Advertisement
ಸುದ್ದಿಗಳು

NCERT ಪಠ್ಯದಿಂದ ಬಾಬರಿ, ರಾಮರಥ ಯಾತ್ರೆ ವಿಷಯಗಳು ಹೊರಕ್ಕೆ | ದ್ವೇಷ ಮತ್ತು ಹಿಂಸಾಚಾರ ಶಿಕ್ಷಣದ ವಿಷಯಗಳಲ್ಲ | ಈ ಬಗ್ಗೆ ಮಕ್ಕಳಿಗೆ ಏಕೆ ಕಲಿಸಬೇಕು – NCERT ನಿರ್ದೇಶಕ

Share

ಇಂದಿನ ಮಕ್ಕಳೇ(Children) ಮುಂದಿನ ಪ್ರಜೆಗಳು. ಹಾಗಾಗಿ ನಮ್ಮ ದೇಶದ ಇತಿಹಾಸದ(Country History) ಬಗ್ಗೆ ನಮ್ಮ ಮಕ್ಕಳಿಗೆ ಗೊತ್ತಿರಬೇಕು ಅನ್ನೋದು ಕೆಲವು ಶಿಕ್ಷಣ ತಜ್ಞರ(Educational experts) ವಾದವಾದರೆ ದ್ವೇಷ ಮತ್ತು ಹಿಂಸಾಚಾರ ಶಿಕ್ಷಣದ ವಿಷಯಗಳಲ್ಲ, ಶಾಲಾ ಪಠ್ಯಪುಸ್ತಕಗಳಲ್ಲಿ(Text book) ಅವುಗಳ ಬಗ್ಗೆ ಏಕೆ ಕಲಿಸಬೇಕು ಎಂದು ಎನ್‌ಸಿಇಆರ್‌ಟಿಯ(NCERT) ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಪ್ರಶ್ನಿಸಿದ್ದಾರೆ.

Advertisement
Advertisement

ಇತ್ತೀಚೆಗೆ ದೇಶದ ಉನ್ನತ ಶಿಕ್ಷಣ ಸಂಸ್ಥೆ NCERT ಪಠ್ಯಪುಸ್ತಕಗಳಿಂದ ಬಾಬರಿ ಮಸೀದಿ(Babari mosque) ಧ್ವಂಸ ಮತ್ತು ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ(Lal Krishna Advani)ನೇತೃತ್ವದ ರಾಮ ರಥ ಯಾತ್ರೆಯ ಉಲ್ಲೇಖಗಳನ್ನು ತೆಗೆದುಹಾಕಲಾಗಿದೆ. ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಸಮಯದಲ್ಲೇ NCERT ಪ್ರಮುಖ್ಯಸ್ಥರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Advertisement
ಯಾವೆಲ್ಲಾ ವಿಷಯಗಳನ್ನು ತೆಗೆಯಲಾಗಿದೆ? : ಹೊಸ ಪರಿಷ್ಕೃತ NCERT 12 ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕವು ಬಾಬರಿ ಮಸೀದಿಯ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅದನ್ನು ಮೂರು-ಗುಮ್ಮಟ ರಚನೆ ಎಂದು ಉಲ್ಲೇಖಿಸುತ್ತದೆ. ಅಲ್ಲದೆ, ಅಯೋಧ್ಯೆ ವಿಭಾಗವನ್ನು ನಾಲ್ಕರಿಂದ ಎರಡು ಪುಟಗಳಿಗೆ ಟ್ರಿಮ್ ಮಾಡಲಾಗಿದೆ, ಹಿಂದಿನ ಆವೃತ್ತಿಯಿಂದ ವಿವರಗಳನ್ನು ಅಳಿಸಲಾಗಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಗುಜರಾತ್ ಗಲಭೆ ಅಥವಾ ಬಾಬರಿ ಮಸೀದಿ ಧ್ವಂಸದ ಉಲ್ಲೇಖಗಳ ಕುರಿತು ಮಾತನಾಡಿದ ಸಕ್ಲಾನಿ, ಶಾಲಾ ಪಠ್ಯಪುಸ್ತಕಗಳಲ್ಲಿ ನಾವು ಗಲಭೆಗಳ ಬಗ್ಗೆ ಏಕೆ ಕಲಿಸಬೇಕು? ನಾವು ಸಕಾರಾತ್ಮಕ ನಾಗರಿಕರನ್ನು ಸೃಷ್ಟಿಸಲು ಬಯಸುತ್ತೇವೆ, ಹಿಂಸಾತ್ಮಕ ಮತ್ತು ಖಿನ್ನತೆಗೆ ಒಳಗಾದ ವ್ಯಕ್ತಿಗಳನ್ನು ಅಲ್ಲ ಎಂದಿದ್ದಾರೆ.

ಏಕೆ ಇವುಗಳನ್ನು ಮಕ್ಕಳಿಗೆ ಕಲಿಸಬೇಕು? : ನಾವು ನಮ್ಮ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಯಾಗುವಂತೆ ಕಲಿಸಬೇಕೇ, ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಬೇಕೇ ಅಥವಾ ದ್ವೇಷಕ್ಕೆ ಬಲಿಯಾಗಬೇಕೇ? ಇದು ಶಿಕ್ಷಣದ ಉದ್ದೇಶವೇ? ಚಿಕ್ಕ ಮಕ್ಕಳಿಗೆ ನಾವು ಗಲಭೆಗಳ ಬಗ್ಗೆ ಕಲಿಸಬೇಕೇ? ಅವರು ಬೆಳೆದಾಗ, ಅವರು ಅದರ ಬಗ್ಗೆ ಕಲಿಯಬಹುದು. ಆದರೆ ಶಾಲೆಯ ಪಠ್ಯಪುಸ್ತಕಗಳು ಏಕೆ ಎಂದು ಪ್ರಶ್ನಿಸಿದ್ದಾರೆ. ಅವರು ಬೆಳೆದಾಗ ಏನಾಯಿತು ಮತ್ತು ಏಕೆ ಸಂಭವಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ. ಬಾಲ್ಯದಲ್ಲಿ ಅವುಗಳ ಬಗ್ಗೆ ಕಲಿಕೆ ಅಪ್ರಸ್ತುತವಾಗಿದೆ ಎಂದು ಸಕ್ಲಾನಿ ಪ್ರತಿಪಾದಿಸಿದರು. ಹೊಸದಾಗಿ ಪರಿಷ್ಕೃತ ಪಠ್ಯಪುಸ್ತಕದಲ್ಲಿನ ಪಾಠವು ರಾಮ ಮಂದಿರ ನಿರ್ಮಾಣಕ್ಕೆ ದಾರಿಮಾಡಿಕೊಟ್ಟ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಕೇಂದ್ರೀಕರಿಸುತ್ತದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪರಿಸರವಾದಿ ಶಿವಾನಂದ ಕಳವೆಯವರ ಕಾಳಜಿ | ಅವರ ಫೇಸ್‌ಬುಕ್‌ನ ಒಂದು ಪೋಸ್ಟ್‌ನಿಂದಾಗಿ ತಪ್ಪಿತು 3500 ಮರಗಳ ಮಾರಣ ಹೋಮ..!

ಶಿವಾನಂದ ಕಳವೆ(Shivananda Kalave), ಪತ್ರಕರ್ತ(Journalist), ಬರಹಗಾರ(Writer), ಕೃಷಿಕ(Agriculturist) ಅನ್ನುವುದಕ್ಕಿಂತಲೂ ಪರಿಸರವಾದಿ(Environmentalist) ಹೆಚ್ಚು ಸೂಕ್ತ.…

10 hours ago

ಹೀಗೊಂದು ಕನಸಿನ ದರ್ಶನ.. | ದರ್ಶನ್ ಮತ್ತು ಅಂಗುಲಿಮಾಲ.. ಈ ಘಟನೆಯಿಂದ ಕಲಿಯಬಹುದಾದ ಕೆಲವು ಒಳ್ಳೆಯ ಪಾಠಗಳು

ಸಮಾಜದಲ್ಲಿ(Social) ಒಳ್ಳೆಯದಕ್ಕೆ ಮತ್ತು ಪರಿವರ್ತನೆಗೆ(transition) ಅವಕಾಶವಿದೆ ಎಂಬುದನ್ನು ಅಭಿಮಾನಿಗಳಿಗೆ(Fans) ನೆನಪಿಸಲು.. ಅಂಗುಲಿಮಾಲ ಎಂಬ ಹಿಂಸಾ…

12 hours ago

ಮೌಲ್ಯದಿಂದ ಮಾನ ಪಡೆದ ಮಲೆನಾಡಗಿಡ್ಡಗಳು | ಕರಾವಳಿ – ಮಲೆನಾಡಿಗರಿಗೆ ಅದರ ಮೌಲ್ಯ ಇನ್ನೂ ಅರ್ಥವಾಗಿಲ್ಲ…!

ಮಲೆನಾಡು ಗಿಡ್ಡ ಗೋತಳಿಯು ವಿಶೇಷ ಮಹತ್ವದಿಂದ ಕೂಡಿದೆ. ಇದರ ಹಿನ್ನೆಲೆಯಲ್ಲಿ ಅರಿಯಬೇಕಿದೆ.

12 hours ago

ಪಶ್ಚಿಮ ಘಟ್ಟ ಇರುವುದು ಅಲ್ಲಿನ ಜೀವ ಸಂಕುಲಗಳಿಗಾಗಿ… ಮಾನವ ತಿರುಗಾಟಕ್ಕೆ ಅಲ್ಲ

ಪಶ್ಚಿಮ ಘಟ್ಟ(Western Ghat) ಇರುವುದು ಅಲ್ಲಿನ ಜೀವ ಸಂಕುಲಗಳಿಗಾಗಿ(Life community) ... ಮಾನವ(Human)…

13 hours ago

ಹವಾಮಾನ ವರದಿ | 28.06.2024 | ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ | ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆ ಸಾಧ್ಯತೆ |

29.06.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

14 hours ago