ಅಡಿಕೆ ಎಲೆಚುಕ್ಕಿ ರೋಗ ಹಿನ್ನೆಲೆ | ಅಡಿಕೆ ಹಾಳೆ, ಸೋಗೆಗಳು ಸದ್ಯ ಜಾನುವಾರುಗಳ ಮೇವಿನ ಬಳಕೆ ಸೂಕ್ತವೇ..?

November 8, 2023
3:16 PM
ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸೋಗೆಗಳಿಗೆ ಶಿಲೀಂಧ್ರ ನಾಶಕ ಸಿಂಪಡಣೆ ಮಾಡುತ್ತಿದ್ದಾರೆ‌. ಇದು ಅತಿ ವಿಷ. ಗಮ್ ಬಳಸಿ ಔಷಧ ಸಿಂಪಡಣೆ ಮಾಡುವುದರಿಂದ ಈ ವಿಷ ಸಾಕಷ್ಟು ದಿನ ಅಡಿಕೆ ಹಾಳೆ, ಸೋಗೆಯ ಮೇಲೂ ಇರಬಹುದು. ಹೀಗಾಗಿ ಇದನ್ನು ಗೋವಿನ ಮೇವಿಗೆ ಬಳಸುವುದು ಸೂಕ್ತವೇ ಎಂಬುದು ಈಗ ಪ್ರಶ್ನೆಯಾಗಿದೆ.

ಇದು ಅಡಿಕೆ ಎಲೆಚುಕ್ಕಿ ರೋಗದ(Arecanut leaf spot disease) ಸೀಝನ್ ಇದು.‌ ಅಡಿಕೆಗೆ ಎಲೆಚುಕ್ಕಿ ಬಂದವರು, ಬಂದ ಶಂಕೆಯಿರುವವರು, ಬರುವ ನಿರೀಕ್ಷೆಯಿರುವವರು, ನಾಳೆ ಬರ ಬರಬಾರದೆಂಬ ಜಾಗೃತೆ ಮಾಡುವವರು ಅಡಿಕೆ ಮರದ ತುಂಡೆ ಸೋಗೆಗಳಿಗೆ ಶಿಲೀಂಧ್ರ ನಾಶಕಗಳನ್ನ(Fungicides) ಸಿಂಪಡಣೆ ಮಾಡುತ್ತಿದ್ದಾರೆ‌. ಇದು ಅತಿ ವಿಷ(Poison). ಗಮ್ ಬಳಸಿ ಔಷಧ ಸಿಂಪಡಣೆ ಮಾಡುವುದರಿಂದ ಈ ವಿಷ ಸಾಕಷ್ಟು ದಿನ ಅಡಿಕೆ ಹಾಳೆ(Arecanut Leaf) ಸೋಗೆಯಲ್ಲಿ ಇರುವ ಸಾದ್ಯತೆ ಇದೆ. ಈ ಶಿಲೀಂಧ್ರ ನಾಶಕ ಔಷಧಗಳು ಸಿಂಪಡಣೆ ಆದ ಅಡಿಕೆ ಹಾಳೆ ಸೋಗೆಯನ್ನ ಜಾನುವಾರುಗಳಿಗೆ ಮೇವಾ ಗಿ ಹಾಕಿ ಜಾನುವಾರು(Cattle)ಗಳು ಅದನ್ನು ತಿನ್ನುವುದು ಅಪಾಯಕಾರಿ. ಜಾನುವಾರುಗಳ ಜೀರ್ಣಾಂಗ ವ್ಯವಸ್ಥೆ ಯ ಕಾರಣಕ್ಕೆ ತಕ್ಷಣಕ್ಕೆ ಇಂತಹ ವಿಷ ಪ್ರಭಾವ ಬೀರದಿದ್ದರೂ ಭವಿಷ್ಯದಲ್ಲಿ ಜಾನುವಾರುಗಳಿಗೂ ಮತ್ತು ಅವುಗಳ ಹಾಲು ಹೈನಿನಲ್ಲೂ ಇದರ ದುಷ್ಪರಿಣಾಮ ಕಾಣಿಸುವುದು ನಿಶ್ಚಿತ.

Advertisement
Advertisement
Advertisement

ಒಂದು ವೇಳೆ ಈ ಶಿಲೀಂಧ್ರ ನಾಶಕ ಸಿಂಪಡಣೆ ಮಾಡದ ತೋಟವಿದ್ದರೆ ಅಂತಹ ತೋಟದ ಸೋಗೆ ಹಾಳೆಗಳನ್ನು ಜಾನುವಾರುಗಳಿಗೆ ಹಿತ ಮಿತವಾಗಿ ಆಹಾರವಾಗಿ ನೀಡಬಹುದು. ಅಡಿಕೆ ಹಾಳೆ ಸೋಗೆಯನ್ನ ಹೆಚ್ಚು ಹೆಚ್ಚು ಆಹಾರವಾಗಿ ಜಾನುವಾರುಗಳಿಗೆ ನೀಡಿ ದರೆ ಅವುಗಳ ಗರ್ಭಧಾರಣೆ ಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಾದಿ ಸುವ ವೈದ್ಯರೂ ಇದ್ದಾರೆ. ಕೆಲವು ಪಶು ವೈದ್ಯ ತಜ್ಞರು ಹೆಚ್ಚು ಪ್ರಮಾಣದಲ್ಲಿ ಅಡಿಕೆ ಹಾಳೆಯನ್ನು ಜಾನುವಾರುಗಳಿಗೆ ಕೊಡ ಬೇಡಿ ಎನ್ನುತ್ತಾರೆ. ಆದರೆ ನಮ್ಮ ಮಲೆನಾಡಿನ ಮಲೆನಾಡು ಗಿಡ್ಡ ತಳಿ ಜಾನುವಾರುಗಳು ಅಡಿಕೆ ಹಾಳೆ ಸೋಗೆಯನ್ನು ತಿಂದೇ ಬದುಕಿದ್ದು ಇತಿಹಾಸ ವಾಸ್ತವ. ನಮ್ಮ ಜಾನುವಾರುಗಳು ಅಡಿಕೆ ತೋಟಕ್ಕೆ ಹಾರಿ ಹೋದಾಗ ಅಡಿಕೆ ಹಾಳೆ ಸೋಗೆಯನ್ನು ತಿನ್ನದೇ ಮರಳೋಲ್ಲ.

Advertisement

ಆದರೆ, ಜಾನುವಾರುಗಳ ಸಾಕುವವರು ಮುಂದಿನ ದಿನಗಳಲ್ಲಿ ಈ ಶಿಲೀಂಧ್ರ ನಾಶಕಗಳ ಕಾರಣಕ್ಕೆ ತಮ್ಮ ಜಾನುವಾರುಗಳು ತೋಟಕ್ಕೆ ಹೋಗದಂತೆ ಜಾಗೃತೆ ಮಾಡುವುದು ಉತ್ತಮ. ಈ ಅಡಿಕೆ ಹಾಳೆಯನ್ನು ಮಹಾರಾಷ್ಟ್ರ- ಪೂನಾ ದ ಯಂತ್ರ ತಯಾರಿಕಾ ಸಂಸ್ಥೆಯೊಂದು ಪುಡಿ ಮಾಡುವ ಯಂತ್ರ ತಯಾರಿಸಿದ್ದು , ಆ ಯಂತ್ರ ವನ್ನು ದಾವಣಗೆರೆ ಜಿಲ್ಲೆಯ ಹೊಳೆ ಹೊನ್ನೂರು ಅರ ತೊಳಲು ಕೈಮರ ಸಮೀಪದ ಅಡಿಕೆ ಜಮೀನ್ದಾರರ ಮನೆಯಲ್ಲಿ ನಾನು ನೋಡಿ ಬಂದಿದ್ದೆ. ಅವರು ಸಾಗರ ಸಮೀಪದ ಶರಾವತಿ ಮುಳುಗಡೆಯ ಮೂಲದವರು. ಮನೆಯಲ್ಲಿ ಸಾಕಷ್ಟು ಜಾನುವಾರುಗಳ ಸಾಕಿದ್ದರು. ಅವರನ್ನು ನಾನು ಈಗ್ಗೆ ಎಂಟು ವರ್ಷಗಳ ಹಿಂದೆ ಬೇಟಿಯಾಗಿದ್ದೆ. ಅವರಾಗ ಮಂಗಳೂರುನಲ್ಲಿ ಇದೇ ಯಂತ್ರದಲ್ಲಿ ಪುಡಿ ಮಾಡಲಾದ ಅಡಿಕೆ ಹಾಳೆ ಪುಡಿ ಮಾರುಕಟ್ಟೆಯಲ್ಲಿ ಚೀಲದಲ್ಲಿ ತುಂಬಿ ತೂಕದ ಲೆಕ್ಕಾಚಾರದಲ್ಲಿ ಮಾರಾಟ ವಾಗುತ್ತದೆ ಎಂದಿದ್ದರು.

ಆ ಯಂತ್ರ ಆ ಕಾಲದಲ್ಲಿ ಇಪ್ಪತ್ತು ಸಾವಿರ ರೂಪಾಯಿಯ ಮೌಲ್ಯವಿತ್ತು. ನಮ್ಮ ಪಶುವೈದ್ಯರು ಅಡಿಕೆ ಹಾಳೆಯನ್ನು ಜಾನುವಾರುಗಳಿಗೆ ಆಹಾರವಾಗಿ ಬಳಕೆ ಬೇಡ ಎಂದದ್ದಕ್ಕೆ ನಾನು ಅಡಿಕೆ ಹಾಳೆ ಪುಡಿ ಯಂತ್ರವನ್ನು ಕೊಂಡು ತರಲಿಲ್ಲ. ಈ ಯಂತ್ರ ನಮ್ಮ ಅಡಿಕೆ ಕೊನೆಯ ಅಡಿಕೆ ಕಾಯಿ ತರಿಯುವ ಯಂತ್ರದ ಮಾದರಿಯಲ್ಲಿದ್ದ ಸರಳವಾಗಿತ್ತು. ಒಣ ಹಾಳೆಯನ್ನು ಯಂತ್ರಕ್ಕೆ ನೀಡಿದಾಗ ಪುಡಿ ಪುಡಿಯಾಗಿ ಬರುತ್ತಿತ್ತು. ಅಡಿಕೆ ಹಾಳೆ ಜಾನುವಾರುಗಳಿಗೆ ಆರೋಗ್ಯವೋ ಅಥವಾ ಅಪಾಯವೋ ಎಂಬುದರ ಬಗ್ಗೆ ವೈಜ್ಞಾನಿಕ ಸಂಶೋಧನೆ ಆದರೆ ಮುಂದಿನ ದಿನಗಳಲ್ಲಿ ಅಡಿಕೆ ಹಾಳೆಯನ್ನು ಜಾನುವಾರುಗಳಿಗೆ ಬಳಸಲು ಗೋಪಾಲಕರಿಗೆ ನೆರವಾಗುತ್ತದೆ. ಆದರೆ ಅಡಿಕೆ ಎಲೆಚುಕ್ಕಿ ರೋಗ ಸಂಪೂರ್ಣ ನಾಶವಾಗುವವರೆಗೂ ಅಡಿಕೆ ಹಾಳೆ ಸೋಗೆಯನ್ನ ಜಾನುವಾರುಗಳಿಗೆ ಆಹಾರವಾಗಿ ನೀಡುವುದನ್ನು ನಿಲ್ಲಿಸುವುದು ಉತ್ತಮ ಎನಿಸುತ್ತದೆ. ಉಳಿದಂತೆ ಅನುಭವಿ ರೈತ ಗೋಪಾಲಕರ ಅವಾಗಾಹನೆಗೆ ಬಿಡುವುದು ಉತ್ತಮ….

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror