ಬಾಳೆದಿಂಡಿನ ರಸ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಬಲ್ಲುದು..!

April 30, 2024
9:03 PM
ಬಾಳೆದಿಂಡು ಉತ್ತಮ ಔಷಧವಾಗಿದೆ. ಬಾಳೆ ರಸದ ವಿವಿಧ ಔಷಧೀಯ ಗುಣಗಳ ಬಗ್ಗೆ ಕುಮಾರ್‌ ಪೆರ್ನಾಜೆ ಬರೆದಿದ್ದಾರೆ.

ಕಲ್ಪವೃಕ್ಷ ಎಂದಾಕ್ಷಣ ತೆಂಗು ಎಂದು ನಮಗೆ ನೆನಪಿಗೆ ಬರುತ್ತದೆ. ಆದರೆ  ಬಾಳೆಯೂ ಕಲ್ಪವೃಕ್ಷವೇ. ಇದರ ಎಲ್ಲಾ ಭಾಗಗಳು ಉಪಯುಕ್ತವೇ ಆಗಿದೆ.

Advertisement
Advertisement
Advertisement

ಬಾಳೆಗೊನೆ ಮೋತೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು ಬಹಳ ಉಪಯುಕ್ತವಾಗಿದೆ. ಇದೀಗ ಒಂದು ಅಡಿ ಉದ್ದದ ದಿಂಡಿಗೂ ಬಹಳ ಡಿಮಾಂಡ್ ಇದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ದಿಂಡಿನ ಪಕೋಡ, ದೋಸೆ, ಇಡ್ಲಿ ಸಲಾಡ್,ಮೊಸರು ಗೊಜ್ಜು.. ಹೀಗೇ ನಾನಾ ವೈವಿಧ್ಯ ತಿನಿಸುಗಳು ಮಾಡಲಾಗುತ್ತದೆ.  ದಿಂಡಿನ ನಾರಿನಿಂದ ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ ಇತ್ಯಾದಿಗಳ ತಯಾರಿಯಾಗುತ್ತದೆ. ಸೀರೆ, ಅಂಗಿ, ಬಟ್ಟೆಗಳು, ಪರಿಸರಸ್ನೇಹಿ ಹರ್ಬಲ್ ಮೆಡಿಸಿನ್  ಮಾಡಲಾಗುತ್ತದೆ.

Advertisement

ಬಾಳೆದಿಂಡಿನ ರಸವು ಮುಖ್ಯವಾಗಿ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಲು ರಾಮಬಾಣವಾಗಿದೆ .ಗ್ಯಾಸ್ಟ್ರಿಕ್ ಸಮಸ್ಯೆಗೆ‌,  ಮೂತ್ರಪಿಂಡದ ಸಮಸ್ಯೆಗೆ ಹಾಗೂ ಎಸಿಡಿಟಿಯನ್ನು ಕಡಿಮೆ ಮಾಡಲು ಈ ರಸ ಉಪಯೋಗವಾಗಿದೆ.  ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ.

Advertisement

ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಗುಳಿಯ ಆಕಾರದಲ್ಲಿ ಸಂಜೆ ಮಾಡಿ ಪ್ಲಾಸ್ಟಿಕ್,ಬಾಳೆ ಎಲೆ ಅಥವಾ ಹಾಳೆ ಮುಚ್ಚಬೇಕು. ಮರುದಿನ ಬೆಳಗ್ಗೆ ನೋಡುವಾಗ ಗುಳಿತುಂಬಾ ನೀರು ತುಂಬಿರುತ್ತದೆ. ಇದನ್ನು ತೆಗೆದುಕೊಳ್ಳಬೇಕು.

ಬಾಳೆದಿಂಡಿನ ರಸ  ಕುಡಿಯುವುದರಿಂದ   ಕಿಡ್ನಿಯಲ್ಲಿನ ಕಲ್ಲು ಕರಗುತ್ತದೆ. ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ .ಇದರ ತಾಜಾ ನೀರನ್ನು ಹಾಗೆ ಕುಡಿಯುವುದು ಉತ್ತಮ ಅಥವಾ ಜೀರಿಗೆ, ಶುಂಠಿ ,ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು.  ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ ಇಲ್ಲದವರುಕೂಡಾ ಕುಡಿಯಬಹುದು. ಸಾಯಂಕಾಲದಿಂದ ಬೆಳಿಗ್ಗೆ ಆಗುವಾಗ ಐದರಿಂದ ಆರು ಆರು ಗ್ಲಾಸ್ ಅಂದರೆ ಸುಮಾರು ಒಂದು ಲೀಟರ್ ನಷ್ಟು ನೀರು ತುಂಬುತ್ತದೆ.  ಇದೊಂದು ಸಂಜೀವಿನಿ  ಆಹಾರವಾಗಿದೆ.

Advertisement

Advertisement
ಬರಹ :
ಕುಮಾರ ಪೆರ್ನಾಜೆ ಪುತ್ತೂರು
, ಹೆಚ್ಚಿನ ಮಾಹಿತಿಗೆ ಕರೆ ಮಾಡಿ ಮೋ:9480240643 .……ಮುಂದೆ ಓದಿ…..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರ್ ಪೆರ್ನಾಜೆ

ಕುಮಾರ್‌ ಪೆರ್ನಾಜೆ ಅವರು ಕೃಷಿಕರು. ಹವ್ಯಾಸಿ ಪತ್ರಕರ್ತರು, ಕೃಷಿ ಬರಹಗಾರರು. ಕೃಷಿಯಲ್ಲಿ ಹೊಸ ಚಿಂತನೆಗಳನ್ನು ಅಳವಡಿಸಿದವರು. ಕರ್ನಾಟಕ ಸರ್ಕಾರವು ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror