ಭಾರತೀಯ ಕಿಸಾನ್ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಮಾ.26 ರಂದು ಅರ್ಥಿಕ ಬೆಳೆಯಾಗಿ ಬಿದಿರು ಬೆಳೆಸುವ(Bamboo cultivation) ಕುರಿತು ವಿಚಾರ ವಿನಿಮಯ ಸಭೆಯನ್ನು ಕರೆಯಲಾಗಿದೆ. ಪುತ್ತೂರಿನ ಪಂಚವಟಿಯಲ್ಲಿ ಈ ಸಭೆ ನಡೆಯಲಿದೆ.
ಸಭೆಯಲ್ಲಿ ಬಿದಿರು ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ, ಪುನತಿ ಶ್ರೀಧರ್,ಐ.ಎಫ್.ಎಸ್,(ನಿವೃತ್ತ ), ಡಾ.ಕೆ.ಎನ್.ಮೂರ್ತಿ, ಐ.ಎಫ್.ಎಸ್.(ನಿವೃತ್ತ) , ಸುಂದರ ನಾಯಕ್,( ಮಾಜಿ ಅಧ್ಯಕ್ಷರು) ಭಾಗವಹಿಸುವರು.
ಸಭೆಯಲ್ಲಿ ಆರ್ಥಿಕವಾಗಿ ಬಿದಿರು ಬೆಳೆಸುವ ರೈತರಿಗೆ ಕನಿಷ್ಠ ದರದಲ್ಲಿ ಬಿದಿರು ಗಿಡಗಳ ಲಭ್ಯತೆ, ಬಿದಿರು ಬೆಳೆಸಿರುವ ರೈತರೀಗೆ ಹಂತ ಹಂತವಾಗಿ ಹಣಕಾಸು ಸಹಾಯ ಧನವನ್ನು ಒದಗಿಸುವ ಯೋಜನೆ , ಬಿದಿರು ಗಿಡಗಳ ನರ್ಸರಿ, ಮೌಲ್ಯ ವರ್ಧನೆ, ಕೌಶಲ್ಯ ಅಭಿವೃದ್ಧಿ ಮತ್ತು ಮಾರುಕಟ್ಟೆ ಕುರಿತು ಅಗತ್ಯ ಇರುವ ಪ್ರೊತ್ಸಾಹ, ಪರಿಸರದಲ್ಲಿ ಮಳೆ ನೀರು ಸಂಗ್ರಹ, ವಾತಾವರಣದಲ್ಲಿ ಶುದ್ಧವಾದ ಗಾಳಿ ಮತ್ತು ಮಣ್ಣಿನ ಸವಕಳಿ ತಡೆಯುವ ಬಗ್ಗೆ ಚರ್ಚೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಾಟ್ಸಪ್ ಸಂಖ್ಯೆ: 9731855028 ಎಂ.ಜಿ.ಸತ್ಯನಾರಾಯಣ ಸುಳ್ಯ ಮತ್ತು 9591148552 – ಮೂಲಚಂದ್ರರವರು ಪುತ್ತೂರು. ಭಾರತೀಯ ಕೀಸಾನ್ ಸಂಘ.
ರಾಜ್ಯದಲ್ಲಿ ಈಗಿನಂತೆ ಎಪ್ರಿಲ್ 7 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದು, ಎಪ್ರಿಲ್ 9…
ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…
ಮ್ಯಾನ್ಮಾರ್ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…
ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…
ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…
ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್ಗೆ…