ಇತಿಹಾಸ ಪ್ರಸಿದ್ಧ ಬಳ್ಪ ತ್ರಿಶೂಲಿನೀ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ | ಡಿ.30 ಬ್ರಹ್ಮರಥೋತ್ಸವ |

December 28, 2021
2:34 PM

ಇತಿಹಾಸ ಪ್ರಸಿದ್ಧ , ಶಿಲಾಮಯ ದೇಗುಲ  ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವ ಆರಂಭವಾಗಿದ್ದು ಡಿ.30 ರಂದು ಬ್ರಹ್ಮರಥೋತ್ಸವ ಹಾಗೂ ಡಿ.31  ರಂದು ದರ್ಶನ ಬಲಿ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀವತ್ಸ ಎಂ ವಿ ಹಾಗೂ ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಅರ್ಗುಡಿ ಸದಾನಂದ ರೈ ತಿಳಿಸಿದ್ದಾರೆ.

Advertisement
Advertisement
Advertisement
Advertisement

ಸಂಪೂರ್ಣ ಶಿಲಾಮಯವಾದ, ದಕ್ಷಿಣ ಭಾರತದ ಅಪರೂಪದ ಶಿಲಾಮಯ ದೇಗುಲ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವಗಳು ಆರಂಭಗೊಂಡಿದೆ. ಡಿ.27 ರಿಂದ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಉತ್ಸವಾದಿಗಳು ನಡೆದು ಡಿ. 28 ರಿಂದ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉತ್ಸವಗಳು ಆರಂಭಗೊಳ್ಳುತ್ತಿದೆ.

Advertisement

ಡಿ.28 ರಂದು ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ಧಿ ಇತ್ಯಾದಿ ವೈದಿಕ ಕಾರ್ಯಗಳು ನಡೆದು ಡಿ.29 ರಂದು ಗಣಪತಿ ಹವನ, ನವಗ್ರಹ ಹವನ ಸಹಿತ ವೈದಿಕ ಕಾರ್ಯಕ್ರಮಗಳ ಬಳಿಕ ಡಿ.30 ರಂದು ಮಧ್ಯಾಹ್ನ ದೇವರು ರಥಾರೂಢರಾಗಿ ರಾತ್ರಿ 9.30 ಕ್ಕೆ ಬ್ರಹ್ಮರಥೋತ್ಸವ ಹಾಗೂ ಬಳ್ಪ ಬೆಡಿ, ಉತ್ಸವ ಬಲಿ, ಓಡುಬಲಿ ನಡೆಯಲಿದೆ. ಡಿ.31 ರಂದು ದರ್ಶನ ಬಲಿ ನಡೆದು ಸಂಜೆ ಅವಭ್ರತೋತ್ಸವ ನಡೆಯಲಿದೆ.

Advertisement

ಡಿ.30  ರಂದು ಸಂಜೆ 6 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನಾರ್ಚನೆ ನಡೆಯಲಿದೆ. ಸಿದ್ಧಿವಿನಾಯಕ ಸ್ಫೋಟ್ಸ್‌ ಕ್ಲಬ್‌ ಸಂಯೋಜಿಸುವ ಈ ಕಾರ್ಯಕ್ರಮದಲ್ಲಿ ಗಾನಸಾರಥಿ ಖ್ಯಾತಿ ಬನ್ಸಾಲೆ ರಾಘವೇಂದ್ರ ಆಚಾರ್ಯ, ಸ್ವರವಾರಿಧಿ ಖ್ಯಾತಿಯ ಕಾವ್ಯಶ್ರೀ ಅಜೇರು, ಯುವಭಾಗವತ ಪ್ರಶಾಂತ್‌ ರೈ ಪುತ್ತೂರು ಭಾಗವಹಿಸುವರು. 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror