ಸರಕು ಸಾಗಣೆ ಹಡಗು ಅಪಹರಿಸಿದ ಹೌತಿ ಬಂಡುಕೋರರು | ಹೈಜಾಕ್‌ ವಿಡಿಯೋ ಬಿಡುಗಡೆ | ಇಸ್ರೇಲ್‌ನೊಂದಿಗಿನ ಭಾರತ ಸಂಪರ್ಕ ಹೊಂದಿರುವುದೇ ಕಾರಣ..!? |

November 21, 2023
10:11 AM
ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ 'ಗ್ಯಾಲಕ್ಸಿ ಲೀಡರ್' ಹೆಸರಿನ ಸರಕು ಸಾಗಣೆ ಹಡಗನ್ನು ಎಮೆನ್‌ ದೇಶದ ಹೌತಿ ಬಂಡುಕೋರರು ಇತ್ತೀಚೆಗೆ ಅಪಹರಿಸಿದ್ದರು.

ಟರ್ಕಿಯಿಂದ(Turkey) ಭಾರತಕ್ಕೆ(India) ಬರುತ್ತಿದ್ದ ‘ಗ್ಯಾಲಕ್ಸಿ ಲೀಡರ್'(Galaxy Leader) ಹೆಸರಿನ ಸರಕು ಸಾಗಣೆ ಹಡಗನ್ನು(cargo ship) ಎಮೆನ್‌ ದೇಶದ ಹೌತಿ ಬಂಡುಕೋರರು(rebels of Yemen) ಇತ್ತೀಚೆಗೆ ಅಪಹರಿಸಿದ್ದರು(hijack). ಇಸ್ರೇಲ್‌ಗೆ(Israel) ಸೇರಿದ ಈ ಹಡಗನ್ನು ಕೆಂಪು ಸಮುದ್ರದಲ್ಲಿ(Red Sea) ಹೈಜಾಕ್ ಮಾಡಿ ಯೆಮನ್‌ನ ಕರಾವಳಿ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ಹಡಗಿನ 25 ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

Advertisement
Advertisement
Advertisement

ಅಪಹರಣವನ್ನು ದೃಢೀಕರಿಸಿದ ಇಸ್ರೇಲಿ ರಕ್ಷಣಾ ಪಡೆಗಳು ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದಕ್ಷಿಣ ಕೆಂಪು ಸಮುದ್ರದಲ್ಲಿ ಯೆಮೆನ್ ಬಳಿ ಹೌತಿಗಳು ಸರಕು ಹಡಗನ್ನು ಅಪಹರಿಸಿದ್ದಾರೆ. ಜಾಗತಿಕ ಪರಿಣಾಮದ ಅತ್ಯಂತ ಗಂಭೀರ ಘಟನೆಯಾಗಿದೆ. ಹಡಗು ಭಾರತಕ್ಕೆ ಟರ್ಕಿಯಿಂದ ಹೊರಟಿತ್ತು. ಹಡಗಿನಲ್ಲಿ ಇಸ್ರೇಲಿಗಳನ್ನು ಒಳಗೊಂಡಂತೆ ವಿವಿಧ ರಾಷ್ಟ್ರಗಳ ನಾಗರಿಕ ಸಿಬ್ಬಂದಿ ಇದ್ದಾರೆ. ಆದರೆ ಈ ಹಡುಗು ಇಸ್ರೇಲ್‌ಗೆ ಸೇರಿದ್ದಲ್ಲ ಎಂದು ಹೇಳಿದೆ.

Advertisement

ಇಸ್ರೇಲ್‌ನೊಂದಿಗಿನ ಭಾರತ ಸಂಪರ್ಕ ಹೊಂದಿದೆ ಎನ್ನುವ ಕಾರಣಕ್ಕೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹಡಗನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಗಾಜಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವವರೆಗೂ ಅಂತರರಾಷ್ಟ್ರೀಯ ನೀರಿನಲ್ಲಿ ಇಸ್ರೇಲಿಗಳಿಗೆ ಸಂಪರ್ಕ ಹೊಂದಿದ ಅಥವಾ ಒಡೆತನದ ಹಡಗುಗಳನ್ನು ಗುರಿಯಾಗಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಹೌತಿಗಳ ಮುಖ್ಯ ಸಮಾಲೋಚಕ ಮತ್ತು ವಕ್ತಾರ ಮೊಹಮ್ಮದ್ ಅಬ್ದುಲ್-ಸಲಾಮ್, ”ಇಸ್ರೇಲಿ ಹಡಗುಗಳನ್ನು ಅಪಹರಿಸುವ ಮೂಲಕ ಯಮನ್ ಸಶಸ್ತ್ರ ಪಡೆಗಳ ಗಂಭೀರತೆಯನ್ನು ಸಾಬೀತುಪಡಿಸುವ ಪ್ರಾಯೋಗಿಕ ಹೆಜ್ಜೆಯನ್ನು ಇಟ್ಟಿವೆ.. ಇದು ಆರಂಭ” ಎಂದು ಹೇಳಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸರಕು ಹಡಗನ್ನು ಹೇಗೆ ಅಪಹರಿಸಲಾಗಿತ್ತು ಎಂಬುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.

ಹೌತಿಗಳು ಅಪಹರಿಸಿರುವ ಹಡಗು ಇಸ್ರೇಲ್‌ಗೆ ಸೇರಿದ್ದಲ್ಲ. ಬ್ರಿಟಿಷ್ ಕಂಪನಿಯ ಒಡೆತನದ ಮತ್ತು ಜಪಾನ್ ಸಂಸ್ಥೆಯ ನಿರ್ವಹಣೆ ಮಾಡುತ್ತಿರುವ ಹಡಗನ್ನು ಯೆಮೆನ್ ಹೌತಿ ಬಂಡುಕೋರರು ಇರಾನ್ ಮಾರ್ಗದರ್ಶನದಲ್ಲಿ ಅಪಹರಿಸಿದ್ದಾರೆ. ಇರಾನ್ ಮುಂದೆ ನಿಂತು ಅಂತಾರಾಷ್ಟ್ರೀಯ ಹಡಗು ಅಪರಹರಣಕ್ಕೆ ಸಹಕರಿಸಿರುವುದು ಖಂಡನಾರ್ಹವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರ್ಯಾಲಯವು ಟ್ವೀಟ್ ಮಾಡಿದೆ.

Advertisement

The cargo ship named ‘Galaxy Leader’, which was coming from Turkey to India, was recently hijacked by Houthi rebels of Yemen. This ship belonging to Israel was hijacked in the Red Sea and moved to the coast of Yemen. The Associated Press reported that 25 of the ship’s crew members were being held hostage.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror