Opinion

“ಬ್ಯಾಗ್ ” ಗೋಬರ್ ಗ್ಯಾಸ್ | ಸಣ್ಣ ಗೋಪಾಲಕರಿಗೆ ಈ ಬ್ಯಾಗ್ ಮಾದರಿಯ ಗೋಬರ್ ಗ್ಯಾಸ್ ಅತ್ಯುತ್ತಮ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮಲ್ಲೂ ಇನ್ಫೋಸಿಸ್(Infosys) ಪ್ರತಿಷ್ಠಾನದವರ ಪ್ರಾಯೋಜಕತ್ಚದ ಸಿಸ್ಟಿಮಾ ಕಂಪನಿಯ(Sistema Company) ಬ್ಯಾಗ್ ಬಯೋ ಗ್ಯಾಸ್(Bag Bio gas) ಸ್ಥಾವರವಿದೆ. ನಮ್ಮಲ್ಲಿ ಸಿಸ್ಟಿಮಾ ಕಂಪನಿಯು ಬಯೋ ಗ್ಯಾಸ್ ಸ್ಥಾವರ ಸ್ಥಾಪಿಸಿ ಹೋಗಿ ಒಂದು ವರ್ಷದ ತನಕ ಸಮಾಧಾನಕರವಾಗಿ ಗ್ಯಾಸ್ ಉತ್ಪತ್ತಿಯಾಗುತ್ತಿರಲಿಲ್ಲ. ಕೊನೆಗೆ ಸಿಸ್ಟಿಮಾದ ಅಧಿಕಾರಿಗಳು ಬಂದು ಬ್ಯಾಗ್ ನೊಳಗಿದ್ದ ಐದಾರು ಸಾವಿರ ಲೀಟರ್ ಅಮೂಲ್ಯ ಸ್ಲರಿಯನ್ನು(Slurry) ಗುಡ್ಡಕ್ಕೆ ಬಿಟ್ಟು ಹೋದರು. “ಗ್ಯಾಸ್(Gas) ಬರಲಿಲ್ಲ…!!!”… ಯಾಕೆ ಗ್ಯಾಸ್ ಉತ್ಪತ್ತಿ ಯಾಗುತ್ತಿಲ್ಲ ಎಂಬ ಪ್ರಶ್ನೆ ಗೆ ಯಾರಲ್ಲೂ ಉತ್ತರವಿರಲಿಲ್ಲ…!!!

Advertisement

ಮಲೆನಾಡು ಕರಾವಳಿಯ ಭಾಗದಲ್ಲಿ ” ಅರ್ಧ ನೆಲದೊಳಗಿನ ಅರ್ಧ ಹೊರಗಿರುವಂತೆ ಈ ಗ್ಯಾಸ್ ಬ್ಯಾಗ್ ಸ್ಥಾಪಿಸಿದರೆ ಮಳೆಗಾಲದಲ್ಲಿ ತೃಪ್ತಿಕರವಾಗಿ ಗ್ಯಾಸ್ ಉತ್ಪತ್ತಿಯಾಗೋಲ್ಲ…!! ಸಂಸ್ಥೆಯ ಮುಖ್ಯಾಧಿಕಾರಿಯೊಬ್ಬರ ಬಳಿ ಮಾತನಾಡಿದರೆ ಅವರು ಅಸಂಬದ್ಧವಾಗಿ ವಾದ ಮಾಡಿದರು. ಮಲೆನಾಡು ಕರಾವಳಿ ಪ್ರದೇಶದಲ್ಲಿ ಈ ಬ್ಯಾಗ್ ಸ್ಥಾವರವನ್ನು ನೆಲಮಟ್ಟದಿಂದ ಕನಿಷ್ಠ ಎರಡು ಅಡಿ ಎತ್ತರ ತಳಪಾಯ ಮಾಡಿ ಅದರ ಮೇಲೆ ಪ್ಲಾಂಟ್ ಸ್ಥಾಪಿಸಿ. ದಯವಿಟ್ಟು ಯಾರೂ ನೆಲದೊಳಗೆ ಈ ಪ್ಲಾಂಟ್ ಸ್ಥಾಪಿಸಬೇಡಿ. ಮತ್ತೆ ಮಳೆಗಾಲದಲ್ಲಿ ದಯವಿಟ್ಟು ಇಡೀ ಸ್ಥಾವರವನ್ನು ಮಳೆ ನೀರು ತಾಕದಂತೆ ಮುಚ್ಚಿ… ಮಲೆನಾಡು ಕರಾವಳಿಯಲ್ಲಿ ಈ ಪ್ಲಾಂಟ್ ಗೆ ಶಾಶ್ವತವಾಗಿ ಮಾಡನ್ನ ಮಾಡಿದರೂ ಉತ್ತಮ…

ದಿನಕ್ಕೆ ಎರಡು ಬುಟ್ಟಿ ಹಸಿ ಫ್ರೆಶ್ ಸಗಣಿಯನ್ನು ಸುಮಾರು ಅರವತ್ತು ಲೀಟರ್ ನೀರಿನೊಂದಿಗೆ ಚೆನ್ನಾಗಿ ಕರಡಿ ಸ್ಥಾವರದೊಳಕ್ಕೆ ಬಿಡಬೇಕು.‌ ಸ್ಲರಿ ಸಾಕಷ್ಟು ತೆಳ್ಳಗೇ ಇರಲಿ … ಸ್ಲರಿ ಹೊಂಡ ಇಳಿಜಾರಿನಲ್ಲಿರಲಿ.. ಮೂರು ನಾಲ್ಕು ದಿನಕ್ಕೊಮ್ಮೆ ನಮ್ಮಲ್ಲಿ ಸ್ಲರಿ ಹೊರಬರುತ್ತದೆ. ಈ ಕಾರಣಕ್ಕೆ ಗೋಏರ್ ಗ್ಯಾಸ್ ಸ್ಥಾವರಕ್ಕಿಂತ ತಗ್ಗಿನಲ್ಲಿ ಸ್ಲರಿ ಹೊಂಡ ಇರದಿದ್ದರೆ ಸ್ಲರಿ ಹೊರಕ್ಕೆ ಚೆಲ್ಲಿ ವ್ಯರ್ಥವಾಗುತ್ತದೆ. ಇದು ನಮ್ಮ ಸ್ವಂತ ಅನುಭವ…

ಸಿಸ್ಟಿಮಾ ಕಂಪನಿಯ ಒಲೆ ಖಂಡಿತವಾಗಿಯೂ ಗುಣಮಟ್ಟದ್ದಲ್ಲ. ನಮ್ಮ ಮನೆಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಹೆಚ್ ಪಿ‌ ಗ್ಯಾಸ್ ಸಂಪರ್ಕ ಪಡೆದಾಗ ಆ ಗ್ಯಾಸ್ ಸಂಪರ್ಕದೊಂದಿಗೆ ನಮ್ಮಲ್ಲಿ ಹೆಚ್ ಪಿ‌ ಸಂಸ್ಥೆ ನೀಡಿದ ಅಕೈ ಕಂಪನಿಯ ಒಲೆ ಇಂದಿಗೂ ಕೆಲವು ಚಿಕ್ಕ ಪುಟ್ಟ ರಿಪೇರಿಯೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆದರೆ ಸಿಸ್ಟಿಮಾ ಕಂಪನಿಯು ಸ್ಥಾವರದೊಂದಿಗೆ ಕೊಟ್ಟ ಒಲೆ ಪರಮ ಡೆಲಿಕೇಟು ಆಗಿತ್ತು…!! ಒಂದೇ ವರ್ಷಕ್ಕೆ ಒಲೆಯನ್ನ ಬಿಸಾಡಿ ಬೇರೆ ಒಲೆಯನ್ನು ಕೊಂಡು ಬಳಸುತ್ತಿದ್ದೇವೆ.
ಬಂಧುಗಳೇ… ಈ ಬ್ಯಾಗ್ ಗ್ಯಾಸ್ ಸ್ಥಾವರ ಬಹಳ ಉಳಿತಾಯಕಾರಿ ಮತ್ತು ಕಡಿಮೆ ವೆಚ್ಚ. ಸರಿಯಾಗಿ‌ ಅಧ್ಯಯನ ಮಾಡಿ . ಒಂದೆರಡು ಕಡೆ ಈ ಬ್ಯಾಗ್ ಗ್ಯಾಸ್ ನ್ನ ನೋಡಿ ಸ್ಥಾಪಿಸಿ….

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಪ್ರತಿಯೊಂದು  ಗ್ರಾಮ ಪಂಚಾಯಿತಿಯಲ್ಲಿ  ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…

8 minutes ago

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧ

ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು…

11 minutes ago

ಹೃದಯಾಘಾತದ ಬಗ್ಗೆ ಅನಗತ್ಯ ಆತಂಕ ಪಡುವ ಅಗತ್ಯ ಇಲ್ಲ

ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಜನರಲ್ಲಿ ಹೃದಯದ ವಿಷಯದಲ್ಲಿ ಭಯದ ವಾತಾವರಣ…

21 minutes ago

ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ – ಗೃಹಸಚಿವ ಡಾ.ಜಿ.ಪರಮೇಶ್ವರ್

ಸುಳ್ಳು ಸುದ್ದಿ ಹರಡುವವರು ಮತ್ತು ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ದ ಸೂಕ್ತ ಕಾನೂನು…

38 minutes ago

ಬಾಹ್ಯಾಕಾಶದಲ್ಲಿ ಹೆಸರುಕಾಳು, ಮೆಂತ್ಯ ಮೊಳಕೆಯೊಡೆಯುವ ಪ್ರಯೋಗ ಪ್ರಗತಿಯಲ್ಲಿ – ನಾಸಾ ಸ್ಪಷ್ಟನೆ

ಬಾಹ್ಯಕಾಶದಲ್ಲಿ   ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹೆಸರುಕಾಳು ಹಾಗೂ ಮೆಂತ್ಯ ಕಾಳುಗಳ ಮೊಳಕೆಯೊಡೆಯುವ ಪ್ರಯೋಗಗಳನ್ನು…

41 minutes ago

ನೀವೀಗ ಕಾಳುಮೆಣಸು ಕೃಷಿ ಆಸಕ್ತರೇ….?, ಹಾಗಿದ್ದರೆ ಗಮನಿಸಿ….| ಕಾಳುಮೆಣಸು ಕೃಷಿಯ ಕಾರ್ಯ ಚಟುವಟಿಕೆಗಳು

ಸಣ್ಣ ಹಿಡುವಳಿದಾರರಿಗೆ ಈಗ ಕಾಳುಮೆಣಸು ಕೃಷಿಯ ಬಗ್ಗೆ ಸಾಕಷ್ಟು ಗೊಂದಲ. ಇಂತಹ ಸಮಯದಲ್ಲಿ…

7 hours ago