ಬದಿಯಡ್ಕದ ದಂತ ವೈದ್ಯ ಡಾ.ಕೃಷ್ಣಮೂರ್ತಿ ಅವರ ನಿಗೂಡ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿ ಬದಿಯಡ್ಕದಲ್ಲಿ ವಿಶ್ವ ಹಿಂದು ಪರಿಷತ್ ಆಶ್ರಯದಲ್ಲಿ ಬದಿಯಡ್ಕ ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬದಿಯಡ್ಕದಲ್ಲಿ ವೈದ್ಯರ ನಿಗೂಢ ಸಾವಿನ ತನಿಖೆಗೆ ಆಗ್ರಹಿಸಿ ಪ್ರತಿಭಟನೆ. #badiyadka #Kerala pic.twitter.com/7g5vkLsVyD
— theruralmirror (@ruralmirror) November 11, 2022
ಘಟನೆಗೆ ಕಾರಣವಾದ ಎಲ್ಲಾ ಶಕ್ತಿಗಳನ್ನೂ ಬಂಧಿಸಬೇಕು ಎಂದು ಇದೇ ವೇಳೆ ಒತ್ತಾಯಿಸಲಾಯಿತು. ಡಾ.ಕೃಷ್ಣಮೂರ್ತಿ ಅವರ ಮನೆಯ ಪರಿಸರದಿಂದ ಹೊರಟ ಬೃಹತ್ ಮೆರವಣಿಗೆಯು ಬದಿಯಡ್ಕ ಪೇಟೆಯಲ್ಲಿ ಸಾಗಿತು. ಬಳಿಕ ನಡೆದ ಸಭೆಯಲ್ಲಿ ಸಂಘ ಪರಿವಾರ ನೇತಾರರಾದ ಶರಣ್ ಪಂಪ್ ವೆಲ್, ನ್ಯಾಯವಾದಿ ಕೆ.ಶ್ರೀಕಾಂತ್, ಪಿ.ರಮೇಶ್ ಕಾಸರಗೋಡು, ಸುಧಾಮ ಗೋಸಾಡ, ಹರೀಶ್ ನಾರಂಪಾಡಿ ಮೊದಲಾದವರು ಮಾತನಾಡಿದರು.
ವಿಶ್ವ ಹಿಂದು ಪರಿಷತ್ ಪ್ರಖಂಡ ಕಾರ್ಯದರ್ಶಿ ಮಂಜುನಾಥ ಮಾನ್ಯ ಸ್ವಾಗತಿಸಿದರು. ಹರೀಶ್ ಪುತ್ರಕಳ ವಂದಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel