ಕೇಂದ್ರ ಬಜೆಟ್ 2022 ಕ್ಕೆ ಸಿದ್ಧತೆ ಆರಂಭವಾಗಿದೆ. ಈ ಬಾರಿಯೂ ಕೊರೋನಾ ಲಕ್ಷಣಗಳು ಮತ್ತೆ ಕಂಡುಬಂದಿದೆ. ಇದರ ನಡುವೆಯೇ ದೇಶದ ಆರ್ಥಿಕ ಸ್ಥಿತಿ ಸ್ಥಿರತೆ ಹಾಗೂ ಉತ್ತಮಗೊಳಿಸುವ ಬಗ್ಗೆ ಯೋಜನೆ ಆರಂಭವಾಗಿದೆ. ದೇಶದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಫೆಬ್ರವರಿ ಮೊದಲ ವಾರ ಬಜೆಟ್ ಮಂಡಿಸುವ ಸಾಧ್ಯತೆಯಿದೆ.
ಕಳೆದ ವರ್ಷ ಸರ್ಕಾರವು ಕೊರೋನಾ ಸಂಕಷ್ಟದ ನಡುವೆ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಪ್ಯಾಕೇಜ್‌ಗಳನ್ನು ಘೋಷಿಸಿತ್ತು. ಇದು ಅನೇಕರಿಗೆ ಪ್ರಯೋಜನವಾಗಿದ್ದರೂ ದೇಶದ ಆರ್ಥಿಕ ಸ್ಥಿತಿ ಮಾತ್ರಾ ಸ್ಥಿರತೆಗೊಳ್ಳಲು ಸಾದ್ಯವಾಗಲಿಲ್ಲ. ಹಣದುಬ್ಬರ ಹಿಡಿತಕ್ಕೆ ಬಂದಿರಲಿಲ್ಲ ಎಂದು ತಜ್ಞರು ಹೇಳಿದ್ದರು. ಈ ಬಾರಿಯ ಬಜೆಟ್ 2022-23 ಕೂಡಾ ಕೊರೋನಾ ಸಂಕಷ್ಟದ ನಡುವೆ ಮಂಡಿಸಬೇಕಾಗಬಹುದು. ಕೃಷಿ ಸುಧಾರಣೆ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಬಜೆಟ್ ಹೇಗೆ ಸಹಕಾರಿಯಾದೀತು ಎಂದು ನಿಟ್ಟಿನಲ್ಲಿ ಸಾಮಾನ್ಯ ಜನರು ಹೆಚ್ಚು ಭರವಸೆಯೊಂದಿಗೆ ಹಣಕಾಸು ಸಚಿವರತ್ತ ಗಮನಹರಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel