ಬೇಕರಿ ಆಹಾರಗಳು(Bakery Food) ನೇರವಾಗಿ ಪ್ರತಿ ದಿನ ತರುವ ಸಮಸ್ಯೆ ಎಂದರೆ ಮಲಬದ್ಧತೆ(Constipation). ಮಲಬದ್ಧತೆ ಎಲ್ಲಾ ಕಾಯಿಲೆಗಳಿಗೂ(Decease) ಮೂಲ ಎಂದು ಆಯುರ್ವೇದ(Ayurveda) ಹೇಳುತ್ತದೆ. ವಿಷ ವಸ್ತುಗಳು(Poision) ಪ್ರತಿ ದಿನ ದೇಹದಿಂದ(Body) ಹೊರ ಹೋಗದೇ ದೇಹ ಕಾಯಿಲೆಗಳ ಗೂಡಾಗುತ್ತದೆ.
ಬೇಕರಿಯ ಆಹಾರಗಳು ಖಂಡಿತವಾಗಿಯೂ ತರುವ ಮತ್ತೊಂದು ಪ್ರಮುಖ ಕಾಯಿಲೆ ಸಕ್ಕರೆ ಕಾಯಿಲೆ(Diabetes). ಬೇಕರಿಯ ಆಹಾರಗಳಿಗೆ ಬೇಕಾದ ಮೂಲ ವಸ್ತುವೇ ಮೈದಾ. ಈ ಮೈದಾದಲ್ಲಿರುವ ಅಲ್ಲಾಕ್ಸಾನ್ ಎಂಬ ವಿಷವಸ್ತು ನೇರವಾಗಿ ನಮ್ಮ ಮೇದೋಜೀರಕ ಗ್ರಂಥಿಗೆ ದಾಳಿ ಇಡುತ್ತದೆ. ಅದನ್ನು ಹಾಳು ಮಾಡಿ ಇನ್ಸುಲಿನ್ ಸ್ರವಿಸುವಿಕೆಯನ್ನು ಕುಗ್ಗಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಸಣ್ಣದಾದ ಮತ್ತು ಅತಿ ಸೂಕ್ಷ್ಮವಾದ ಮೇದೋಜೀರಕ ಗ್ರಂಥಿಯನ್ನು ಹೊಂದಿರುತ್ತಾರೆ. ಈ ಗ್ರಂಥಿ ಬೇಕರಿಯ ಆಹಾರಗಳ ದಾಳಿಗೆ ತುತ್ತಾಗಿ ಬೆಳವಣಿಗೆ ಹೊಂದುವುದೇ ಇಲ್ಲ.
ನಮ್ಮ ತಂದೆ ತಾಯಿಗಳು ನಮಗೆ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ಮಾತ್ರ ಸಿಹಿ ತಿಂಡಿಗಳನ್ನು ಮನೆಯಲ್ಲಿ ಮಾಡಿಕೊಡುತ್ತಿದ್ದರು. ಬೇರೆ ದಿನಗಳಲ್ಲಿ ಸಿಹಿ ವರ್ಜವಾಗಿತ್ತು. ಇಂದಿನ ಮಕ್ಕಳು ಸಿಹಿತಿನ್ನದ ದಿನವೇ ಇಲ್ಲ. ಇಂದಿನ ಆಹಾರಗಳಲ್ಲಿ ಅತ್ಯಂತ ಚಟ್ಟ ವಿಷಯವೆಂದರೆ ಸಕ್ಕರೆ. ಪ್ರತಿದಿನದ ಸಕ್ಕರೆ ಸೇವನೆಯಿಂದಾಗಿ ಮಕ್ಕಳ ಸೂಕ್ಷ್ಮ ಮೇಧೋಜೀರಕ ಗ್ರಂಥಿ ಹೆಚ್ಚು ಇನ್ಸುಲಿನ್ ಸ್ರವಿಸುವಿಕೆಗೆ ಅನಿವಾರ್ಯವಾಗಿ ತುತ್ತಾಗಿ ಹಾಳಾಗ ತೊಡಗುತ್ತದೆ. ಹೆಚ್ಚಿನ ಸಕ್ಕರೆ ಸೇವನೆ ದೇಹವನ್ನು ಆಮ್ಲೀಯಗೊಳಿಸಿ ಕ್ಯಾನ್ಸರ್ ಕಾಯಿಲೆ ಉದ್ಭವಿಸಲು ಕೂಡ ಕಾರಣವಾಗುತ್ತದೆ.
