ಮಂಗಳೂರು ನಗರದ ನಾಗುರಿ ಬಳಿ ಚಲಿಸುತ್ತಿದ್ದ ಅಟೋ ಆಟೋ ರಿಕ್ಷಾದಲ್ಲಿ ಶನಿವಾರ ಸಂಜೆ ಸ್ಫೋಟ ಸಂಭವಿಸಿದ ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಉಗ್ರರ ಜಾಲ ಸಿಕ್ಕಿತ್ತು. ಆರೋಪಿ ಶಾರಿಕ್ ವಶಕ್ಕೆ ಪಡೆದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿ ಮೊಹಮ್ಮದ್ ಶಾರಿಕ್‌ನ ಮಾಹಿತಿ ಕಲೆಹಾಕಲು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತಂಡ ಸೋಮವಾರ ಮೈಸೂರಿಗೆ ಕೂಡಾ ತೆರಳಿದೆ.
ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನು. ಶಿವಮೊಗ್ಗದ ತೀರ್ಥಹಳ್ಳಿ ಸೊಪ್ಪಿನಗುಡ್ಡೆ ವಾಸಿ ತಂದೆ ಜೊತೆ ಬಟ್ಟೆ ಅಂಗಡಿ ನೋಡಿಕೊಳ್ಳುತ್ತಿದ್ದ ತಂದೆ ಸಾವಿನ ಬಳಿಕ ಮಲತಾಯಿ ಜೊತೆಗಿದ್ದ ಶಾರಿಕ್ ಬಳಿಕ ಕಣ್ಮರೆಯಾಗಿದ್ದ. ಆತ ಕೆಲವೊಂದು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಶಾರೀಕ್ ಆಗಸ್ಟ್ 15, 2022 ರ ಶಿವಮೊಗ್ಗ ಗಲಾಟೆ ಬಳಿಕ ಎಚ್ಚೆತ್ತುಕೊಂಡಿದ್ದ. ಆಗಸ್ಟ್ 23ರ ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಮೊಹಮ್ಮದ್ ಶಾರಿಕ್ ತನ್ನ ಹೆಸರಿನಲ್ಲಿ ಎಂದಿಗೂ ಫೋನ್ ಬಳಸಿಲ್ಲ ಮತ್ತು ಕೆಲವು ಗುರುತುಗಳನ್ನು ಬಳಸಿಕೊಂಡು ನಕಲಿ ಐಡಿಗಳು ಮತ್ತು ಸಿಮ್‌ಗಳನ್ನು ಬಳಸುತ್ತಿದ್ದ ಎಂದು ತಿಳಿದುಬಂದಿದೆ.ಆರೋಪಿ ಮೊಹಮ್ಮದ್ ಶಾರಿಕ್ ತಂತ್ರಜ್ಞಾನದ ಬಳಕೆಯಲ್ಲಿ ಬಹಳ ಜಾಗರೂಕರಾಗಿದ್ದ ಎಂದು ಉನ್ನತ ಗುಪ್ತಚರ ಮೂಲಗಳು ಮಾದ್ಯಮಗಳಿಗೆ ತಿಳಿಸಿವೆ.
ಮಂಗಳೂರು ಸ್ಫೋಟದ ಪರಿಣಾಮ ಹಾಗೂ ಆರೋಪಿಗಳು ಮೈಸೂರಿನಲ್ಲಿ ವಾಸವಿದ್ದ ಕಾರಣ, ಅಲ್ಲೂ ತನಿಖೆ ನಡೆಯುತ್ತಿದೆ.