ತಂಬಾಕು(Tabaco) ಮತ್ತು ನಿಕೋಟಿನ್(Nicotine) ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು(selling) ರಾಜ್ಯದಾದ್ಯಂತ ಒಂದು ವರ್ಷದ ಅವಧಿಗೆ ನಿಷೇಧಿಸಿ(Ban) ತೆಲಂಗಾಣ ಸರ್ಕಾರ(Telangana Govt) ಆದೇಶ(Order) ಹೊರಡಿಸಿದೆ.
ಆಹಾರ ಸುರಕ್ಷತಾ ಆಯುಕ್ತರು ಮೇ 24 ರಂದು ಸಾರ್ವಜನಿಕ ಆರೋಗ್ಯದ ಕಾಳಜಿಯನ್ನು ಉಲ್ಲೇಖಿಸಿ ಆದೇಶ ಹೊರಡಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ನಿಷೇಧ ಮತ್ತು ಮಾರಾಟದ ನಿರ್ಬಂಧ) ನಿಯಮಾವಳಿ 2011ರ ನಿಯಮಾವಳಿ 2.3.4ರ ಜೊತೆಗೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಸೆಕ್ಷನ್ 30ರ ಉಪ-ವಿಭಾಗ (2) ರ ಷರತ್ತು (ಎ) ಅಡಿಯಲ್ಲಿ ನಿಷೇಧವನ್ನು ಜಾರಿಗೊಳಿಸಲಾಗಿದೆ. ಈ ಆದೇಶವು ಹೈದರಾಬಾದ್ ನಗರದ ಮಾರುಕಟ್ಟೆಗಳಲ್ಲಿ ಭಾನುವಾರ (ಮೇ 26) ಮಧ್ಯಾಹ್ನದ ಬಳಿಕ ಪ್ರಭಾವ ಬೀರಿದೆ. ಪಾನ್ ಶಾಪ್ ಮಾಲೀಕರು ಆದೇಶ ಪಾಲನೆಗೆ ಒಪ್ಪಿದ್ದಾರೆ. ಆದರೆ, ಈ ವಲಯದ ಎಲ್ಲರು ಸಹಕಾರ ನೀಡಿಲ್ಲ ಎಂದು “ದಿ ಹಿಂದೂ” ವರದಿ ಮಾಡಿದೆ.
“ತೆಲಂಗಾಣದಲ್ಲಿ ಸುಮಾರು 1.5 ಲಕ್ಷ ಪಾನ್ ಶಾಪ್‌ಗಳಿವೆ. ನಾವು ಗುಟ್ಕಾ ನಿಷೇಧವನ್ನು ಬೆಂಬಲಿಸುತ್ತೇವೆ ಮತ್ತು ಅನೇಕ ಅಂಗಡಿಗಳು ಈಗಾಗಲೇ ಅದರ ಮಾರಾಟವನ್ನು ನಿಲ್ಲಿಸಿವೆ. ಆದರೆ, ಲಕ್ಷಾಂತರ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಗುಟ್ಕಾ ಮಾರಾಟ ಅವಲಂಬಿಸಿರುವುದರಿಂದ ಜಗಿಯುವ ತಂಬಾಕು ಮತ್ತು ಜರ್ದಾಕ್ಕೆ ನಿಷೇಧದಿಂದ ವಿನಾಯಿತಿ ನೀಡುವಂತೆ ನಾವು ಅಧಿಕಾರಿಗಳನ್ನು ವಿನಂತಿಸುತ್ತೇವೆ” ಎಂದು ತೆಲಂಗಾಣ ಪಾನ್ ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಮೊಹಮ್ಮದ್ ಸಲಾವುದ್ದೀನ್ ದಖ್ನಿ ಹೇಳಿದ್ದಾರೆ ಎಂದು “ದಿ ಹಿಂದೂ” ತಿಳಿಸಿದೆ. ನಮ್ಮ ಸಂಘ ಗುಟ್ಕಾ ನಿಷೇಧ ಸಂಬಂಧ ಈ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಮನವಿ ಸಲ್ಲಿಸಿತ್ತು. ರಾಜ್ಯಾದ್ಯಂತ ಅನೇಕ ಪಾನ್ ಶಾಪ್‌ಗಳಲ್ಲಿ ಗುಟ್ಕಾ ಮಾರಾಟ ಮಾಡುವುದಿಲ್ಲ ಎಂಬ ಪೋಸ್ಟರ್‌ಗಳನ್ನು ಸಹ ಪ್ರದರ್ಶಿಸಲಾಗಿದೆ ಎಂದು ಸಲಾವುದ್ದೀನ್ ತಿಳಿಸಿದ್ದಾರೆ ಎಂದು ಹಿಂದೂ ಹೇಳಿದೆ.
ಸರ್ಕಾರದ ಆದೇಶವನ್ನು ನಾವು ಪಾಲಿಸುತ್ತೇವೆ. ಆದರೆ, ನಿಯಮ ಸರಿಯಾದ ರೀತಿಯಲ್ಲಿ ಜಾರಿಯಾಗಬೇಕು. ಇಲ್ಲದಿದ್ದರೆ, ಅಧಿಕಾರಿಗಳು ಜರ್ದಾದಲ್ಲಿ ಸ್ವಲ್ಪ ತಂಬಾಕು ಕಂಡರೆ ಗುಟ್ಕಾ ಮಾರಾಟ ಮಾಡ್ತಿದ್ದಾರೆ ಎಂದು ಅಂಗಡಿ ಮಾಲೀಕರಿಗೆ ತೊಂದರೆ ಕೊಡಬಹುದು ಎಂಬ ಆತಂಕವನ್ನು ಯೂಸುಫ್‌ಗುಡಾದ ವ್ಯಕ್ತಿಯೊಬ್ಬರು ಹೇಳಿದ್ದಾಗಿ ಹಿಂದೂ ವರದಿ ಮಾಡಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಮಾರುವುದನ್ನು ನಿಷೇಧಿಸುವ ಕ್ರಮಗಳನ್ನು ಉಳಿದ ರಾಜ್ಯದ ಸರ್ಕಾರಗಳು ತೆಗೆದುಕೊಂಡರೆ ಮನುಷ್ಯರ ಆರೋಗ್ಯ ಹಾಗೂ ಪರಿಸರ ಹಾನಿ ತಡೆಯಬಹುದು.
ತೆಲಂಗಾಣದಲ್ಲಿ ಗುಟ್ಕಾ ನಿಷೇಧ ಮಾಡುವುದರಿಂದ ಅಡಿಕೆ ಬೆಳೆಗಾರರಿಗೆ ಸದ್ಯ ಯಾವುದೇ ಸಮಸ್ಯೆ ಇಲ್ಲ. ಅಡಿಕೆ ಮಾರುಕಟ್ಟೆ ಮೇಲೆಯೂ ಯಾವುದೇ ಪರಿಣಾಮ ಬೀರದು ಎಂದು ಹೇಳಲಾಗಿದೆ. ಪಾನ್ ಶಾಪ್‌ಗಳ ಮೂಲಕ ಅಡಿಕೆ ಮಾರಾಟ ನಡೆಯುತ್ತದೆ. ತೆಲಂಗಾಣದಲ್ಲಿಯೇ ಸುಮಾರು 1.5 ಪಾನ್ ಶಾಪ್ ಗಳು ಇವೆ. ಹೀಗಾಗಿ ಈ ಶಾಪ್‌ಗಳ ಮೂಲಕ ಅಡಿಕೆ ಮಾರಾಟ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…