025
7:30 AM
by: ದ ರೂರಲ್ ಮಿರರ್.ಕಾಂ
ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group