ಬಿದಿರಿನ ಬಟ್ಟೆ ಕಾಪಾಡುತ್ತೆ ನಿಮ್ಮ ಆರೋಗ್ಯ | ಬೇಸಿಗೆಯಲ್ಲಿ ಕೂಲ್ ಕೂಲ್, ಚಳಿಗೆ ಬಿಸಿ ಬಿಸಿ |

February 15, 2023
2:14 PM

ಇದು ಮಾಮೂಲು ಯುಗ ಅಲ್ಲ. ಇತ್ತೀಚೆಗೆ ಜನ ಹಣಕ್ಕಿಂತ ಹೆಚ್ಚಾಗಿ ಆರೋಗ್ಯಕ್ಕೆ ಜಾಸ್ತಿ ಮನ್ನಣೆ ಕೊಡ್ತಾರೆ. ಅದರಲ್ಲೂ ಯುವಕರು ಎಷ್ಟೇ ಫ್ಯಾಷನ್‌ಗೆ ಒಗ್ಗಿಕೊಂಡರು ಸಿಕ್ಕಿದನ್ನೆಲ್ಲಾ ಚೂಸ್ ಮಾಡಲ್ಲ. ಅದರಲ್ಲೂ ಬಟ್ಟೆಗಳ ಗುಣಮಟ್ಟ, ವಿನ್ಯಾಸ, ಆಯ್ಕೆ ಮತ್ತು ಅದರ ವಿವಿಧತೆಗಳು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೃಷ್ಟಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ವಸ್ತ್ರಗಳಿಗೆ ಹೆಚ್ಚು ಆದ್ಯತೆ ನೀಡಲಾಗ್ತಿದೆ. ಎಲ್ರೂ ಆರೋಗ್ಯಕ್ಕೆ ಹೆಚ್ಚು ಅನುಕೂಲಕರವಾಗಿರೋ ಬಟ್ಟೆಗಳನ್ನೇ ಧರಿಸಲು ಇಚ್ಚಿಸ್ತಾರೆ. ಇಷ್ಟು ದಿನ ಹತ್ತಿ ಬಟ್ಟೆ ಮೊದಲ ಸ್ಥಾನದಲ್ಲಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೆಣಬು, ಬಾಳೆ ಗಿಡದ ನಾರು ಹಾಗೆ ಹೊಸದಾಗಿ ಬಿದಿರಿನ ಬಟ್ಟೆಗಳು ಟ್ರೆಂಡ್ನಲ್ಲಿವೆ.

Advertisement

ಬಿದಿರಿನಿಂದ ತಯಾರಿಸಿದ ಬಟ್ಟೆಗಳು ಇತ್ತೀಚೆಗೆ ಬಹಳ ಇಷ್ಟವಾಗ್ತಿದೆ.  ವೈಜ್ಞಾನಿಕವಾಗಿ ಬಿದಿರಿನ ಬಟ್ಟೆಗಳು ಕಾಟನ್‌ ಬಟ್ಟೆಗಿಂತ ಅಪ್ಪಟ ಪರಿಸರ ಸ್ನೇಹಿ.  ಹತ್ತಿ ಬಟ್ಟೆಗಳನ್ನು ತಯಾರಿಸಲು ಸಾಕಷ್ಟು ನೀರು, ರಾಸಾಯನಿಕಗಳನ್ನು ಬಳಸಲಾಗುತ್ತೆ. ಆದರೆ ಬಿದಿರಿನ ಬಟ್ಟೆ ತಯಾರಿಕೆಗೆ ಅಷ್ಟು ಪ್ರಮಾಣದ ನೀರು ರಾಸಾಯನಿಕ ಅಗತ್ಯವಿಲ್ಲ. ಬಿದಿರಿನ ಬಟ್ಟೆ ಅಪ್ಪಟ ಪರಿಸರ ಪ್ರೇಮಿಯಾಗಿದೆ. ಇದು ನೀರಿನ ಕೊರತೆ, ಅರಣ್ಯ ನಾಶ, ಮಣ್ಣಿನ ಸವಕಳಿ, ಹಸಿರುಮನೆ ಪರಿಣಾಮಗಳಂಥ ಭೌಗೋಳಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತೆ.ಈ ಪರಿಸರ ಸ್ನೇಹಿ ಬಿದಿರಿನ ಬಟ್ಟೆಗಳನ್ನು ಧರಿಸಿದ್ರೆ ಏನೆಲ್ಲಾ ಪ್ರಯೋಜನ ಇದೆ ಅನ್ನೋದನ್ನ ನೋಡೋಣ

1. ಸಕತ್ತು ಮೃದು ಈ ಬಟ್ಟೆ : ಬಿದಿರಿನ ಬಟ್ಟೆಗಳು ಈಗ ಜವಳಿ ಉದ್ಯಮ ಕ್ಷೇತ್ರಕ್ಕೆ ಒಂದು ವರವಾಗಿದೆ. ಕಾರಣ ಇದು ಪರಿಸರ ಸ್ನೇಹಿ. ಇದರಿಂದ ಸುಲಭವಾಗಿ ಬಟ್ಟೆಯನ್ನು ತಯಾರಿಸಬಹುದು. ಬಿದಿರಿನ ನಯವಾದ ಮೇಲ್ಮೈ ಹಾಗೂ ವೃತ್ತಾಕಾರವು ಬಟ್ಟೆಗೆ ತುಂಬಾ ಮೃದುತ್ವವನ್ನು ನೀಡುತ್ತೆ. ಹಾಗಾಗಿ ಇದನ್ನು ಧರಿಸಲು ಸಾಕತ್ತು  ಇಷ್ಟವಾಗುತ್ತೆ. ಈ ಬಟ್ಟೆಯಲ್ಲಿ ತ್ವಚೆಗೆ ಹಾನಿಯಾಗುವಂಥ ಒರಟುತನ ಇರೋದಿಲ್ಲ. ಬದಲಾಗಿ ತ್ವಚೆಯ ಮೃದುತ್ವವನ್ನು ಕಾಪಾಡುತ್ತೆ. ಅದರಲ್ಲೂ ನವಜಾತ ಶಿಶುಗಳಿಗೆ, ಮಕ್ಕಳಿಗೆ, ವೃದ್ಧರಿಗೆ ಇದು ಹೇಳಿ ಮಾಡಿಸಿದ ಬಟ್ಟೆ.

2. ಸೂರ್ಯನ ಯುವಿ ಕಿರಣಗಳಿಂದ ನೀಡುತ್ತೆ ರಕ್ಷಣೆ :ಬಿದಿರಿನ ಬಟ್ಟೆ ಧರಿಸೋದ್ರಿಂದ ಅತ್ಯುತ್ತಮ ಪ್ರಯೋಜನ ಅಂದ್ರೆ, ಇದು ತ್ವಚೆಯನ್ನು ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸುತ್ತೆ. ಸುಡು ಬಿಸಿಲಿನ ಕಾಲದಲ್ಲಿ ಬಿದಿರಿನ ಬಟ್ಟೆ, ಸೂರ್ಯನ ಕಿರಣಗಳಿಂದ ರಕ್ಷಣೆ ಜತೆಗೆ, ತ್ವಚೆಗೂ ಮೃದುತ್ವ ನೀಡುತ್ತೆ.

3. ಇಸ್ತ್ರಿ ಬೇಡ್ವೇ ಬೇಡ : ಬಿದಿರಿನ ಬಟ್ಟೆಗಳಿಗೆ ಐರನ್‌ ಮಾಡುವ ಕಿರಿ ಕಿರಿ ಇಲ್ಲ. ಎಲ್ಲರಿಗೂ ನೋ ಟೈಮ್ ಇವಾಗ. ಇನ್ನು ಬೆಳಿಗ್ಗೆ ಎದ್ದು ಬಟ್ಟೆಗೆ ಇಸ್ತ್ರಿ ಹಾಕೋದಂದ್ರೆ ದೊಡ್ಡ ಕೆಲಸ. ಆದರೆ, ಬಿದಿರಿನ ಬಟ್ಟೆಗಳ ಸ್ವಾಭಾವಿಕ ಗುಣದಂತೆ ಈ ಬಟ್ಟೆಗಳು ಸುಕ್ಕಾಗುವುದಿಲ್ಲ, ಮುದುಡುವುದಿಲ್ಲ. ನೀವು ಎಷ್ಟೇ ಒಗೆದರೂ ಈ ಬಟ್ಟೆ ಹಾಗೇ ಇರುತ್ತೆ. ಬಿದಿರಿನ ಬಟ್ಟೆ ದೀರ್ಘ ಸಮಯ ಧರಿಸಿದರೂ ನಿಮಗೆ ತಾಜಾ ಅನುಭವ ನೀಡುತ್ತದೆ, ಕಾರಣ ಬಿದಿರಿನಲ್ಲಿರುವ ಅತೀ ಸಣ್ಣ ರಂಧ್ರಗಳು.  ನಿಮ್ಮ ಚರ್ಮಕ್ಕೆ ಹೊರಗಿನ ಗಾಳಿ ಸೋಕುವಂತೆ ಮಾಡುತ್ತೆ. ಅಲ್ಲದೆ ಬಟ್ಟೆಯೂ ತಾಜಾವಾಗಿಯೇ ಇರುತ್ತೆ.

4. ಈ ಬಟ್ಟೆಯಲ್ಲಿ ಬೆವರಲ್ಲ: ಈ ಬೇಸಿಗೆಯಲ್ಲಿ ನಿಂತರು ಕುಂತರೂ ಬೆವರೋದು ಸಾಮಾನ್ಯ. ಇದರಿಂದ ದೇಹವೆಲ್ಲಾ  ದುರ್ಗಂದ ಬೀರುತ್ತೆ.  ಆದರೆ, ಇದಕ್ಕೆ ಪರಿಹಾರ ನಿಮ್ಮ ಪರಿಮಳಯುಕ್ತ ಸುಗಂಧ ದ್ರವ್ಯಗಳಲ್ಲ. ಬದಲಾಗಿ ಬಿದಿರಿನ ಬಟ್ಟೆ. ನಿಮ್ಮ ದೇಹದ ಬೆವರನ್ನು ಹೀರುವ ಬಿದಿರಿನ ಬಟ್ಟೆ ನಿಮ್ಮನ್ನು ಸದಾ ಫ್ರೆಶ್‌ ಆಗಿ ಇಡುತ್ತೆ. ಈ ಬಟ್ಟೆಗಳು ನೀರಿನಂಶವನ್ನು ಸೆಳೆಯುವ ಗುಣವನ್ನು ಹೊಂದಿದೆ.

5. ಅಲರ್ಜಿ ಹತ್ತಿರ ಸುಳಿಯಲ್ಲ : ಕೆಲವರಿಗೆ ಕೆಲವು ಬಟ್ಟೆಗಳು ಆಗೋದಿಲ್ಲ. ಅವುಗಳನ್ನು ಧರಿಸೋದ್ರಿಂದ ಅಲರ್ಜಿ, ತುರಿಕೆ, ಜಾಸ್ತಿ ಬೆವರೋದು ಆಗುತ್ತೆ. ಇಂಥ ಸೂಕ್ಷ್ಮ ಚರ್ಮ ಉಳ್ಳವರು ಒಮ್ಮೆ ಬಿದಿರಿನ ಬಟ್ಟೆ ಧರಿಸಿ ನೋಡಿ. ಇದು ನಿಮ್ಮ ಚರ್ಮಕ್ಕೆ ಯಾವುದೇ ಹಾನಿ ಆಗೋದನ್ನು ತಡೆಯುತ್ತೆ.

6. ನಿಮ್ಮನ್ನು ಬೆಚ್ಚಗಿಡುತ್ತೆ ಈ ಬಟ್ಟೆ : ಬಿದಿರಿನ ಬಟ್ಟೆಯ ಶಾಖವನ್ನು ಉತ್ಪತ್ತಿ ಮಾಡುತ್ತೆ.  ಬೇಸಿಗೆ ಕಾಲದಲ್ಲಿ ಬೆವರನ್ನು ಹೀರಿ ನಿಮಗೆ ತಾಜಾ ಅನುಭವ ನೀಡಿದ್ರೆ, ಚಳಿಗಾಲದಲ್ಲಿ ಚಳಿಯಿಂದ ನಿಮ್ಮ ರಕ್ಷಿಸಿ, ನಿಮ್ಮ ದೇಹವನ್ನು ಬೆಚ್ಚಗಿಡುತ್ತೆ. ಪರಿಸರದ ರಕ್ಷಣೆಗೆ, ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸೋದಕ್ಕಾಗಿ ಬಿದಿರಿನ ಬಟ್ಟೆಗಳನ್ನು ಬಳಸೋದು ಉತ್ತಮ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ
ಜಾನುವಾರುಗಳಿಗೆ ವಿಮಾ ಸೌಲಭ್ಯ ಯೋಜನೆ
April 9, 2025
7:36 AM
by: ದ ರೂರಲ್ ಮಿರರ್.ಕಾಂ
ಪುತ್ತೂರು ಜಾತ್ರೆ | ಮುಳಿಯ ಜ್ಯುವೆಲ್ಲರ್ಸ್ ಕ್ಯಾಲೆಂಡರ್‌ನಲ್ಲಿ ಶ್ರೀ ಮಹಾಲಿಂಗೇಶ್ವರ ಪೇಟೆ ಸವಾರಿ ಮಾರ್ಗ!
April 9, 2025
7:30 AM
by: The Rural Mirror ಸುದ್ದಿಜಾಲ
ಚತುಗ್ರಹಿ ರಾಜಯೋಗ | ಚತುಗ್ರಹಿ ರಾಜಯೋಗದ ವೈಶಿಷ್ಟ್ಯಗಳು |
April 9, 2025
7:21 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group