ಕಲ್ಪವೃಕ್ಷ ಎಂದಾಕ್ಷಣ ತೆಂಗು ಎಂದು ನಮಗೆ ನೆನಪಿಗೆ ಬರುತ್ತದೆ. ಆದರೆ ಬಾಳೆಯೂ ಕಲ್ಪವೃಕ್ಷವೇ. ಇದರ ಎಲ್ಲಾ ಭಾಗಗಳು ಉಪಯುಕ್ತವೇ ಆಗಿದೆ.
ಬಾಳೆಗೊನೆ ಮೋತೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು ಬಹಳ ಉಪಯುಕ್ತವಾಗಿದೆ. ಇದೀಗ ಒಂದು ಅಡಿ ಉದ್ದದ ದಿಂಡಿಗೂ ಬಹಳ ಡಿಮಾಂಡ್ ಇದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ದಿಂಡಿನ ಪಕೋಡ, ದೋಸೆ, ಇಡ್ಲಿ ಸಲಾಡ್,ಮೊಸರು ಗೊಜ್ಜು.. ಹೀಗೇ ನಾನಾ ವೈವಿಧ್ಯ ತಿನಿಸುಗಳು ಮಾಡಲಾಗುತ್ತದೆ. ದಿಂಡಿನ ನಾರಿನಿಂದ ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ ಇತ್ಯಾದಿಗಳ ತಯಾರಿಯಾಗುತ್ತದೆ. ಸೀರೆ, ಅಂಗಿ, ಬಟ್ಟೆಗಳು, ಪರಿಸರಸ್ನೇಹಿ ಹರ್ಬಲ್ ಮೆಡಿಸಿನ್ ಮಾಡಲಾಗುತ್ತದೆ.
ಬಾಳೆದಿಂಡಿನ ರಸವು ಮುಖ್ಯವಾಗಿ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಲು ರಾಮಬಾಣವಾಗಿದೆ .ಗ್ಯಾಸ್ಟ್ರಿಕ್ ಸಮಸ್ಯೆಗೆ, ಮೂತ್ರಪಿಂಡದ ಸಮಸ್ಯೆಗೆ ಹಾಗೂ ಎಸಿಡಿಟಿಯನ್ನು ಕಡಿಮೆ ಮಾಡಲು ಈ ರಸ ಉಪಯೋಗವಾಗಿದೆ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ.
ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಗುಳಿಯ ಆಕಾರದಲ್ಲಿ ಸಂಜೆ ಮಾಡಿ ಪ್ಲಾಸ್ಟಿಕ್,ಬಾಳೆ ಎಲೆ ಅಥವಾ ಹಾಳೆ ಮುಚ್ಚಬೇಕು. ಮರುದಿನ ಬೆಳಗ್ಗೆ ನೋಡುವಾಗ ಗುಳಿತುಂಬಾ ನೀರು ತುಂಬಿರುತ್ತದೆ. ಇದನ್ನು ತೆಗೆದುಕೊಳ್ಳಬೇಕು.
ಬಾಳೆದಿಂಡಿನ ರಸ ಕುಡಿಯುವುದರಿಂದ ಕಿಡ್ನಿಯಲ್ಲಿನ ಕಲ್ಲು ಕರಗುತ್ತದೆ. ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ .ಇದರ ತಾಜಾ ನೀರನ್ನು ಹಾಗೆ ಕುಡಿಯುವುದು ಉತ್ತಮ ಅಥವಾ ಜೀರಿಗೆ, ಶುಂಠಿ ,ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು. ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ ಇಲ್ಲದವರುಕೂಡಾ ಕುಡಿಯಬಹುದು. ಸಾಯಂಕಾಲದಿಂದ ಬೆಳಿಗ್ಗೆ ಆಗುವಾಗ ಐದರಿಂದ ಆರು ಆರು ಗ್ಲಾಸ್ ಅಂದರೆ ಸುಮಾರು ಒಂದು ಲೀಟರ್ ನಷ್ಟು ನೀರು ತುಂಬುತ್ತದೆ. ಇದೊಂದು ಸಂಜೀವಿನಿ ಆಹಾರವಾಗಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…