ದೇಶದ ಅಡಿಕೆಯನ್ನು ಜಾಗತಿಕ ಮನ್ನಣೆ ಪಡೆದ Food and Drug Administration (FDA) ಸಂಸ್ಥೆಯು ಹಾನಿಕಾರಕ ಪಟ್ಟಿಯಲ್ಲಿ ಸೇರಿಸಿದ್ದಲ್ಲದೆ USA ಅಡಿಕೆ ಹಾಳೆಯ ಸಹಿತ ಸಂಬಂಧಿತ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ. ಇದು ಹಂತ ಹಂತವಾಗಿ ಅಡಿಕೆಯನ್ನು ನಿರ್ಬಂಧಿತ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸುವ ಮುಂದಿನ ಹಂತದ ಬೆಳವಣಿಗೆಯಂತೆ ಕಾಣುತ್ತದೆ. ಈಗಾಗಲೇ ಅಡಿಕೆ ನಿಷೇಧದ ಬಗ್ಗೆ WHO ಬೇರೆ ಬೇರೆ ರಾಜ್ಯಗಳ ಅಭಿಪ್ರಾಯವನ್ನು ಕೇಳಿದ್ದನ್ನು ನಾವು ಗಮನಿಸಬಹುದು.…..ಮುಂದೆ ಓದಿ….
ಅಡಿಕೆಯ ಬಹುಪಯೋಗಿ ಅನುಕೂಲತೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸರಿಯಾದ ಕ್ಲಿನಿಕಲ್ ಟ್ರಯಲ್ ನಡೆಯದೆ ಇದ್ದುದರ ಪರಿಣಾಮವನ್ನು ನಾವು ಈಗ ಕಾಣುತ್ತಿದ್ದೇವೆ. ಕೇವಲ ನಮ್ಮ ಊರುಗಳಲ್ಲಿ ನಡೆದ ಕಮ್ಮಟಗಳಾಗಲಿ ,ಇಲ್ಲಿಯ ಆವಿಷ್ಕಾರಗಳಾಗಲಿ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದಾಗ ಮಾತ್ರ ಅದು ಮೌಲ್ಯವನ್ನು ಪಡೆಯುತ್ತದೆ ಮತ್ತು ಗುರುತಿಸಲ್ಪಡುತ್ತದೆ. ಕೇವಲ ಪುರಾತನ ಆಯುರ್ವೇದ ಗ್ರಂಥಗಳಲ್ಲಿವೆ ಎಂಬುದು ಮಾನ್ಯತೆಯನ್ನು ಪಡೆಯುವುದಿಲ್ಲ ಅದು ಸರಿಯಾದ ರೀತಿಯಲ್ಲಿ ಪರೀಕ್ಷೆಗೊಳಪ್ಪಟ್ಟು ನಿರೂಪಿಸಲ್ಪಡಬೇಕು. ಆದರೆ ನಾವು ಹೇಳಿಕೆಗಳಿಗೆ , ಮಾಧ್ಯಮ ಪ್ರಚಾರಗಳಿಗೆ, ವದಂತಿಗಳಿಗೆ, ನಮ್ಮೂರ ಜಗಲಿಯ ಚರ್ಚೆಗಳಿಗೆ ಸಾಕ್ಷಿಗಳಾಗಿ ಈಗ ನಿಷೇಧದ ಅಪಾಯದ ಅಂಚಿನಲ್ಲಿ ಬಂದು ನಿಂತಿದ್ದೇವೆ.
ಈ ಸಂದರ್ಭದಲ್ಲಿ ಅಡಿಕೆ ಹಾಳೆ ತಟ್ಟೆಗಳ ರಫ್ತಿನಿಂದಾಗಿ ಭಾರತದ ಮಾರುಕಟ್ಟೆ ಮೇಲೆ ಅತಿ ಹೆಚ್ಚಿನ ಪರಿಣಾಮ ಆಗದೆ ಇದ್ದರೂ ಕೆಲವೊಂದು ಮಾರುಕಟ್ಟೆ ಅಪಾಯವನ್ನು ಅಲ್ಲಗಳೆಯುವಂತಿಲ್ಲ.ಈ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.
ಅಡಿಕೆ ಹಾಳೆ ಉತ್ಪನ್ನಗಳ ದೇಶೀಯ ಮಾರುಕಟ್ಟೆಯ ಅಂದಾಜು ಮೌಲ್ಯವು ₹800 ಕೋಟಿ ಯಿಂದ ₹1,000 ಕೋಟಿ ನಡುವೆ ಇರಬಹುದು. ಅಡಿಕೆ ಹಾಳೆಯಿಂದ ತಯಾರಿಸಲಾದ ಡಿನ್ನರ್‌ವೇರ್‌ಗಳಿಗೆ (ತಟ್ಟೆ, ಬಟ್ಟಲು, ಕಪ್, ಚಮಚ, ಬಾಕ್ಸ್) ಭಾರತದ ಈ ಮಾರುಕಟ್ಟೆ ಪ್ರಾಥಮಿಕವಾಗಿ ಪರಿಸರ ಸ್ನೇಹಿ, ಬಯೋ ಡೀಗ್ರೇಡಬಲ್ ಮತ್ತು ಕಂಪೋಸ್ಟಬಲ್ ಪರ್ಯಾಯಗಳ Growing consumer interestಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದೆ.
ಅಡಿಕೆ ಹಾಳೆಯ ಪ್ರಮುಖ ಬಳಕೆದಾರರು: ಮದುವೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು, ಎಕೋ-ರೆಸ್ಟೋರೆಂಟ್‌ಗಳು, ಕೆಫೆಗಳು , ಆಹಾರ ಸರಬರಾಜು ಕೇಂದ್ರಗಳು (catering units), ಇ-ಕಾಮರ್ಸ್ ಗ್ರಾಹಕರು(Amazon, Flipkart, BigBasket), ಆಯುಷ್, ಯೋಗ ಮತ್ತು ಜೈನ ಆಹಾರ ಕೇಂದ್ರಗಳು.
ಭಾರತೀಯ ಮಾರುಕಟ್ಟೆಯ ಮೇಲೆ FDA ನಿಷೇಧದ ಪರಿಣಾಮಗಳು :
ನಕಾರಾತ್ಮಕ ಪರಿಣಾಮಗಳು: ಗ್ರಾಹಕರು ಮತ್ತು ವ್ಯಾಪಾರಿಗಳು ಅಡಿಕೆ ಉತ್ಪನ್ನಗಳ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು “ಅಮೆರಿಕದಲ್ಲಿ ನಿಷೇಧ ಇದ್ರೆ ನಾವು ಏಕೆ ಉಪಯೋಗಿಸಬೇಕು?” ಎಂಬ ಭಾವನೆ ಹೆಚ್ಚಬಹುದು, ಇ-ಕಾಮರ್ಸ್ ವೇದಿಕೆಗಳು (ಅಮೆಝಾನ್, ಫ್ಲಿಪ್‌ಕಾರ್ಟ್) ಈ ಉತ್ಪನ್ನಗಳ ಮೇಲೆ ತಾತ್ಕಾಲಿಕ ನಿಯಂತ್ರಣ ಹೇರಬಹುದು, ರಫ್ತಿಗೆ ನಂಬಿಕೊಂಡಿದ್ದ ಘಟಕಗಳು ಈಗ ದೇಶೀಯ ಮಾರಾಟದ ಮೇಲೆ ಅವಲಂಬಿಸಬೇಕಾಗುತ್ತದೆ. ಇದರಿಂದ ದರ ಕುಸಿತ ಸಂಭವಿಸಬಹುದು,
ಸಕಾರಾತ್ಮಕ ಪರಿಣಾಮಗಳು : ಬಾಂಬೂ, ಶುಗರ್‌ಕೇನ್ ಬ್ಯಾಗಾಸ್, ಜೋಳದ ಢಿಪ್ಪಿ, ಇತ್ಯಾದಿ ಮೂಲಗಳ ಡಿನ್ನರ್‌ವೇರ್‌ಗಳಿಗೆ ಬೇಡಿಕೆ ಹೆಚ್ಚಾಗಬಹುದು, ಸ್ಥಳೀಯ ಸರ್ಕಾರಗಳು BIS/FSSAI ಮೂಲಕ ಗುಣಮಟ್ಟದ ಪ್ರಮಾಣೀಕರಣಗಳನ್ನು ಕಡ್ಡಾಯಗೊಳಿಸಬಹುದು, ಅಡಿಕೆ ಹಾಳೆ ಉತ್ಪನ್ನ ತಯಾರಕರು ಈಗ ಹೆಚ್ಚಿನ ಶುದ್ಧೀಕರಣ, ಟೋಕ್ಸಿನ್ ಟೆಸ್ಟಿಂಗ್ Lab Certification ಗಳು ಮಾಡಿಸಿ ಮುಕ್ತ ಮಾರುಕಟ್ಟೆಗೆ ತಯಾರಾಗಬೇಕು.
ಉದ್ಯಮದ ಮುಂದಿನ ಬೆಳವಣಿಗೆ :
ಇಷ್ಟೆಲ್ಲಾ ಇದ್ದರೂ ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಸಂಸ್ಥೆಗಳ ನೆರವಿನೊಂದಿಗೆ ಕ್ಲಿನಿಕಲ್ ಟ್ರಯಲ್ ಮಾಡುವುದರ ಮೂಲಕ ಕ್ಯಾನ್ಸರ್ ಕಾರಕ ಎಂಬ ಅಂಶವನ್ನು ಅಲ್ಲಗಳೆಯಲಾಗದಿದ್ದರೂ ಬಹುಪಯೋಗಿ ಪ್ರಯೋಜನಗಳನ್ನು ಸ್ಥಾಪಿಸಿ ಮನವರಿಕೆ ಮಾಡುವುದರ ಮೂಲಕ ಅಡಿಕೆಯ ಮಾನವನ್ನು ಉಳಿಸಿಕೊಳ್ಳಬಹುದು.
ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಈ ಬಾರಿ…
ಶಾಲೆಯ ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ ವಿದ್ಯಾರ್ಥಿ – ಪೋಷಕ – ಶಿಕ್ಷಕ …
ಬಡವರಿಗೆ, ಹಳ್ಳಿಗರಿಗೆ, ದಲಿತರಿಗೆ, ನಿರಕ್ಷಕ ಕುಕ್ಷಿಗಳಿಗೆ, ನಿರುದ್ಯೋಗಿಗಳಿಗೆ ಸಮಾನತೆಯೆಂಬುದು ಮತದಾನದ ಸಂದರ್ಭದಲ್ಲಿ ಮಾತ್ರವೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳಲ್ಲಿ ಸಂಪರ್ಕಿಸಿ 9535156490
ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು…