ಬಾಳೆಪುಣಿ ಗ್ರಾಮದ ಪಂಚಾಯಿತಿನಲ್ಲಿ ಈ ಬಾರಿ ಯುವಕರ ತಂಡ ಕಣದಲ್ಲಿದೆ. ಅದರಲ್ಲಿ ಪದವೀಧರ ಯುವಕರ ತಂಡ
ಸ್ಪರ್ಧಿಸುತ್ತಿರುವುದು ಹೆಚ್ಚು ಗಮನ ಸೆಳೆದಿದೆ.
ಅದರಲ್ಲೂ ಇಂಜಿನಿಯಂರಿಂಗ್ ಪದವೀಧರ ಶಿವನಂದನ ಎಮ್ ಹಾಗೂ ಡಿ ಶೋಭಾ ಮತ್ತು ಸರೋಜಿನಿ ರೈ ಅವರ ಯೋಜನಾಬದ್ಧ ಅಭಿವೃದ್ಧಿಯ ರೂಪುರೇಷೆ ಈಗ ಹೆಚ್ಚು ಗಮನ ಸೆಳೆದಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲೂ ಅಭಿವೃದ್ಧಿಯ ಪಥದಲ್ಲಿ ಸಾಗುವತ್ತ ವಿಶ್ವಾಸ ಹೊತ್ತು, ರಾಜ್ಯದ ಎಲ್ಲಾ ಮತದಾರರ ಗಮನ ಸೆಳೆಯುವ ರೀತಿಯಲ್ಲಿದೆ. ಬಾಳೆಪುಣಿ ಗ್ರಾಮವನ್ನು ಬಲಿಷ್ಠಗೊಳಿಸಿ, ‘ಮಾದರಿ ವಾರ್ಡ್’ ನ್ನಾಗಿ ಮಾಡುವ ಯೋಜನೆ ಇಲ್ಲಿದೆ. ಗ್ರಾಮದ ಜನತೆಗೆ ಸ್ವಚ್ಛ ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ, ರಸ್ತೆ ನಿರ್ಮಾಣದ ಜೊತೆಗೆ ಇನ್ನಿತರ ಕಾರ್ಯ ಯೋಜನೆಗಳೊಂದಿಗೆ, ಬಾಳೆಪುಣಿ ಗ್ರಾಮ ಪಂಚಾಯತ್ ನ್ನು ಜನ ಸೇವಾ ಕೇಂದ್ರವನ್ನಾಗಿಸುವುದು ಇವರ ಗುರಿ. ಈ ಕನಸಿನ, ‘ಮಾದರಿ ಗ್ರಾಮ ಯೋಜನೆ’, ಯನ್ನು ಸಕ್ರಿಯಗೊಳಿಸಲು ಜನತೆ ಕೈಜೋಡಿಸುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಶಿವನಂದನ್.
ಕ್ರೀಡಾ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕೃಷಿ ಕ್ಷೇತ್ರ, ಮಹಿಳಾ ಸಬಲೀಕರಣ, ಆರೋಗ್ಯ ಕ್ಷೇತ್ರ, ಅಭಿವೃದ್ಧಿಯ ಕಾರ್ಯ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಗುರಿಯನ್ನು ಹೊಂದಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement