ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಯಾವುದೇ ಸಿಬಂದಿಗಳು ಇರಲಿಲ್ಲ ಎನ್ನುವ ವಿಡಿಯೋ ವೈರಲ್ ಆಗುತ್ತಿದೆ. ವ್ಯಕ್ತಿಯೋರ್ವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಬೆಳ್ಳಾರೆ ಆಸ್ಪತ್ರೆ ತೆರೆದಿದ್ದರೂ ಕರ್ತವ್ಯ ನಿರ್ವಹಿಸುವ ವೈದ್ಯರು, ಸಿಬ್ಬಂದಿಗಳು ಇರಲಿಲ್ಲ ಎನ್ನುವುದು ವಿಡಿಯೋ ಸಾರಾಂಶ. ವೈದ್ಯರು, ಔಷಧಿ ವಿತರಕರು, ರಿಷೆಪ್ಸನ್ ಸಿಬ್ಬಂದಿ ಸೇರಿದಂತೆ ಯಾವುದೇ ಸಿಬ್ಬಂದಿ ಕಂಡುಬರಲಿಲ್ಲ. ಬೆಳಗ್ಗೆ 9.15 ಕ್ಕೆ ಔಷಧಿಗೆ ಆಗಮಿಸಿದ ಇಬ್ಬರು ರೋಗಿಗಳು ಇದ್ದರು, ವಿಡಿಯೋದಲ್ಲಿ ಅವರು ಬೆಳಗ್ಗೆ ಬಂದಿರುವುದನ್ನು ಖಚಿತಪಡಿಸುತ್ತಿದ್ದರು. ಆಸ್ಪತ್ರೆಯಲ್ಲಿ ಸಿಬಂದಿಗಳ ಕೊರತೆಯೋ ? ಆ ವಿಡಿಯೋ ಸಮಯದಲ್ಲಿ ಸಿಬಂದಿಗಳು ಇರಲಿಲ್ಲವೋ? ಎಂಬುದರ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಅಗತ್ಯ ಎಂಬುದು ಸಾರ್ವಜನಿಕರ ಒತ್ತಾಯ. (ವೈರಲ್ ಆಗಿರುವ ವಿಡಿಯೋ ಇಲ್ಲಿದೆ )
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…