ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ ವೇಳೆಯಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳೊಂದಿಗೆ ದೇವಾಲಯದ ದ್ವಾರವನ್ನು ತೆರೆಯಲಾಗಿದೆ. ಚಮೋಲಿ ಜಿಲ್ಲೆಯಲ್ಲಿರುವ ಬದರೀನಾಥ ಧಾಮಕ್ಕೆ ಮೊದಲು ಉದ್ಧವ , ಗರುಡ ಹಾಗೂ ಆದಿಗುರು ಶಂಕರಾಚಾರ್ಯರ ಪ್ರತಿಮೆಗಳನ್ನು ಉತ್ಸವದಲ್ಲಿ ದೇಗುಲಕ್ಕೆ ತರಲಾಯಿತು. ಇದೇ ವೇಳೆ ಭಾಮನಿ ಗ್ರಾಮದಲ್ಲಿದ್ದ ಕುಬೇರ ಮತ್ತು ನಂದಾದೇವಿಯ ಉತ್ಸವ ಮೂರ್ತಿಗಳನ್ನು ಸಹ ದೇಗುಲಕ್ಕೆ ತರಲಾಗಿದ್ದು, ರಾತ್ರಿಯವರೆಗೂ ಬದರೀನಾಥ ದೇಗುಲದಲ್ಲಿ ಪೂಜೆ ನಡೆಯಿತು. ಬದರೀನಾಥ, ಕೇದಾರನಾಥ ದೇವಾಲಯ ಸಮಿತಿಯು ಇಡೀ ದೇವಾಲಯವನ್ನು 15 ಕ್ವಿಂಟಾಲ್ ಹೂಗಳಿಂದ ಅಲಂಕರಿಸಿದ್ದು, ಭಾರೀ ಪ್ರಮಾಣದಲ್ಲಿ ಭಕ್ತರು ದರ್ಶನಕ್ಕಾಗಿ ಆಗಮಿಸಿದ್ದಾರೆ. ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತವು ಎಲ್ಲ ವ್ಯವಸ್ಥೆಗಳನ್ನು ಹಾಗೂ ಸುರಕ್ಷತೆಗಾಗಿ ಅರೆಸೇನಾ ಪಡೆಗಳನ್ನು ನಿಯೋಜಿಸಿದೆ.
“ದ ರೂರಲ್ ಮಿರರ್.ಕಾಂ” ವ್ಯಾಟ್ಸಪ್ ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ..