ಬಳ್ಪದಲ್ಲಿರುವ ಇತಿಹಾಸ ಪ್ರಸಿದ್ಧ ಬೋಗಾಯನಕೆರೆ ಅಭಿವೃದ್ಧಿಯಾಗುತ್ತಿದೆ. ಕೆರೆಯಲ್ಲಿರುವ ಹೂಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದೆ. ಶನಿವಾರ ಸಂಜೆ ನಿಲ್ಲಿಸಿದ್ದ ಹಿಟಾಚಿ ಪಲ್ಟಿಯಾಗಿದೆ. ಟಿಪ್ಪರ್ ಆಪರೇಟರ್ ಕೆಲಸ ನಿಲ್ಲಿಸಿ ತೆರಳಿದ ವೇಳೆ ಮಣ್ಣು ಕುಸಿತವಾಗಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೋಗಾಯನಕೆರೆ ಅಭಿವೃದ್ಧಿಗೆ ಮುನ್ನ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಹೂಳು ತೆಗೆಯಲು ಕೆರೆಯ ಮಧ್ಯೆ ಮಣ್ಣು ಹಾಕಿ ಟಿಪ್ಪರ್ ಹಾಗೂ ಹಿಟಾಚಿ ಹೋಗುವಂತೆ ದಾರಿ ಮಾಡಲಾಗಿತ್ತು. ಶನಿವಾರವೂ ಈ ದಂಡೆಯ ಮೇಲೆ ತೆರಳಿದ ಹಿಟಾಚಿ ಕೆಲಸ ಮಾಡುತ್ತಿತ್ತು. ಸಂಜೆ ವೇಳೆ ಕೆಲಸ ನಿಲ್ಲಿಸಿದ ವೇಳೆ ಪಲ್ಟಿಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇಲ್ಲಿ ಕಾಮಗಾರಿ ಆರಂಭ ಮಾಡಿದ ನಂತರ ಎರಡನೇ ಬಾರಿ ಹಿಟಾಚಿ ಪಲ್ಟಿಯಾಗುತ್ತಿದೆ. ಹೂಳು ತುಂಬಿದ್ದ ಕೆರೆಯಲ್ಲಿ ಲಾರಿ ಓಡಾಟ, ಟಿಪ್ಪರ್ ಓಡಾಟ ಸವಾಲಿನ ಕೆಲಸವಾಗಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…