ಆದರ್ಶವಾಗಿಲ್ಲ ಬಳ್ಪದ ಗ್ರಾಮೀಣ ರಸ್ತೆ | ಸುಸ್ತಾದ ಗ್ರಾಮೀಣ ಜನರು ರಸ್ತೆಗೆ ನೆಟ್ಟರು ಬಾಳೆ..!

October 1, 2020
10:11 AM
ನೇಕ ಸಮಯಗಳಿಂದ ರಸ್ತೆ ಸುಧಾರಣೆಗೆ ಮನವಿ ಮಾಡಿಯೂ ಪ್ರಯೋಜನವಾಗದ ಕಾರಣದಿಂದ ಗ್ರಾಮೀಣ ಭಾಗದ ಜನರು  ರಸ್ತೆಗೆ ಬಾಳೆ ನೆಡುವ ಮೂಲಕ ತಮ್ಮ ಪ್ರತಿಭಟನೆಯನ್ನು ತೋರಿದ್ದಾರೆ. ಇದು ಬೇರೆಲ್ಲೂ ಅಲ್ಲ ಕಡಬ ತಾಲೂಕಿನ ಬಳ್ಪ ಗ್ರಾಮದ ಬೋಗಾಯನಕೆರೆ ಅಡ್ಡಬೈಲು ರಸ್ತೆ ಅವ್ಯವಸ್ಥೆ..!. ಇದು ಆದರ್ಶ ಗ್ರಾಮವೆಂದು ಘೋಷಣೆಯಾದ ರಸ್ತೆ ಮಾತ್ರವಲ್ಲ ರಾಜ್ಯದಲ್ಲೇ ನಂ.1. ಆದರ್ಶ ಗ್ರಾಮವೆಂದೂ ಹೇಳಲಾಗಿತ್ತು. ಇದೀಗ ಗ್ರಾಮೀಣ ಭಾಗದ ಜನರು ಸುಸ್ತಾಗಿದ್ದಾರೆ ದಿನವೂ ಈ ರಸ್ತೆಯಲ್ಲಿ ಸಂಚರಿಸಿ, ರಸ್ತೆ ದುರಸ್ತಿಗೆ ಮನವಿ ಮಾಡಿ ನೊಂದಿದ್ದಾರೆ., ಈಗ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.‌
ದರೆ  ಯೋಜನೆಯ ಉದ್ದೇಶ ಚೆನ್ನಾಗಿದೆ. ಯೋಜನೆ ಹೀಗಿದೆ…
ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ವ್ಯವಸ್ಥಿತ ರಸ್ತೆ. ಇದರಿಂದ ಇಂಧನ ಉಳಿತಾಯ. ದೇಶಕ್ಕೆ ಹಿತ. ವ್ಯವಸ್ಥಿತ ರಸ್ತೆ.. ಗ್ರಾಮೀಣ ಭಾಗದ ಕೃಷಿಕರಿಗೆ ಸ್ವಾವಲಂಬನೆಗೆ ರಹದಾರಿ. ವ್ಯವಸ್ಥಿತ ರಸ್ತೆ ತ್ವರಿತವಾದ ಕೆಲಸ ಕಾರ್ಯಗಳು,…!. ಈ ಸುಂದರವಾದ ಯೋಜನೆಗಳು ಗ್ರಾಮೀಣ ಭಾಗಕ್ಕೆ ತಲುಪಬೇಕು, ಅಷ್ಟೇ ಇಚ್ಚಾಶಕ್ತಿಯೂ ಇದ್ದರೆ…!. ಚುನಾವಣೆಯ ವೇಳೆ ಬರುವ ಆಯಾ ಪಕ್ಷದ ಕಾರ್ಯಕರ್ತರೂ ಇದರ ಎಚ್ಚರವಾಗಬೇಕು, ಗ್ರಾಮೀಣ ಜನರು ಹೇಳಿದ ಕೆಲಸ ಕಾರ್ಯಗಳು ಆಗುವಂತೆ ಒತ್ತಾಯಿಸಬೇಕು. ಚುನಾವಣೆಯ ವೇಳೆ ನಾಳೆಯೇ ರಸ್ತೆ ಎಂಬ ಆಶಾ ಗೋಪುರ ನೀಡಿ ಮರಳುವುದು ನಿಲ್ಲಬೇಕು. ಇಂತಹದ್ದೇ ಸ್ಥಿತಿ ಈಗ ಬಳ್ಪ ಗ್ರಾಮದಲ್ಲಿ  ಕಂಡುಬಂದಿದೆ.