ಈ ಮಕ್ಕಳು ದೊಡ್ಡವರಾದಾಗ ಅಶಕ್ತ ಮೇದೋಜೀರಕ ಗ್ರಂಥಿ ಮತ್ತು ಇನ್ಸುಲಿನ್ ಕೊರತೆಯಿಂದಾಗಿ ಸಕ್ಕರೆ ಕಾಯಿಲೆಗೆ ಖಂಡಿತವಾಗಿಯೂ ತುತ್ತಾಗುತ್ತಾರೆ. ಜೀವನಪೂರ್ತಿ ಔಷಧಿಗಳ ಮೇಲೆ ಅವಲಂಬನೆ ಮತ್ತು ಸಿಹಿ ತಿಂಡಿಗಳ ತ್ಯಾಜ್ಯ ಅನಿವಾರ್ಯವಾಗುತ್ತದೆ. ತಮ್ಮ ಪ್ರೀತಿಯನ್ನು ತೋರಿಸಲು ಪ್ರತಿದಿನ ಬೇಕರಿಯ ಆಹಾರಗಳನ್ನು ಮತ್ತು ಸಿಹಿ ತಿಂಡಿಗಳನ್ನು ಮಕ್ಕಳಿಗಾಗಿ ಕೊಂಡೊಯ್ಯುವ ತಂದೆ ತಾಯಿಗಳು ಅವರ ವೈರಿಗಳೇ ಆಗಿರುತ್ತಾರೆ .
ನಿಮ್ಮ ಮಕ್ಕಳನ್ನು ನಿಜವಾಗಿಯೂ ಪ್ರೀತಿಸುವ ತಂದೆ ತಾಯಿಗಳೇ ನೀವಾಗಿದ್ದರೆ ಹೊರಗಿನ, ಬೇಕರಿಯ ಮತ್ತು ಸಿಹಿ ತಿಂಡಿಗಳು ಅವರಿಗೆ ಬೇಡ. ಪ್ರತಿದಿನ ನಮ್ಮ ಮಕ್ಕಳಿಗೆ ನಾವು ತಿನ್ನಿಸುತ್ತಿರುವ ಚಾಕೊಲೇಟ್, ಬಿಸ್ಕೆಟ್, ಬ್ರೆಡ್, ಐಸ್ ಕ್ರೀಮ್, ಪಿಜ್ಜಾ, ಚಾಟ್, ಇವುಗಳೇ ಅವರ ಬದುಕಿಗೆ ಅಡ್ಡಿಯಾಗುತ್ತವೆ. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ನಾವಿಂದು ಆಚರಿಸುತ್ತಿರುವ ಬರ್ತಡೇ ಎಂಬ ಮೂರ್ಖ ಬ್ರಿಟಿಷ್ ಪದ್ಧತಿ ಮಕ್ಕಳ ಮರಣಕ್ಕೆ ಮುನ್ನುಡಿ ಬರೆಯುತ್ತಿದೆ. ದೀಪ ಆರಿಸುವುದಲ್ಲ ! ದೀಪ ಬೆಳಗಿಸಿ ಕಲ್ಲಂಗಡಿ, ಬಾಳೆಹಣ್ಣು, ಉಂಡೆ, ಕತ್ತರಿಸಿ ಭಾರತೀಯ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳೋಣ.
ದೇಶಿಯ ಆಹಾರಗಳಾದ ಉಂಡೆ, ಕೋಡುಬಳೆ, ಚಕ್ಕುಲಿ, ಕಡುಬು, ಪಾಯಸ, ಮುಂತಾದವುಗಳನ್ನು ಮಕ್ಕಳಿಗೆ ಹೇರಳವಾಗಿ ತಿನ್ನಿಸಿ, ಯಾವ ಕಾಯಿಲೆಯೂ ಬರುವುದಿಲ್ಲ. ಒಟ್ಟಿನಲ್ಲಿ ನಿಮ್ಮ ಸಂಸಾರವು ಸೇವಿಸುವ ಆಹಾರಗಳು ನಿಮ್ಮ ಮನೆಯ ಆಹಾರಗಳೇ ಆಗಿರಲಿ. ಇದೊಂದು ಕೆಲಸವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಸಂಸಾರದ 80 ಪ್ರತಿಶತ: ಕಾಯಿಲೆಗಳು ದೂರವಾಗುತ್ತವೆ. ಅಂತಹ ತಂದೆ ತಾಯಿಗಳು ನೀವಾಗುತ್ತಿರಲ್ಲವೇ?
If you are a parent who truly loves your children, they don’t want outside, bakery and sweets. The chocolate, biscuits, bread, ice cream, pizza, chat that we feed our children every day, these are the obstacles in their life. The silly British custom of birthdays we celebrate at home and in schools is heralding the death of children.