ನಮ್ಮಲ್ಲೂ ಇನ್ಫೋಸಿಸ್(Infosys) ಪ್ರತಿಷ್ಠಾನದವರ ಪ್ರಾಯೋಜಕತ್ಚದ ಸಿಸ್ಟಿಮಾ ಕಂಪನಿಯ(Sistema Company) ಬ್ಯಾಗ್ ಬಯೋ ಗ್ಯಾಸ್(Bag Bio gas) ಸ್ಥಾವರವಿದೆ. ನಮ್ಮಲ್ಲಿ ಸಿಸ್ಟಿಮಾ ಕಂಪನಿಯು ಬಯೋ ಗ್ಯಾಸ್ ಸ್ಥಾವರ ಸ್ಥಾಪಿಸಿ ಹೋಗಿ ಒಂದು ವರ್ಷದ ತನಕ ಸಮಾಧಾನಕರವಾಗಿ ಗ್ಯಾಸ್ ಉತ್ಪತ್ತಿಯಾಗುತ್ತಿರಲಿಲ್ಲ. ಕೊನೆಗೆ ಸಿಸ್ಟಿಮಾದ ಅಧಿಕಾರಿಗಳು ಬಂದು ಬ್ಯಾಗ್ ನೊಳಗಿದ್ದ ಐದಾರು ಸಾವಿರ ಲೀಟರ್ ಅಮೂಲ್ಯ ಸ್ಲರಿಯನ್ನು(Slurry) ಗುಡ್ಡಕ್ಕೆ ಬಿಟ್ಟು ಹೋದರು. “ಗ್ಯಾಸ್(Gas) ಬರಲಿಲ್ಲ…!!!”… ಯಾಕೆ ಗ್ಯಾಸ್ ಉತ್ಪತ್ತಿ ಯಾಗುತ್ತಿಲ್ಲ ಎಂಬ ಪ್ರಶ್ನೆ ಗೆ ಯಾರಲ್ಲೂ ಉತ್ತರವಿರಲಿಲ್ಲ…!!!
ಮಲೆನಾಡು ಕರಾವಳಿಯ ಭಾಗದಲ್ಲಿ ” ಅರ್ಧ ನೆಲದೊಳಗಿನ ಅರ್ಧ ಹೊರಗಿರುವಂತೆ ಈ ಗ್ಯಾಸ್ ಬ್ಯಾಗ್ ಸ್ಥಾಪಿಸಿದರೆ ಮಳೆಗಾಲದಲ್ಲಿ ತೃಪ್ತಿಕರವಾಗಿ ಗ್ಯಾಸ್ ಉತ್ಪತ್ತಿಯಾಗೋಲ್ಲ…!! ಸಂಸ್ಥೆಯ ಮುಖ್ಯಾಧಿಕಾರಿಯೊಬ್ಬರ ಬಳಿ ಮಾತನಾಡಿದರೆ ಅವರು ಅಸಂಬದ್ಧವಾಗಿ ವಾದ ಮಾಡಿದರು. ಮಲೆನಾಡು ಕರಾವಳಿ ಪ್ರದೇಶದಲ್ಲಿ ಈ ಬ್ಯಾಗ್ ಸ್ಥಾವರವನ್ನು ನೆಲಮಟ್ಟದಿಂದ ಕನಿಷ್ಠ ಎರಡು ಅಡಿ ಎತ್ತರ ತಳಪಾಯ ಮಾಡಿ ಅದರ ಮೇಲೆ ಪ್ಲಾಂಟ್ ಸ್ಥಾಪಿಸಿ. ದಯವಿಟ್ಟು ಯಾರೂ ನೆಲದೊಳಗೆ ಈ ಪ್ಲಾಂಟ್ ಸ್ಥಾಪಿಸಬೇಡಿ. ಮತ್ತೆ ಮಳೆಗಾಲದಲ್ಲಿ ದಯವಿಟ್ಟು ಇಡೀ ಸ್ಥಾವರವನ್ನು ಮಳೆ ನೀರು ತಾಕದಂತೆ ಮುಚ್ಚಿ… ಮಲೆನಾಡು ಕರಾವಳಿಯಲ್ಲಿ ಈ ಪ್ಲಾಂಟ್ ಗೆ ಶಾಶ್ವತವಾಗಿ ಮಾಡನ್ನ ಮಾಡಿದರೂ ಉತ್ತಮ…
ದಿನಕ್ಕೆ ಎರಡು ಬುಟ್ಟಿ ಹಸಿ ಫ್ರೆಶ್ ಸಗಣಿಯನ್ನು ಸುಮಾರು ಅರವತ್ತು ಲೀಟರ್ ನೀರಿನೊಂದಿಗೆ ಚೆನ್ನಾಗಿ ಕರಡಿ ಸ್ಥಾವರದೊಳಕ್ಕೆ ಬಿಡಬೇಕು. ಸ್ಲರಿ ಸಾಕಷ್ಟು ತೆಳ್ಳಗೇ ಇರಲಿ … ಸ್ಲರಿ ಹೊಂಡ ಇಳಿಜಾರಿನಲ್ಲಿರಲಿ.. ಮೂರು ನಾಲ್ಕು ದಿನಕ್ಕೊಮ್ಮೆ ನಮ್ಮಲ್ಲಿ ಸ್ಲರಿ ಹೊರಬರುತ್ತದೆ. ಈ ಕಾರಣಕ್ಕೆ ಗೋಏರ್ ಗ್ಯಾಸ್ ಸ್ಥಾವರಕ್ಕಿಂತ ತಗ್ಗಿನಲ್ಲಿ ಸ್ಲರಿ ಹೊಂಡ ಇರದಿದ್ದರೆ ಸ್ಲರಿ ಹೊರಕ್ಕೆ ಚೆಲ್ಲಿ ವ್ಯರ್ಥವಾಗುತ್ತದೆ. ಇದು ನಮ್ಮ ಸ್ವಂತ ಅನುಭವ…
ಸಿಸ್ಟಿಮಾ ಕಂಪನಿಯ ಒಲೆ ಖಂಡಿತವಾಗಿಯೂ ಗುಣಮಟ್ಟದ್ದಲ್ಲ. ನಮ್ಮ ಮನೆಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಹೆಚ್ ಪಿ ಗ್ಯಾಸ್ ಸಂಪರ್ಕ ಪಡೆದಾಗ ಆ ಗ್ಯಾಸ್ ಸಂಪರ್ಕದೊಂದಿಗೆ ನಮ್ಮಲ್ಲಿ ಹೆಚ್ ಪಿ ಸಂಸ್ಥೆ ನೀಡಿದ ಅಕೈ ಕಂಪನಿಯ ಒಲೆ ಇಂದಿಗೂ ಕೆಲವು ಚಿಕ್ಕ ಪುಟ್ಟ ರಿಪೇರಿಯೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆದರೆ ಸಿಸ್ಟಿಮಾ ಕಂಪನಿಯು ಸ್ಥಾವರದೊಂದಿಗೆ ಕೊಟ್ಟ ಒಲೆ ಪರಮ ಡೆಲಿಕೇಟು ಆಗಿತ್ತು…!! ಒಂದೇ ವರ್ಷಕ್ಕೆ ಒಲೆಯನ್ನ ಬಿಸಾಡಿ ಬೇರೆ ಒಲೆಯನ್ನು ಕೊಂಡು ಬಳಸುತ್ತಿದ್ದೇವೆ.
ಬಂಧುಗಳೇ… ಈ ಬ್ಯಾಗ್ ಗ್ಯಾಸ್ ಸ್ಥಾವರ ಬಹಳ ಉಳಿತಾಯಕಾರಿ ಮತ್ತು ಕಡಿಮೆ ವೆಚ್ಚ. ಸರಿಯಾಗಿ ಅಧ್ಯಯನ ಮಾಡಿ . ಒಂದೆರಡು ಕಡೆ ಈ ಬ್ಯಾಗ್ ಗ್ಯಾಸ್ ನ್ನ ನೋಡಿ ಸ್ಥಾಪಿಸಿ….
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…
ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…
ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…
ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…