ಆದರ್ಶ ಗ್ರಾಮ ಎಂಬ ಭಾರೀ ಪ್ರಚಾರ ಸೃಷ್ಟಿ ಮಾಡಲಾಯಿತು. ಎಲ್ಲದಕ್ಕೂ ಪುಟಗಟ್ಟಲೆ  ಮಾಹಿತಿ ಬಂದವು. ಜನರಿಗೆ ಆದರ್ಶ ಗ್ರಾಮ ಎಂದರೆ ಮೂಲಭೂತ ವ್ಯವಸ್ಥೆಗಳಾದ ರಸ್ತೆ, ನೀರು, ಸಂಪರ್ಕ ವ್ಯವಸ್ಥೆ ಮಾತ್ರಾ ಕಣ್ಣೆದುರು ಇತ್ತು. ಇದು ತಪ್ಪಲ್ಲ. ಸುಮಾರು ವರ್ಷಗಳಿಂದ ಜನರು ಸಂಕಷ್ಟ ಪಡುತ್ತಿದ್ದರು. ಈಗ ಆದರ್ಶ ಗ್ರಾಮ ಎಂದರೆ ಹಾಗಲ್ಲ ಎಂದರೆ ಜನರಿಗೆ ಅರ್ಥವೂ ಆಗದು.ಇದರ ವಿಷಾದ ಸ್ಥಿತಿಯೇ ರಸ್ತೆಗೆ ಬಾಳೆ ನೆಡುವ ಪರಿಸ್ಥಿತಿ..!
ಬೀದಿಗುಡ್ಡೆ ರಸ್ತೆಯ ದೃಶ್ಯ
ಬಳ್ಪ ಗ್ರಾಮದ ಹಲವು ಗ್ರಾಮೀಣ ರಸ್ತೆಗಳ ಸ್ಥಿತಿ ಇಂದಿಗೂ ಸುಧಾರಣೆ ಕಂಡಿಲ್ಲ. ಆದರ್ಶ ಗ್ರಾಮವೆಂದು  5  ವರ್ಷಗಳ ನಂತರವೂ ರಸ್ತೆಗಳು ಮಾತ್ರಾ ಸುಧಾರಣೆಯಾಗಿಲ್ಲ.
ಬಳ್ಪ  -ಬೀದಿಗುಡ್ಡೆ ರಸ್ತೆ ಹಾಗೂ ಬೋಗಾಯನಕೆರೆ ಬೀದಿಗುಡ್ಡೆ ರಸ್ತೆ ಇಂದಿಗೂ ಸರಿಯಾದ ವ್ಯವಸ್ಥೆ ಕಂಡಿಲ್ಲ. ಈ ರಸ್ತೆ ರಿಂಗ್‌ ರಸ್ತೆಯಾಗಿ ಮಾಡಲಾಗುತ್ತದೆ ಎಂದು  ಹಲವು ಬಾರಿ ಹೇಳಲಾಗಿತ್ತು. ಆದರೆ ಇಂದಿಗೂ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ. ಈ ನಡುವೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಮೂಲಕ ರಸ್ತೆ ಅಭಿವೃದ್ಧಿಯಾಗುತ್ತದೆ ಎಂಬ ಭರವಸೆ ಸಿಕ್ಕಿದೆ. ಅದೂ ಇದುವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ
ಹಾಗೆಂದು ಈ ರಸ್ತೆ ಬಗ್ಗೆ   ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಮಂದಿ ಹೇಳಿದರೂ ಅದಕ್ಕೆ ರಾಜಕೀಯ ಬಣ್ಣ ಕಟ್ಟುವ ಸ್ಥಿತಿ ಇಂದು ಇದೆ, ವಾಸ್ತವದ ಕಡೆಗೆ ನೋಡುವ ಜನರೇ ಕಡಿಮೆಯಾದಂತಿದೆ.
ಈ ಹಿಂದೆ ಇದೇ ಗ್ರಾಮದಲ್ಲಿ ರಸ್ತೆ ಸಮಸ್ಯೆಯಿಂದಾಗಿ  ಇಲ್ಲಿನ ಪಡ್ಕಿಲ್ಲಾಯ  ಎಂಬಲ್ಲಿ ರಸ್ತೆ ಸರಿ ಇಲ್ಲದ ಕಾರಣದಿಂದ 1 ಕಿಲೋ ಮೀಟರ್ ದೂರ ರೋಗಿಯನ್ನು ಚಯರ್ ನಲ್ಲಿ ಕರೆದುಕೊಂಡು ಹೋಗಿರುವ ಘಟನ   ಬೆಳಕಿಗೆ ಬಂದಿತ್ತು. ಅದಾದ ನಂತರ ಅದೊಂದು ರಾಜಕೀಯ ತಿರುವು ಪಡೆದು ಸ್ಪಷ್ಟನೆ-ಆರೋಪ-ಪ್ರತ್ಯಾರೋಪ ನಡೆದಿತ್ತೇ ವಿನಃ ಕಾರಣ ಹಾಗೂ ಪರಿಹಾರದ ವಿಳಂಬವಾಯಿತು. ಇಂದಿಗೂ ವ್ಯವಸ್ಥಿತವಾದ ಪರಿಹಾರ ಕಾಣಲಿಲ್ಲ. ಡಿಜಿಟಲ್‌ ಇಂಡಿಯಾ ಹೆಸರಿನಲ್ಲಿ ಇಂದಿಗೂ ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ 3ಜಿ ಸೇವೆ ಬಳ್ಪದಲ್ಲಿ ಇಲ್ಲ. ಆದರ್ಶ ಗ್ರಾಮದ ಹೆಸರಿನಲ್ಲಿ ಬೀಡಿಗುಡ್ಡೆಯಲ್ಲಿ  ನಿರ್ಮಾಣವಾದ ಬಿ ಎಸ್ ಎನ್ ಎಲ್ ಟವರ್ ಆಗಾಗ ಕೈಕೊಡುತ್ತದೆ.
ಹಾಗೆಂದು ಆದರ್ಶ ಗ್ರಾಮದ ಹೆಸರಿನಲ್ಲಿ ಕೆಲಸವೇ ನಡೆದಿಲ್ಲ ಎಂದೇನಿಲ್ಲ. ಸುಮಾರು 5 ವರ್ಷಗಳಿಂದ ವಿವಿಧ ಕೆಲಸ ಕಾರ್ಯಗಳು ನಡೆದಿದೆ. ಆದರ್ಶ ಗ್ರಾಮದ ಮೂಲಕ ಬ್ಯಾಂಕ್, ಕೆಲವು ರಸ್ತೆ, ಮೊಬೈಲ್ ಟವರ್, ಬಸ್ಸು ತಂಗುದಾಣ, ಶಾಲೆಗಳಿಗೆ ಕೊಡುಗೆ, ಹೊಗೆಮುಕ್ತ ಗ್ರಾಮ , ಸ್ವಾವಲಂಬನೆ…  ಹೀಗೇ ಹಲವು ಕಾರ್ಯಗಳು ಗಮನಸೆಳೆದವು.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |
November 23, 2024
5:59 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror