ಅಡಿಕೆಯ ಮೌಲ್ಯವರ್ಧನೆಯ ಬಗ್ಗೆ ಅಧ್ಯಯನ ಮಾಡಿ, ಸ್ವತ: ಪ್ರಯೋಗ ಮಾಡಿರುವ ಬದನಾಜೆಯ ಶಂಕರ ಭಟ್ ಅವರ ಜೀವನ ಚರಿತ್ರೆ ‘ಬದನಾಜೆ ಶಂಕರ್ ಭಟ್- ಅಡಿಕೆ ಮೌಲ್ಯವರ್ಧನೆಯ ನೆಲ ವಿಜ್ಞಾನಿ’ ಎಂಬ ನರೇಂದ್ರ ರೈ ದೇರ್ಲಅವರ ಪುಸ್ತಕವು ಆ. 18 ರಂದು ವಿಟ್ಲದ ಮಂಗಳಮಂಟಪದಲ್ಲಿ ಬೆಳಿಗ್ಗೆ 10.30 ಕ್ಕೆ ಬಿಡುಗಡೆಯಾಗಲಿದೆ.
ಜೀವನಪೂರ್ತಿ ಅಡಿಕೆಯ ಬಗ್ಗೆಯೇ ಅಧ್ಯಯನ, ಸಂಶೋಧನೆ ನಡೆಸಿರುವ ಬದನಾಜೆ ಶಂಕರ್ ಭಟ್ಅವರು ಮೂಲ ಆಯುರ್ವೇದ ಪರಂಪರೆಯ ಅಡಿಕೆಯ ಅನೇಕ ಉಪ ಉತ್ಪನ್ನಗಳನ್ನು ಸಂಶೋಧಿಸಿದವರು.
ಅಂಟು, ಸಾಬೂನು, ವೈನ್, ಲಘು ಪಾನೀಯ, ಚೊಗರಿನ ಸಾರ, ವಾರ್ನಿಸ್.. ಹೀಗೆ ತಿಂದು ಉಗುಳುವ ಅಡಿಕೆಯ ಬಹುರೂಪಿ ಬೆಳವಣಿಗೆಗೆ ಬುನಾದಿ ಹಾಕಿದವರು. ಈ ದೇಶದ ಕೃಷಿ ವಿಶ್ವವಿದ್ಯಾನಿಲಯ, ಸಂಶೋಧಕರು, ವಿಜ್ಞಾನಿಗಳು, ಕೃಷಿ ತಜ್ಞರು ಬೆರಗಾಗುವಷ್ಟು ಅಡಿಕೆಯ ಒಳಸುಳಿಗಳನ್ನು ತೆರೆದಿಟ್ಟವರು. ಇಷ್ಟೇ ಅಲ್ಲ ,ಅಡಿಕೆಯ ಮಾರಕ ಮಹಾಳಿ, ಹಳದಿಎಲೆ, ಬೇರುಹುಳಗಳಿಗೂ ಔಷಧಿ ಕಂಡು ಹಿಡಿಯಲು ಪ್ರಯತ್ನಿಸಿದವರು. ತಮ್ಮ ಮನೆಯನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಇಷ್ಟೆಲ್ಲಾ ಸಂಶೋಧನೆ ಮಾಡಿದ ಜನವಿಜ್ಞಾನಿ 81ರ ಹರೆಯದ ಶಂಕರ ಭಟ್ಟರ ಬಗ್ಗೆ ನರೇಂದ್ರ ರೈ ದೇರ್ಲ ಅವರು ತಮ್ಮ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯ ಆರನೆಯ ಪುಸ್ತಕವನ್ನಾಗಿ ರಚಿಸಿದ್ದಾರೆ.
ಪುಸ್ತಕ ಬಿಡುಗಡೆಯು ವಿಟ್ಲದ ಮಂಗಳ ಮಂಟಪದಲ್ಲಿ ನಡೆಯಲಿದ್ದು ‘ಅಡಿಕೆ ಪತ್ರಿಕೆ’ಯ ಸಂಪಾದಕರಾದ ಶ್ರೀ ಪಡ್ರೆಯವರು ಬಿಡುಗಡೆ ಮಾಡಲಿದ್ದಾರೆ. ‘ಚೌಟರ ತೋಟ’ದ ಖ್ಯಾತಿಯ ಡಾ. ಚಂದ್ರಶೇಖರ್ ಚೌಟರು ಅಧ್ಯಕ್ಷತೆ ವಹಿಸಲಿದ್ದಾರೆ. ‘ಐಟಿಯಿಂದ ಮೇಟಿ’ ಖ್ಯಾತಿಯ ವಸಂತ ಕಜೆ ಅವರು ಪುಸ್ತಕ ಪರಿಚಯಿಸಲಿದ್ದಾರೆ. ವಿಜ್ಞಾನಿ ಡಾ. ಸರ್ಪಂಗಳ ಕೇಶವ ಭಟ್ ಮತ್ತು ಡಾ ಎಂ ಎಸ್ ಭಟ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹಾವೇರಿ, ಗದಗ, ವಿಜಯನಗರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ…
ಕೂಲಿ ಕಾರ್ಮಿಕರು ಜೀವನ ನಿರ್ವಹಣೆ ಮಾಡಲು ದೂರದ ನಗರಗಳಿಗೆ ವಲಸೆ ಹೋಗದೆ ಉದ್ಯೋಗ…
ಮುಂದಿನ ಮೂರು ದಿನಗಳ ಕಾಲ ರಾಜ್ಯದ ಕೆಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ…
ಭಾರತದಲ್ಲಿ 1.4 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಸುಮಾರು…
ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ ಇದೆ. ಈಗಿನಂತೆ ಎಪ್ರಿಲ್ 2ರಿಂದ…
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.